Wednesday, 22nd May 2019

Recent News

6 hours ago

ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ […]

6 hours ago

ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬಾಳು ಕೊಟ್ಟ ಯುವಕ

ಧಾರವಾಡ: ಅನಾಥಾಶ್ರಮದಲ್ಲಿ ಬೆಳೆದ ಯುವತಿಯನ್ನು ಯುವಕ ಮದುವೆ ಮಾಡಿಕೊಳ್ಳುವ ಮೂಲಕ ಬಾಳನ್ನು ಕೊಟ್ಟಿದ್ದಾರೆ. ಧಾರವಾಡದ ಮೊಬೈಲ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೀನಿವಾಸ್ ದೇಶಪಾಂಡೆ ಎಂಬವರು ಬೆಳಗಾವಿಯ ಗಂಗಮ್ಮ ಚಿಕ್ಕುಂಬಿಮಠ ಬಾಲ್ಯಕಲ್ಯಾಣ ಅನಾಥಾಶ್ರಮದಲ್ಲಿ ಬೆಳೆದ ಆರತಿ ಪುರಾಣಿಮಠ ಅವರನ್ನು ವರಿಸಿದ್ದಾರೆ. ಮದುವೆ ಧಾರವಾಡ ನಗರದ ಪ್ರಾಣ ದೇವರ ದೇವಸ್ಥಾನದಲ್ಲಿ ಇಂದು ನಡೆಯಿತು. ಮೂಲತಃ ಮಹಾರಾಷ್ಟ್ರದ ಆರತಿ ಎರಡು ವರ್ಷದವರಿದ್ದಾಗಲೇ...

ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

7 hours ago

ಅನಂತ್ ನಾಗ್ ಯಾವ ಚಿತ್ರದಲ್ಲಿಯೇ ಆದರೂ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆಂದರೇನೇ ಅದರೆಡೆಗೆ ಜನ ಆಕರ್ಷಿತರಾಗುತ್ತಾರೆ. ಹಾಗಿರೋವಾಗ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆಂದರೆ ಕುತೂಹಲ ಹುಟ್ಟದಿರಲು ಸಾಧ್ಯವೇ ಇಲ್ಲ. ಇಂಥಾದ್ದೊಂದು ಕಾರಣದಿಂದಲೇ ಎಲ್ಲ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಚಿತ್ರ ವೀಕೆಂಡ್. ಇದೀಗ ಇದು ಬಿಡುಗಡೆಯಾಗೋ ದಿನಾಂಕ...

ರಾಯಚೂರಿನಲ್ಲಿ ಯಶೋಮಾರ್ಗ ಸಂಚಾರ – ಗ್ರಾಮೀಣ ಭಾಗಕ್ಕೆ ಟ್ಯಾಂಕರ್ ಮೂಲಕ ನೀರಿನ ಸೌಲಭ್ಯ

7 hours ago

ರಾಯಚೂರು: ಭೀಕರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿರುವ ಬಿಸಿಲನಾಡು ರಾಯಚೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗದ ಸೇವೆ ಆರಂಭವಾಗಿದೆ. ಗ್ರಾಮೀಣ ಭಾಗದ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಯಶೋಮಾರ್ಗ ಮುಂದಾಗಿದೆ. ರಾಯಚೂರು ತಾಲೂಕಿನ...

ಬಿಬಿಎಂಪಿ ಮೇಯರ್, ಆಯುಕ್ತರಿಗೆ ವೀರೇಂದ್ರ ಹೆಗ್ಗಡೆ ಧನ್ಯವಾದ

8 hours ago

– ಬೆಂಗಳೂರಲ್ಲಿ ವಿಶೇಷ ಪೂಜೆ ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕೆ ಬಿಬಿಎಂಪಿಗೆ ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹಾಗೂ...

ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

8 hours ago

ಬೆಂಗಳೂರು: ಅಪಾರ ಅಭಿಮಾನಿ ಬಳಗವನ್ನು ಹೊಂದಿರುವವರು ಸುಮಲತಾ ಅಂಬರೀಶ್. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರೋ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ತಾಯಿಯಾಗಿ ನಟಿಸಿದ್ದರು. ಇದೀಗ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಅಮ್ಮನಾಗಿ ಭಾವನಾತ್ಮಕವಾದ ಪಾತ್ರವೊಂದರಲ್ಲಿ...

ಪ್ರಕಾಶ್ ಹುಕ್ಕೇರಿ ಗೆಲುವಿಗೆ ತನ್ನ ಮೀಸೆ ಪಣಕ್ಕಿಟ್ಟ ಅಭಿಮಾನಿ!

8 hours ago

ಬೆಳಗಾವಿ(ಚಿಕ್ಕೋಡಿ): ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬೀಳಲಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆಲುವಿಗೆ ಅಭಿಮಾನಿಯೊಬ್ಬರು ತಮ್ಮ ಮೀಸೆಯನ್ನೇ ಪಣಕ್ಕಿಟ್ಟಿದ್ದಾರೆ. ಹೌದು. ಚುನಾವಣೆ ವೇಳೆ ಹಣ, ಆಸ್ತಿ ಬೆಟ್ಟಿಂಗ್ ಕಟ್ಟೋದನ್ನ ನೋಡಿದ್ದೀವಿ ಇದೇನಪ್ಪ ಮೀಸೆ ಬೆಟ್ಟಿಂಗ್ ಎಂದು ಆಶ್ಚರ್ಯವಾಗಬಹುದು....

ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿದ್ದ 48 ಸಾವಿರ ಎಗರಿಸಿದ ಕಳ್ಳರು!

9 hours ago

ಬೆಂಗಳೂರು: ಮಗನ ಶಾಲೆಯ ಶುಲ್ಕ ಕಟ್ಟಲು ಸ್ಕೂಟಿ ಡಿಕ್ಕಿಯಲ್ಲಿ ಬ್ಯಾಂಕ್‍ನಿಂದ ಡ್ರಾ ಮಾಡಿಟ್ಟಿದ್ದ ಹಣವನ್ನು ಖತರ್ನಾಕ್ ಕಳ್ಳರು ಕದ್ದಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಭಟ್ಟರಹಳ್ಳಿಯ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ....