Wednesday, 11th December 2019

6 mins ago

ಲಗೋರಿ ಆಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ/ಚಿಕ್ಕೋಡಿ: ಉಪ ಚುನಾವಣೆ ಬಳಿಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಶಾಲಾ ಮಕ್ಕಳೊಂದಿಗೆ ಲಗೋರಿ ಆಡಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಮಾವನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದ್ದರು. ಉಪಚುನಾವಣೆಯಲ್ಲಿ ಫೇಲ್ ಆದ್ರೂ ಸತೀಶ್ ಜಾರಕಿಹೊಳಿ ಇಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮಕ್ಕಳೊಂದಿಗೆ ಲಗೋರಿ ಆಡಿ ಆಟದಲ್ಲಿ ಸಕ್ಸಸ್ ಆಗಿದ್ದಾರೆ. ಗೋಕಾಕ್‍ನ ರಾಜಕೀಯದಲ್ಲಿ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ತೊಡೆ […]

18 mins ago

ಮುಂದಿನ ವರ್ಷದಿಂದ ಬ್ಯಾರಿ ಭಾಷೆ ತೃತೀಯ ಭಾಷೆಯಾಗಿ ಪಠ್ಯ ಪುಸ್ತಕಕ್ಕೆ

ಮಂಗಳೂರು: ರಾಜ್ಯದ ಮುಸ್ಲಿಂ ಸಮುದಾಯದ ಮಾತೃ ಭಾಷೆಯಾದ ಬ್ಯಾರಿ ಭಾಷೆ ಇನ್ನು ಪಠ್ಯಪುಸ್ತಕದಲ್ಲಿ ಅಚ್ಚಾಗಲಿದ್ದು, ಐಚ್ಛಿಕ ತೃತೀಯ ಭಾಷೆಯಾಗಲಿದೆ. ಮುಂದಿನ ಶೈಕ್ಷಣಿಕ ವರ್ಷ(2020-21)ದಿಂದ ಆರನೇ ತರಗತಿಯಿಂದ ಪಿಯುಸಿ ತನಕ ತೃತೀಯ ಭಾಷೆಯಾಗಿ ಬ್ಯಾರಿ ಭಾಷೆಯನ್ನು ಅನುಮೋದಿಸಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ. ಈಗಾಗಲೇ 12 ತಜ್ಞರನ್ನು...

ಬೆಂಗ್ಳೂರಲ್ಲಿ ಮನೆ ಮಾಡಿದ್ಮೇಲೆ ಮದ್ವೆ ಮಾತು: ರಕ್ಷಿತ್ ಶೆಟ್ಟಿ

1 hour ago

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಅವನೇ ಶ್ರೀಮನ್ನಾಯಾರಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಇದರ ನಡುವೆಯೇ ರಕ್ಷಿತ್ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ...

3 ವರ್ಷ ಕಳೆದರೂ ದಾಖಲೆಗಳಲ್ಲಿಯೇ ನಿರಾಶ್ರಿತರ ಸೂರು

2 hours ago

ಕೊಪ್ಪಳ: ವಿರುಪಾಪುರ ಗಡ್ಡೆ ನಿರಾಶ್ರಿತರಿಗೆ ತಾಲೂಕು ಆಡಳಿತದ ವತಿಯಿಂದ ಉಚಿತ ನಿವೇಶನಗಳ ವಿತರಣೆ ಮಾಡಬೇಕಾದ ಕಾಯಕವು 3 ವರ್ಷಗಳು ಕಳೆದರೂ ಸಹ ದಾಖಲೆಗಳಲ್ಲಿಯೇ ಉಳಿದುಕೊಂಡಿದೆ. ಇದರಿಂದಾಗಿ ನಿರಾಶ್ರಿತರು ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳದ ಗಂಗಾವತಿ ತಾಲೂಕಿನ...

ಬಂಡೀಪುರ ಅರಣ್ಯದಲ್ಲಿ ಆನೆ ಮೃತಪಟ್ಟಿದ್ದನ್ನು ತಿಳಿಸಿದ ಹದ್ದುಗಳು

2 hours ago

ಚಾಮರಾಜನಗರ: ಹದ್ದುಗಳ ಹಾರಾಟದಿಂದಾಗಿ ಆನೆಯೊಂದು ಮೃತಪಟ್ಟಿರುವುದು ತಿಳಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕಾಡಿನೊಳಗೆ ಗಂಡು ಆನೆಯೊಂದು ಮೃತಪಟ್ಟಿದೆ. 50 ವರ್ಷದ ಆನೆಯ ಕಳೇಬರವು...

ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

2 hours ago

ಕಾರವಾರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪತಂಗಗಳ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಡಿ. 14 ಹಾಗೂ 15 ರಂದು ಬೆಂಗಳೂರು ಬಟರ್ ಫ್ಲೈ ಕ್ಲಬ್ (ಬಿಬಿಸಿ)ಸಹಕಾರದೊಂದಿಗೆ ಆಯೋಜಿಸಲು ಸಿದ್ಧತೆ ನಡೆದಿದೆ. ರಾಜ್ಯದಲ್ಲಿ...

ಪವಾಡದಂತೆ ನಡೆದ ಗುಡ್ಡಪ್ಪನ ಆಯ್ಕೆ- ನೇಮಕ ವಿರೋಧಿಸಿದವರನ್ನು ಅಟ್ಟಾಡಿಸಿದ ಬಸವ

2 hours ago

ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕಅರಸಿನಕೆರೆ ಬಸವ ತಂಪಿನ ಮಾರಮ್ಮನಿಗೆ ಗುಡ್ಡಪ್ಪ (ಪೂಜಾರಿ)ಯನ್ನು ಪವಾಡ ರೀತಿಯಲ್ಲಿ ನೇಮಕ ಮಾಡಿತು. ಗ್ರಾಮದ ಹೊಸಹಳ್ಳಿಯಲ್ಲಿ ಚನ್ನಪ್ಪ ಎಂಬವರ ಮನೆ ಪಕ್ಕದಲ್ಲಿ ತಂಪಿನ ಮಾರಮ್ಮನ ಪುಟ್ಟ ಗುಡಿಯಿತ್ತು. ಇತ್ತೀಚೆಗೆ ಮಾರಮ್ಮ ಚನ್ನಪ್ಪರ ಪುತ್ರ ಮನ ಕನಸಿನಲ್ಲಿ ಬಂದು...

ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆಗೆ ತೀವ್ರ ಕಟ್ಟೆಚ್ಚರ

3 hours ago

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆ ಕುರಿತು ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಾದ ತಯಾರಿಸುವ ಅಡುಗೆ ಮನೆ, ಲಾಡು ತಯಾರಿಕಾ ಘಟಕ, ದಾಸೋಹ ಭವನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ...