Sunday, 19th August 2018

3 days ago

ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ಪ್ರಸಿದ್ಧ ಮಂಡಗದ್ದೆ ಪಕ್ಷಿಧಾಮದಲ್ಲಿ ನೀರಿನ ರಭಸಕ್ಕೆ ಸಾವಿರಾರು ಪಕ್ಷಿಗಳು ಕೊಚ್ಚಿ ಹೋಗಿವೆ. ಪ್ರಸಿದ್ಧ ಪಕ್ಷಿಧಾಮ ಮಂಡಗದ್ದೆಯಲ್ಲೀಗ ಶೋಕ ಮಡುಗಟ್ಟಿದ್ದು, ಪ್ರತಿ ವರ್ಷ ಸಂತಾನಭಿವೃದ್ಧಿಗೆ ಬರುವ ಸಾವಿರಾರು ಪಕ್ಷಿಗಳು ತುಂಗೆಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ನಿರಂತರ ಮಳೆಯಿಂದಾಗಿ ತುಂಗಾ ನದಿಯು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಲ್ಲಿ ಇಲ್ಲಿನ ಸಾವಿರಾರು ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ. ಪ್ರತಿ ವರ್ಷ ಉತ್ತರ ಭಾರತದಿಂದ ಮೇ ಹಾಗೂ […]

5 days ago

ಭದ್ರಾ ಡ್ಯಾಂ ಎಲ್ಲ ಗೇಟ್ ಓಪನ್: 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಶಿವಮೊಗ್ಗ: ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಒಳ ಬರುತ್ತಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು ಹೊರ ಹರಿವಿನ ಮಟ್ಟವನ್ನು ಹೆಚ್ಚಿಸಿದ್ದಾರೆ. ಆದರೆ ಇತ್ತ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. 90 ಸಾವಿರ ಕ್ಯೂಸೆಕ್ ಒಳಹರಿವು ಇರುವುದರಿಂದ ಜಲಾಶಯದ ಎಲ್ಲಾ ಗೇಟುಗಳ ಮೂಲಕ 80 ಸಾವಿರ ಕ್ಯೂಸೆಕ್ ನೀರನ್ನು...

ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ನವವಿವಾಹಿತೆ ಆತ್ಮಹತ್ಯೆ!

2 weeks ago

ಶಿವಮೊಗ್ಗ: ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಶೆಟ್ಟಿಕೆರೆಯ ಜ್ಯೋತಿ(22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಮದುವೆಯಾಗಿ ನಾಲ್ಕು ತಿಂಗಳಲ್ಲಿ ವರದಕ್ಷಿಣೆ...

ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!

2 weeks ago

ಶಿವಮೊಗ್ಗ: ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದೇ ಖ್ಯಾತಿಗಳಿಸಿರುವ ಪುರಂದರದಾಸರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರದೇಶ ಎಂದು ಸಂಶೋಧಕರು ಗುರುತಿಸಿದ್ದಾರೆ. ಇದೂವರೆಗೂ ಮಹಾರಾಷ್ಟ್ರದ ಪುರಂದರಘಡ ಇವರ ಮೂಲಸ್ಥಾನ ಎಂದು ಗುರುತಿಸಿಲಾಗಿತ್ತು. ಆದರೆ, ಪುರಂದರಗಡದಲ್ಲಿ ಪುರಂದರ ಎಂಬ...

ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಸಂಭ್ರಮ

2 weeks ago

ಶಿವಮೊಗ್ಗ: ನಗರದ ಪ್ರಸಿದ್ಧ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಸಂಭ್ರಮ – ಸಡಗರದೊಂದಿಗೆ ನಡೆಯುತ್ತಿದೆ. ಈ ಜಾತ್ರೆಯು ಆಷಾಢದ ಕೊನೆಯ ಭಾಗದಲ್ಲಿ ನಡೆಯುತ್ತದೆ. ಮುಖ್ಯವಾಗಿ ತಮಿಳರ ಆರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ವಿಶೇಷ ಪೂಜೆ, ಹರಕೆ ಒಪ್ಪಿಸುವ ಕಾರ್ಯ...

ಗಾಂಜಾ ಬೆಳೆ ಪತ್ತೆಹಚ್ಚಲು ಡ್ರೋನ್ ಮೊರೆಹೋದ ಅಧಿಕಾರಿಗಳು

3 weeks ago

ಶಿವಮೊಗ್ಗ: ಮಲೆನಾಡಿನ ಹಲವು ಭಾಗಗಳಲ್ಲಿ ಬೆಳೆಗಳ ನಡುವೆ ವ್ಯಾಪಕವಾಗಿ ಗಾಂಜಾ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಗಾಂಜಾ ಬೆಳೆಯನ್ನು ಪತ್ತೆಹಚ್ಚಲು ಅಬಕಾರಿ ಇಲಾಖೆಯ ಅಧಿಕಾರಿಗಳು ಡ್ರೋನ್ ಕ್ಯಾಮೆರಾದ ಮೊರೆ ಹೋಗಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಗಾಂಜಾ ಬೆಳೆಯಲಾಗುತ್ತಿದ್ದು, ಜೋಳ, ಚೆಂಡು ಹೂ ಇತ್ಯಾದಿ...

ನಾಲ್ಕು ವರ್ಷಗಳ ನಂತ್ರ ಅಂಜನಾಪುರ ಡ್ಯಾಂನ ಉದ್ಯಾನವನ ಓಪನ್

3 weeks ago

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಇದೂವರೆಗೂ ಜಲಾಶಯದಿಂದ ಖ್ಯಾತಿಗಳಿಸಿತ್ತು. ಈಗ ಇಲ್ಲಿ ನಿರ್ಮಾಣವಾಗಿರುವ ವಿಶಿಷ್ಟ ಉದ್ಯಾನವನದಿಂದಾಗಿ ಖ್ಯಾತಿಗಳಿಸುತ್ತಿದೆ. ಅಂಜನಾಪುರ ಡ್ಯಾಂ ಆವರಣದಲ್ಲಿ ನಾಲ್ಕು ವರ್ಷದ ಹಿಂದೆ ಆರಂಭಗೊಂಡ ಉದ್ಯಾನವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಈ ವರ್ಷದಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆದಿದೆ....

ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!

3 weeks ago

ಶಿವಮೊಗ್ಗ: ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಕಾರಿನಲ್ಲೇ ಪ್ರಯಾಣಿಸಿದ್ದ ಹಾವನ್ನು ಉರಗ ತಜ್ಞರಾದ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಬಿದರಕೊಪ್ಪದ ಶಿವಕುಮಾರ್ ನಾಯ್ಕ ಎಂಬವರು ತಮ್ಮ ತೋಟದಿಂದ ಬಾಳೆಗೊನೆ ಹಾಕಿಕೊಂಡು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಶಿವಮೊಗ್ಗಕ್ಕೆ ತಲುಪುತ್ತಿದ್ದಂತೆ ಕಾರಿನಲ್ಲಿ ಹಾವು...