Tuesday, 16th October 2018

Recent News

59 mins ago

ಉಡುಪಿ, ಹಾವೇರಿ, ಧಾರವಾಡದಲ್ಲಿ ಭಾರೀ ಮಳೆ

ಉಡುಪಿ/ಹಾವೇರಿ/ಧಾರವಾಡ: ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಉಡುಪಿಯಲ್ಲಿ ಭಾರೀ ಗಾಳಿ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಗುಡುಗು ಸಹಿತವಾಗಿ ಧಾರಾಕಾರ ವರ್ಷಧಾರೆ ಸುರಿಯುತ್ತಿದೆ. ಬಿರುಸಿನ ಮಳೆಯಿಂದ ವಾತಾವರಣ ಬಹಳ ತಂಪಾಗಿದೆ. ವಾಯುಭಾರ ಕುಸಿತದಿಂದ ತೂಫಾನ್ ಆಗುತ್ತೆ ಅಂತ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿತ್ತು. ಆದರೆ ಇಲಾಖೆ ಹೇಳಿದ ವಾರದ ನಂತರ ಅಬ್ಬರದ ಮಳೆ ಸುರಿಯುತ್ತಿದೆ. ನಗರದಾದ್ಯಂತ ವಾಹಸ ಸಂಚಾರ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಆಗುತ್ತಿದ್ದು, 7 […]

3 hours ago

ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣ – ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ!

ಉಡುಪಿ: ಕಲೆ ಸಾಹಿತ್ಯ ಅಂತ ಮೂರು ಹೊತ್ತು ತೊಡಗಿಸಿಕೊಂಡಿದ್ದವ ನೇಣಿಗೆ ಶರಣಾಗಿ ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದ್ದಾನೆ. ತನ್ನ ಸಾವಿಗೆ ಉಗ್ರ ಸಂಘಟನೆಯೇ ಕಾರಣ ಅನ್ನೋ ಡೆತ್ ನೋಟ್ ಮತ್ತಷ್ಟು ಚರ್ಚೆಗೆ ಕಾರಣವಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ. ಕುಂದಾಪುರದ 23 ವರ್ಷದ ವಿವೇಕ್ ಯಾವ ಸಂಘಟನೆಗೂ ಸೇರದೆ ದೇಶಭಕ್ತಿ ಬೆಳೆಸಿಕೊಂಡಿದ್ದನು....

ವಿದ್ಯಾಪ್ರಸನ್ನ ಶ್ರೀಗಳಿಂದ ಉಪವಾಸ ಹೋರಾಟ

2 days ago

ಉಡುಪಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ಜಟಾಪಟಿಯಲ್ಲಿ ವಿದ್ಯಾಪ್ರಸನ್ನ ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಶುರು ಮಾಡಿದ್ದು, ನ್ಯಾಯ ಸಿಗುವವರೆಗೆ ಅನ್ನಾಹಾರ ತ್ಯಜಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೇಜಾವರ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀಗಳು ಕೂಡಲೇ ಉಪವಾಸ ಕೈಬಿಡಬೇಕು ಎಂದು...

ವೈದ್ಯಾಧಿಕಾರಿಯಿಂದ ಕಿರುಕುಳ ಆರೋಪ-ಡಿಸಿಗೆ ಪತ್ರ ಬರೆದು ಸಹಾಯಕ ಅಧೀಕ್ಷಕ ಆತ್ಮಹತ್ಯೆಗೆ ಯತ್ನ

4 days ago

ಉಡುಪಿ: ಬ್ರಹ್ಮಾವರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಿಂದ ಕಿರುಕುಳ ಆರೋಪ ಮಾಡಿ ಹೆಲ್ತ್ ಇನ್ಸ್ ಪೆಕ್ಟರ್ ಆತ್ಮಹತ್ಯೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಹಿರಿಯ ಅಧಿಕಾರಿಯಿಂದ ತನಗಾಗಿರುವ ಕಿರುಕುಳವನ್ನು ಜಿಲ್ಲಾಧಿಕಾರಿಗೆ ಪತ್ರದಲ್ಲಿ ಬರೆದಿಟ್ಟು ಶಿವಮೊಗ್ಗ ಮೂಲದ ನಾಗರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ....

ಅಶ್ವತ್ಥ ಕಟ್ಟೆಯ ಮುಂದೆ ಮೂಕಜ್ಜಿಯ ಕನಸಿನ ಅನಾವರಣ- ಜನವರಿಯಲ್ಲಿ ಚಿತ್ರ ರಿಲೀಸ್

6 days ago

ಉಡುಪಿ: ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ ಶೇಷಾದ್ರಿಯವರು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕೃತಿ ಮೂಕಜ್ಜಿಯ ಕನಸನ್ನು ಚಲನಚಿತ್ರ ಮಾಡಲು ಹೊರಟಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದೆ, ಬೆಳ್ಳಿ ತೆರೆಯ ಮನೋಜ್ಞ ನಟಿ ಬಿ. ಜಯಶ್ರೀ ಮೂಕಜ್ಜಿಯಾಗಿ ಕಥೆಗೆ ಜೀವ ತುಂಬಲಿದ್ದಾರೆ....

ಸಮುದ್ರಸ್ನಾನದ ವೇಳೆ ಅಲೆಯ ಹೊಡೆತಕ್ಕೆ ಸಿಕ್ಕಿ ಎಸೆಯಲ್ಪಟ್ಟ ಬೈಂದೂರು ಶಾಸಕ!

7 days ago

ಉಡುಪಿ: ಮಹಾಲಯ ಸಮುದ್ರ ಸ್ನಾನದ ವೇಳೆ ಅರಬ್ಬಿ ಸಮುದ್ರದ ದೊಡ್ಡ ಅಲೆಗೆ ಸಿಕ್ಕಿ ಬೈಂದೂರು ಶಾಸಕ ಜಾರಿ ಬಿದ್ದಿದ್ದಾರೆ. ಉಡುಪಿಯಲ್ಲಿ ಇಂದು ಮಧ್ಯಾಹ್ನ ಸಮುದ್ರ ಪ್ರಕ್ಷುಬ್ಧವಾಗಿರುವಾಗಲೇ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸಮುದ್ರಕ್ಕೆ ಇಳಿದಿದ್ದರಿಂದ ಈ ಘಟನೆ ನಡೆದಿದೆ. ಇವತ್ತು ಮಹಾಲಯ...

ಹಳೆ ಫೋನ್ ದೂರ ಎಸೆದವರಿಗೆ ಹೊಸ ಸ್ಮಾರ್ಟ್ ಫೋನ್- ಸ್ಪರ್ಧೆಯಲ್ಲಿ ಭಾಗವಹಿಸಲು ಮುಗಿಬಿದ್ದ ಜನ!

1 week ago

ಉಡುಪಿ: ಮೊಬೈಲ್ ಜಮಾನಾದಲ್ಲಿ ನಾವಿದ್ದೇವೆ. ಬೆಳಗ್ಗೆ ಎದ್ದು ರಾತ್ರಿ ಮಲಗೋ ತನಕ ಮೊಬೈಲ್ ಇಲ್ಲದೆ ಯಾವುದೂ ಆಗುವುದಿಲ್ಲ. ಆದರೆ ಜಿಲ್ಲೆಯ ಕುಂದಾಪುರದಲ್ಲಿ ಜನಕ್ಕೆಲ್ಲ ಮೊಬೈಲ್ ಮೇಲೆ ಜಿಗುಪ್ಸೆ ಬಂದಂತೆ ಇತ್ತು. ತಮ್ಮ ಬಳಿಯಿದ್ದ ಮೊಬೈಲನ್ನು ಜೇಬಿಂದ ತೆಗೆದು ಜನ ಎತ್ತಿ ಎತ್ತಿ...

ಫಸ್ಟ್ ಟೈಂ ರಾಜ್ಯ ಹೆದ್ದಾರಿಗೂ ಟೋಲ್- ಸಮ್ಮಿಶ್ರ ಸರ್ಕಾರದ ಪ್ರಯೋಗಕ್ಕೆ ಜನಾಕ್ರೋಶ

1 week ago

ಉಡುಪಿ: ರಾಜ್ಯ ಸಮ್ಮಿಶ್ರ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಗೇಟ್ ನಿರ್ಮಿಸಲು ಎಲ್ಲಾ ಸಿದ್ಧತೆ ಮಾಡಿದೆ. ಸರ್ಕಾರ ಸ್ಥಾಪನೆ ಮಾಡಲು ಹೊರಟಿರುವ ಟೋಲ್ ವಿರುದ್ಧ ಉಡುಪಿಯ ನಲವತ್ತು ಹಳ್ಳಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಕಾಪು ತಾಲೂಕನ್ನು...