Friday, 23rd August 2019

8 hours ago

ಬಿಎಸ್‍ವೈರನ್ನ ಹಾಡಿ ಹೊಗಳಿದ ಶಾಸಕ ರೇಣುಕಾಚಾರ್ಯ

– ಲಕ್ಷ್ಮಣ ಸವದಿಗೆ ಈಗ ಸಚಿವ ಸ್ಥಾನ ಕೊಟ್ಟಿದ್ದು ಸರಿಯಲ್ಲ ತುಮಕೂರು: 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಇದ್ದರು. 21ನೇ ಶತಮಾನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇದ್ದಾರೆ. ಅವರು ಆಧುನಿಕ ಬಸವಣ್ಣನವರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಅವರು ಧರ್ಮವನ್ನು ನಂಬಿದವರು. ಬಿಎಸ್‍ವೈರ ಮೇಲೆ ನಾಡಿನ ಮಠಾಧೀಶರ ಹಾಗೂ ಜನರ ಆಶೀರ್ವಾದ ಇದೆ. ಯಡಿಯೂರಪ್ಪನವರು ಮೂರು ವರ್ಷ […]

2 days ago

ಸಿದ್ದಗಂಗಾ ಮಠಕ್ಕೆ ಸಿಎಂ ಭೇಟಿ – ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ದೇಣಿಗೆ

ತುಮಕೂರು: ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದಿದ್ದಾರೆ. ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ 7ನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮ ಇತ್ತು. ಹಾಗಾಗಿ ಸಿಎಂ ಮಠಕ್ಕೆ ಧಿಡೀರ್ ಭೇಟಿ ನೀಡಿದ್ದಾರೆ. ಮೊದಲು ಗದ್ದುಗೆ ದರ್ಶನ ಪಡೆದು ಪೂಜೆ...

ಎಚ್‍ಡಿಕೆ ಒಬ್ಬ ಲಜ್ಜೆಗೆಟ್ಟ ಮಾಜಿ ಸಿಎಂ, ನನ್ನ ಫೋನ್ ಟ್ಯಾಪ್ ಆಗಿದೆ – ಕೆ.ಎನ್.ರಾಜಣ್ಣ

4 days ago

ತುಮಕೂರು: ನನ್ನದು ಮತ್ತು ನನ್ನ ಮಗ ರಾಜೇಂದ್ರನ ಫೋನ್ ಕೂಡ ಕದ್ದಾಲಿಕೆ ಆಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ನಗದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ನಮ್ಮ ಕುಟುಂಬದ...

ನನಗೆ 3 ಬಾರಿ ಸಿಎಂ ಆಗುವ ಅವಕಾಶವಿತ್ತು – ನೋವು ಹೇಳಿಕೊಂಡ ಜಿ.ಪರಮೇಶ್ವರ್

4 days ago

ತುಮಕೂರು: ರಾಜ್ಯದ ಜನರ ಸೇವೆ ಮಾಡಲು ನನಗೆ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆದರೆ ರಾಜಕೀಯ ಪ್ರಹಸನದ ನಡುವೆ ನನಗೆ ಅಂತಹ ಅವಕಾಶ ಕೈತಪ್ಪಿ ಹೋಯಿತು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ...

ನಡೆದಾಡುವ ದೇವರ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರ

4 days ago

ತುಮಕೂರು: ಶಿವೈಕ್ಯರಾದ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ. ಶ್ರೀಗಳು ಲಿಂಗೈಕ್ಯರಾದ ಗದ್ದುಗೆಯ ನೆಲಮಾಳಿಗೆ ಈಗ ಧ್ಯಾನ ಮಂದಿರವಾಗಿ ಬದಲಾಗಿದೆ. ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬಂದು ಧ್ಯಾನಾಸಕ್ತರಾಗಿ ಧ್ಯಾನದಲ್ಲಿ ಶಿವಕುಮಾರ ಶ್ರೀಗಳನ್ನು ಕಂಡು ಪುನೀತರಾಗುತ್ತಿದ್ದಾರೆ. ಶಿವೈಕ್ಯ ಶಿವಕುಮಾರ...

ಆಂಜನೇಯನ ಹೃದಯದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

6 days ago

ತುಮಕೂರು: ಆಂಜನೇಯನ ಹೃದಯದಲ್ಲಿ ಶ್ರೀರಾಮ ನೆಲೆಸಿದ್ದಾನೆ ಅನ್ನುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ತುಮಕೂರಿನಲ್ಲಿ ಆಂಜನೇಯ ದೇವರ ಹೃದಯ ಕಮಲದಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದೆ. ಕೇವಲ ಹೃದಯದಲ್ಲಿ ಮಾತ್ರವಲ್ಲ ಆಂಜನೇಯ ಸ್ವಾಮಿಯ ಬಲಗೈಯಲ್ಲೂ ತಿರಂಗ ಹಾರಾಡಿದೆ. ತುಮಕೂರು ನಗರದ ಹನುಮಂತಪುರದ ಬಯಲು...

ಲೈಟ್ ಕಂಬಕ್ಕೆ ಡಿಕ್ಕಿ- ಹೊತ್ತಿ ಉರಿದ ಆಯಿಲ್ ಟ್ಯಾಂಕರ್

6 days ago

ತುಮಕೂರು: ಲೈಟ್ ಕಂಬಕ್ಕೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದು ಲಾರಿ ಹೊತ್ತಿ ಉರಿದಿರುವ ಘಟನೆ ಗುಬ್ಬಿ ತಾಲೂಕಿನ ಸೋಮಾಲಪುರ ಹೆದ್ದಾರಿ 84 ರಲ್ಲಿ ನಡೆದಿದೆ. ಸಿರಾ ಮಾರ್ಗವಾಗಿ ಮೈಸೂರಿಗೆ ಹೋಗುತ್ತಿದ್ದ ಟ್ಯಾಂಕರ್, ದಾರಿ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಲೈಟ್...

ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಪ್ರೇಯಸಿಯ ಕೊಲೆಗೆ ಯತ್ನ

1 week ago

ತುಮಕೂರು: ಮದುವೆ ತಡವಾಗಿ ಆಗೋಣ ಎಂದಿದ್ದಕ್ಕೆ ಜಿ.ಪಂ ಸದಸ್ಯೆಯ ಮಗ ತನ್ನ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ. 24 ವರ್ಷದ ಮಹಾವೀರ ಭಕ್ತ ಗುರುನಾನಕ್ ಎಂಬ ಹುಚ್ಚು...