Friday, 20th July 2018

Recent News

8 months ago

ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..!

ತುಮಕೂರು: ಆರತಕ್ಷತೆಯಲ್ಲಿದ್ದ ವಧು ಮುಹೂರ್ತದ ಸಮಯದಲ್ಲಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ದೇವಸ್ಥಾನದಲ್ಲಿ ನಡೆದಿದೆ. ಕಾವ್ಯ(ಹೆಸರು ಬದಲಾಯಿಸಲಾಗಿದೆ) ಮದುವೆ ಮಂಟಪದಿಂದ ಓಡಿ ಹೋಗಿರುವ ವಧು. ಇಂದು ಬೆಳಗ್ಗೆ 9-30 ಕ್ಕೆ ಧಾರೆ ಮುಹೂರ್ತ ಇತ್ತು. ಆದರೆ ರಾತ್ರಿ ನಡೆದ ಆರತಕ್ಷತೆಯಲ್ಲಿ ಖುಷಿಯಿಂದಲೇ ಇದ್ದ ವಧು ಕಾವ್ಯಾ ರಾತ್ರೋ ರಾತ್ರಿ ಕಾಣೆಯಾಗಿದ್ದಾರೆ. ಮೂಲತಃ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಕಾವ್ಯಾ ಅವರಿಗೆ ಯಡಿಯೂರು ನಿವಾಸಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ರಾಮಕೃಷ್ಣ ಅವರ ಜೊತೆ ಕುಟುಂಬದವರು […]

8 months ago

ಸಿಎಂ ಎಲೆಕ್ಷನ್ ವೇಳೆ ಕಾರ್ ಟೈರ್‍ನಲ್ಲಿ ಸಾಗಿಸಿದ್ರಂತೆ ಕಂತೆ ಕಂತೆ ನೋಟು- ಜಿಪಂ ಸದಸ್ಯನಿಂದ ಹೊಸ ಬಾಂಬ್

ತುಮಕೂರು: ಜಿಲ್ಲೆಯ ಹೊನವಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯ ಜಿ.ನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ. ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್‍ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಸೋಮವಾರದಂದು ತಿಪಟೂರಿನಲ್ಲಿ ನಡೆದ...

ಕಿವುಡ-ಮೂಕ ಮಕ್ಕಳೊಂದಿಗೆ ಸಂಸಾರದ ಬಂಡಿ ಎಳೆಯುತ್ತಿರೋ ಲಕ್ಷ್ಮಮ್ಮರಿಗೆ ಬೇಕಿದೆ ಮನೆ

9 months ago

ತುಮಕೂರು: ಪ್ರಾಣಿಗಳು ಕೂಡಾ ವಾಸವಿರಲು ಸಾಧ್ಯವಿಲ್ಲದ ಗುಡಿಸಲು. ಮಳೆ ಬಂದರಂತೂ ಜಾಗರಣೆ ಮಾಡದೇ ವಿಧಿ ಇಲ್ಲ. ಒಟ್ಟು ಮೂವರು ಇದೇ ಮನೆಯಲ್ಲಿ ವಾಸಿಸಬೇಕಾದ ದುಃಸ್ಥಿತಿ. ಇದೀಗ ಕುಟುಂಬವೊಂದು ಸಹಾಯ ಕೇಳಿಕೊಂಡು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದೆ. ಜಿಲ್ಲೆಯ ಕೊರಟಗೆರೆ ಪಟ್ಟಣದ...

ತಲೆ ತಿರುಕ, ಬುರುಡೆ ದಾಸ ಸಿಎಂರಿಂದ ರಾಜ್ಯಕ್ಕೆ ಮೋಸವಾಗ್ತಿದೆ: ಬಿಎಸ್‍ವೈ ವಾಗ್ದಾಳಿ

9 months ago

ತುಮಕೂರು: ತಲೆ ತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಮ್ಮ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪರಿವರ್ತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸರ್ಕಾರದ ಖಜಾನೆಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಮುಖಂಡರ ಗರಿಭೀ...

ಹೆಣ್ಮಕ್ಕಳಿರುವ ಮನೆಗೆ ಹೋಗಿ ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದ ಕಾಮುಕನಿಗೆ ಬಿತ್ತು ಗೂಸಾ

9 months ago

ತುಮಕೂರು: ಹೆಣ್ಣು ಮಕ್ಕಳಿರುವ ಮನೆಗೆ ಮಧ್ಯರಾತ್ರಿಯಲ್ಲಿ ಹೋಗಿ ಬಾಗಿಲು ಬಡಿಯುತ್ತಿದ್ದ ಕಾಮುಕನಿಗೆ ಗೂಸಾ ಕೊಟ್ಟಿರುವ ಘಟನೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಭೀಮಸಂದ್ರ ಗ್ರಾಮದ ನಿವಾಸಿಯಾದ ಗಿರೀಶ್ ಎಂಬ ಕಾಮುಕ ಎರ್ರಾಬಿರ್ರಿ ಏಟು ತಿಂದ ಮಹಾಶಯ. ಈತ ಕಳೆದ ಮೂರ್ನಾಲ್ಕು...

ಯಡಿಯೂರು ಸಿದ್ದಲಿಂಗೇಶ್ವರನಿಗೆ ಬಿಎಸ್‍ವೈ ಪೂಜೆ – ಕೆಲವೇ ಕ್ಷಣಗಳಲ್ಲಿ 2ನೇ ದಿನದ ಯಾತ್ರೆ

9 months ago

ತುಮಕೂರು: ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಇಂದು 2ನೇ ದಿನ. ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಚಿಕ್ಕನಾಯಕನಹಳ್ಳಿಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಂಚರಿಸಲಿದೆ. ಗುರುವಾರ ರಾತ್ರಿ ಬಿ.ಎಸ್ ಯಡಿಯೂರಪ್ಪ ಮತ್ತವರ ಟೀಂ ಯಡಿಯೂರು ಕ್ಷೇತ್ರದಲ್ಲಿ ವಾಸ್ತವ್ಯ...

ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಟಾಪಟಿ

9 months ago

ತುಮಕೂರು: ಪರಿವರ್ತನಾ ಯಾತ್ರೆಗೆ ಹೊರಟ ಬಿಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿರುವ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಶಾಲಾ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸಾಧನೆಯ...

ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

9 months ago

ತುಮಕೂರು: ನಿವೃತ್ತಿ ಸಂದರ್ಭದಲ್ಲಿ ಬಂದ ಹಣ ಕಿತ್ತುಕೊಂಡು ವೃದ್ಧ ತಂದೆಯನ್ನು ಮಕ್ಕಳು ಬೀದಿಗೆ ತಳ್ಳಿರೋ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೆಎಸ್‍ಆರ್‍ಟಿಸಿ ನಿವೃತ್ತ ನೌಕರರೊಬ್ಬರು ಮಕ್ಕಳಿಂದ ಮನೆ ಮಠ, ಪಿಂಚಣಿ ಹಣ ಎಲ್ಲವನ್ನೂ ಕಳೆದುಕೊಂಡು ಫುಟ್ ಪಾತ್...