Tuesday, 16th October 2018

2 days ago

ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

ರಾಯಚೂರು: ತೆಲಂಗಾಣ ಕರ್ನಾಟಕ ಗಡಿಯಲ್ಲಿ ಭೀಮಾ ಪುಷ್ಕರದ ಸಂಭ್ರಮ ಮನೆಮಾಡಿದ್ದು, 12 ವರ್ಷಕ್ಕೆ ಒಮ್ಮೆ ಬರುವ ಭೀಮಾ ಪುಷ್ಕರದಲ್ಲಿ ಪುಣ್ಯ ಸ್ನಾನ ಮಾಡಲು ಜನ ದೂರದ ಊರುಗಳಿಂದ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಭೀಮಾನದಿ ಹರಿಯುವುದಿಲ್ಲವಾದರೂ ತೆಲಂಗಾಣ ಗಡಿಯಲ್ಲಿ ಭೀಮಾ-ಕೃಷ್ಣ ಸಂಗಮವಾಗುವುದರಿಂದ ಪುಷ್ಕರಕ್ಕೆ ಮಹತ್ವ ಬಂದಿದೆ. ನದಿಯಲ್ಲಿ ಮಾಡುವ ಸ್ನಾನ ಪುಣ್ಯ ಸ್ನಾನ ಅಂತಲೇ ಮೊದಲಿನಿಂದಲೂ ನಂಬಿಕೆ ಇದೆ. ಆದರೆ ಪುಷ್ಕರದ ವೇಳೆ ಆಯಾ ನದಿಯಲ್ಲಿ ಮುಕ್ಕೋಟಿ ದೇವರು ಮಿಂದೇಳುವುದರಿಂದ ಆ ಸ್ನಾನ ಪರಮ ಪವಿತ್ರ ಸ್ನಾನವೆಂದೇ ನಂಬಲಾಗುತ್ತದೆ. ಗುರು […]

3 days ago

ಬೆಳಕು ಇಂಪ್ಯಾಕ್ಟ್: ಸ್ವಾವಲಂಬಿ ಬದುಕು ಕಟ್ಟಿಕೊಂಡ ಅಂಗವಿಕಲ ದಂಪತಿ

ರಾಯಚೂರು: ಎಲ್ಲವೂ ಸರಿಯಿದ್ದರೂ ಬದುಕು ಕಟ್ಟಿಕೊಳ್ಳಲು ಎಷ್ಟೋ ಜನ ಪ್ರತಿನಿತ್ಯ ಪರದಾಡುತ್ತಲೇ ಇರುತ್ತಾರೆ. ಅಂತಹದರಲ್ಲಿ ಈ ದಂಪತಿ ಅಂಗವಿಕಲರು. ಇರಲು ಸ್ವಂತಃ ಸೂರಿಲ್ಲ, ಬದುಕಲು ಉದ್ಯೋಗವಿಲ್ಲ. ಆದರೂ ಮಗುವನ್ನ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಪುಟ್ಟ ಅಂಗಡಿ ನಡೆಸುತ್ತಿದ್ದ ದಂಪತಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾಗಿ ತಮ್ಮ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದಾರೆ....

ಬಿಸಿಲನಾಡು ರಾಯಚೂರಲ್ಲಿ ವಲಸೆ ಪಕ್ಷಿಗಳ ಕಲರವ

6 days ago

ರಾಯಚೂರು: ಬಿಸಿಲನಾಡು ಎಂದೇ ಕರೆಸಿಕೊಳ್ಳುವ ರಾಯಚೂರು ಈಗ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಇಲ್ಲಿನ ಮರ್ಚಡ್, ಮನ್ಸಲಾಪುರ ಸೇರಿದಂತೆ ಕೆಲವು ಕೆರೆಗಳಿಗೆ ಸಾವಿರಾರು ಪಕ್ಷಿಗಳ ದಂಡು ವಲಸೆ ಬಂದಿದ್ದು, ಅವುಗಳ ಹಾರಾಟ ಆಕಾಶಕ್ಕೆ ಆಭರಣ ಮುಡಿಸುವಂತಿದೆ. ಆಹಾರ ಅರಸಿ ವಿವಿಧ ಜಾತಿಯ ಪಕ್ಷಿಗಳು ಉತ್ತರ...

ವಿದ್ಯಾರ್ಥಿಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಬಂಧಿಸಿದ ಶಿಕ್ಷಕ

1 week ago

ರಾಯಚೂರು: ತುಂಟತನ ಮಾಡುತ್ತಿದ್ದ ವಿದ್ಯಾರ್ಥಿ ಎಲ್ಲೂ ಹೋಗದಂತೆ ಶಿಕ್ಷಕನೋರ್ವ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಬಂಧಿಸಿಟ್ಟಿದ್ದ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ. ಜಿಲ್ಲೆಯ ಬಡಿಬೇಸ್ ಪ್ರದೇಶದಲ್ಲಿರುವ ಮದರಸಾ ಏ ಅರಬ್ಬಿಯಾ ದಾರೂಲ್ ಉಲೂಮ್ ಮೊಹಮ್ಮದಿಯಾ ಮದರಸಾದ ಶಿಕ್ಷಕ ಆಸೀಫ್, 10 ವರ್ಷದ...

ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ

1 week ago

ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ರಾತ್ರಿಯಾದ್ರೆ ಸಾಕು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕಳ್ಳರ ಗ್ಯಾಂಗೊಂದು ನಗರದಲ್ಲಿ ಬೀಡು ಬಿಟ್ಟಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಕಡೆ ಕಳ್ಳತನ ನಡೆಯುತ್ತಿವೆ. ಚಡ್ಡಿ ಹಾಕಿಕೊಂಡು ಕೈಯಲ್ಲಿ ಆಯುಧ ಹಿಡಿದು ಓಡಾಡುವ ಈ...

ಕಾಂಪೌಂಡಿನಲ್ಲಿದ್ದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: 1.60 ಲಕ್ಷ ಮೌಲ್ಯದ ಎರಡು ಬೈಕ್ ಬೆಂಕಿಗಾಹುತಿ!

1 week ago

ರಾಯಚೂರು: ನಗರದ ಟೆಲಿಕಾಂ ಕಾಲೋನಿಯ ಮನೆಯ ಕಾಂಪೌಡಿನಲ್ಲಿದ್ದ ಬೈಕುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ. ಟೆಲಿಕಾಂ ಕಾಲೋನಿ ನಿವಾಸಿ ಅಬ್ದುಲ್ ಮಜೀದ್ ಎಂಬವರಿಗೆ ಸೇರಿದ್ದ ಎರಡು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಬೈಕ್‍ಗಳಿಗೆ ಶನಿವಾರ...

ಸರ್ಕಾರಿ ಕೆಲ್ಸ ಕೊಡಿಸ್ತೀನಿಯೆಂದು 40 ಮಹಿಳೆಯರಿಗೆ ಅಂಗನವಾಡಿ ಶಿಕ್ಷಕಿ ಪಂಗನಾಮ

1 week ago

ರಾಯಚೂರು: ಸುಲಭವಾಗಿ ಸರ್ಕಾರಿ ಕೆಲಸ ಸಿಗುತ್ತೆ ಅಂದ್ರೆ ಅದ್ಯಾರು ಬೇಡ ಅಂತಾರೆ. ಎಷ್ಟು ಜನ ಬೇಕಾದ್ರೂ ಮಾಡೋಕೆ ಸಿದ್ಧರಾಗ್ತಾರೆ. ಇದೇ ಆಸೆಯನ್ನು ಬಂಡವಾಳ ಇಟ್ಕೊಂಡು ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿ ಶಿಕ್ಷಕಿಯೊಬ್ಬಳು ಸುಮಾರು 40 ಜನ ಮಹಿಳೆಯರಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸ್ತಿನಿ ಅಂತ...

ಸರ್ಕಾರಿ ಉಗ್ರಾಣದಲ್ಲಿ ರಸಗೊಬ್ಬರ ದಾಸ್ತಾನು: ಇದು ಕೈ ನಾಯಕನ ದರ್ಬಾರ್

2 weeks ago

ರಾಯಚೂರು: ಭಾರತ ಸರ್ಕಾರ ನಿರ್ಮಿಸಿದ ಉಗ್ರಾಣವನ್ನು ರೈತ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ಸಿನ ಮುಖಂಡರೊಬ್ಬರು ರಸಗೊಬ್ಬರಗಳ ದಾಸ್ತಾನು ಕೊಠಡಿಯಾಗಿ ಬದಲಾಯಿಸಿಕೊಂಡು ಅಂದಾ ದರ್ಬಾರ್ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೌದು, ಬರಗಾಲ ಹಾಗೂ ಸಾಲದ ಹೊರೆಯಿಂದ ರಾಜ್ಯದ ರೈತರು...