Tuesday, 16th October 2018

Recent News

2 days ago

ವಿಂಡೀಸ್ ಟೆಸ್ಟ್ ಸರಣಿ ಗೆಲುವಿನೊಂದಿಗೆ ನಿರ್ಮಾಣವಾಯ್ತು ಹಲವು ದಾಖಲೆ!

ಹೈದರಾಬಾದ್: ಅಂತಿಮ ಟೆಸ್ಟ್ ಪಂದ್ಯವನ್ನು 10 ವಿಕೆಟ್ ಅಂತರದಿಂದ ಗೆಲ್ಲುವ ಮೂಲಕ ಸತತ 7ನೇ ಬಾರಿ ವಿಂಡೀಸ್ ವಿರುದ್ಧ ಭಾರತ ಸರಣಿ ಗೆಲುವು ಪಡೆದಿದೆ. ಟೀಂ ಇಂಡಿಯಾ ವಿಂಡೀಸ್ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡುವ ಮೂಲಕ ತವರು ನೆಲದಲ್ಲಿ ಸತತ 10ನೇ ಸರಣಿಗಳಲ್ಲಿ ಗೆಲುವು ಪಡೆದಿದೆ. ವಿಶ್ವ ಕ್ರಿಕೆಟ್ ನಲ್ಲಿ ಆಸೀಸ್ ತಂಡ ಈ ಸಾಧನೆಯನ್ನು ಮಾಡಿದ್ದು, 1994 ರಿಂದ 2001ರವರೆಗೆ ಹಾಗೂ 2004 ರಿಂದ 2008ರ ಅವಧಿಯಲ್ಲಿ ಸತತ 10 ಸರಣಿಗಳಲ್ಲಿ ಗೆಲುವು ಪಡೆದಿತ್ತು. […]

2 days ago

ಟೀಂ ಇಂಡಿಯಾ ಪರ ಅಪರೂಪದ ದಾಖಲೆ ಬರೆದ ಪೃಥ್ವಿ ಶಾ

ಬೆಂಗಳೂರು: ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿರುವ ಪೃಥ್ವಿ ಶಾ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ವಿಂಡೀಸ್ ವಿರುದ್ಧ ಅಂತ್ಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗೆಲುವಿನ ರನ್ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ 72 ರನ್‍ಗಳ ಸುಲಭ...

ಆ್ಯಮಸ್ಟರ್ ಡಮ್‍ನಲ್ಲಿ ಪಾಸ್‍ಪೋರ್ಟ್ ಕಳೆದಿದೆ, ಹೆಲ್ಪ್ ಮಾಡಿ-ಪಾರುಪಲ್ಲಿ ಕಶ್ಯಪ್

2 days ago

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಪಾರುಪಲ್ಲಿ ಕಶ್ಯಪ್ ಅವರ ಪಾಸ್‍ಪೋರ್ಟ್ ವಿದೇಶದಲ್ಲಿ ಕಳ್ಳತನವಾಗಿದ್ದು, ಸಹಾಯ ಮಾಡಿ ಅಂತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ. ಆ್ಯಮಸ್ಟರ್ ಡಮ್‍ನಲ್ಲಿ ಶುಕ್ರವಾರ ರಾತ್ರಿ ನನ್ನ ಪಾಸ್‍ಪೋರ್ಟ್ ಕಳೆದಿದೆ. ಡೆನ್ಮಾರ್ಕ್...

ಮಿಸ್ಬಾ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ

3 days ago

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ...

ಪೃಥ್ವಿ ಶಾ ಆಟಕ್ಕೆ ಆಕರ್ಷಿತನಾಗಿದ್ದೇನೆ : ಕನ್ನಡಿಗ ಗುಂಡಪ್ಪ ವಿಶ್ವನಾಥ್

3 days ago

ಚೆನ್ನೈ: ಟೀಂ ಇಂಡಿಯಾ ಯುವ ಆಟಗಾರರ ಪೃಥ್ವಿ ಶಾ ಅವರ ಆಟದ ಶೈಲಿಗೆ ನಾನು ಬಹಳ ಆಕರ್ಷಿತನಾಗಿದ್ದು, ಇದು ಶಾ ವೃತ್ತಿಜೀವನದ ಆರಂಭ ದಿನಗಳಾದರೂ ಅವರ ಆಟವನ್ನು ನೋಡಲು ಇಷ್ಟವಾಗುತ್ತದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಜಿಆರ್ ವಿಶ್ವನಾಥ್ ಹೇಳಿದ್ದಾರೆ. ಚೆನ್ನೈನಲ್ಲಿ...

ಆನ್ ಫೀಲ್ಡ್ ನಲ್ಲೇ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ!

4 days ago

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬ ನಾಯಕ ವಿರಾಟ್ ಕೊಹ್ಲಿಗೆ ಮುತ್ತು ನೀಡಲು ಯತ್ನಿಸಿದ ಘಟನೆ ನಡೆದಿದೆ. ಕ್ರೀಡಾಂಗಣದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಇದ್ದರೂ ಕೂಡ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಯೊಬ್ಬ ಪಂದ್ಯದ...

ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

5 days ago

ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಟೂರ್ನಿಯ 2 ಪಂದ್ಯಗಳಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟ ಮಾಡಿದ್ದು, ಆಯ್ಕೆ ಸಮಿತಿ ದಿನೇಶ್ ಕಾರ್ತಿಕ್ ಅವರಿಗೆ ಕೋಕ್ ನೀಡಿ ಯುವ ಆಟಗಾರ ರಿಷಭ್ ಪಂತ್‍ರನ್ನು ಆಯ್ಕೆ ಮಾಡಿದೆ. ಏಷ್ಯಾಕಪ್‍ನಲ್ಲಿ ವಿಶ್ರಾಂತಿ...

ವಿಂಡೀಸ್ 2ನೇ ಟೆಸ್ಟ್ ಪಂದ್ಯದಲ್ಲೂ ಮಾಯಾಂಕ್‍ಗೆ ಸಿಗದ ಅವಕಾಶ- ನೆಟ್ಟಿಗರು ಗರಂ

5 days ago

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2ನೇ ಹಾಗೂ ಅಂತಿಮ ಪಂದ್ಯಕ್ಕೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಈ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದ ಮಯಾಂಕ್ ಮತ್ತೆ ಬೆಂಚ್ ಕಾಯಬೇಕಿದೆ. ಆ.12 ರಿಂದ ಹೈದರಾಬಾದ್ ಕ್ರೀಡಾಂಗಣದಲ್ಲಿ ಟೆಸ್ಟ್ ಆರಂಭವಾಗಲಿದ್ದು,...