Friday, 20th July 2018

Recent News

8 months ago

ದೇವಾಲಯದ ಮುಂದೆ ಭಿಕ್ಷೆ ಬೇಡಿ 2.30 ಲಕ್ಷ ರೂ. ಕಾಣಿಕೆ ನೀಡಿದ ಮಹಿಳೆ

ಮೈಸೂರು: ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ವಯೋವೃದ್ಧ ಭಿಕ್ಷುಕಿ ಅದೇ ದೇವಸ್ಥಾನದಲ್ಲಿನ ದೇವರಿಗೆ 2.30 ಲಕ್ಷ ರೂ. ಹಣವನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. ಮೈಸೂರಿನ ಪಡುವಾರಹಳ್ಳಿಯಲ್ಲಿನ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಎಂ.ವಿ. ಸೀತಾ ಎಂಬವರು ಹಲವು ವರ್ಷದಿಂದ ಭಿಕ್ಷೆ ಬೇಡುತ್ತಿದ್ದು, ಹಾಗೇ ಭಿಕ್ಷೆ ಬೇಡಿ ಸಂಪಾದಿಸಿದ 2.30 ಲಕ್ಷ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಹನುಮ ಜಯಂತಿ ದಿನ ಅನ್ನಸಂತರ್ಪಣೆಗಾಗಿ ಕಾಣಿಕೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ತನ್ನವರೂ ಅಂತಾ ಯಾರು ಇಲ್ಲದ ಸೀತಮ್ಮ […]

8 months ago

ಕುಸಿಯುತ್ತಿರುವ ಕಟ್ಟಡದ ಮೇಲ್ಛಾವಣಿ – ಆತಂಕದಲ್ಲಿ ಪಾಠ ಕೇಳ್ತಿದ್ದಾರೆ ಶಾಲಾ ಮಕ್ಕಳು

ಮೈಸೂರು: ಹೇಳಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್‍ನ ಪವರ್ ಫುಲ್ ಮಿನಿಸ್ಟರ್ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರೂ ಮೈಸೂರಿನವರು. ಆದರೆ ನಗರದ ನಂಜನಗೂಡು ಪಟ್ಟಣದಲ್ಲಿ ಸರ್ಕಾರಿ ಶಾಲೆಯೊಂದರ ಕಟ್ಟಡದ ಮೇಲ್ಛಾವಣಿ ಕುಸಿಯುತ್ತಿದ್ದು, ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದ ಶತಮಾನದ ಕಟ್ಟಡ ಈಗ ದುಃಸ್ಥಿತಿ...

ಮನಸಿನ ಮಾತು ಹಂಚಿಕೊಳ್ಳಲು ಬ್ಲಾಗ್ ಆರಂಭಿಸಿದ ಯದುವೀರ್ ಒಡೆಯರ್

8 months ago

ಮೈಸೂರು: ತಮ್ಮ ಮನಸಿನ ಮಾತನ್ನು ಹಂಚಿಕೊಂಡು ಜನರ ಜೊತೆ ಬೆರೆಯಲು ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಭೇರುಂಡ’ ಎಂಬ ಹೆಸರಿನ ಬ್ಲಾಗ್ ಆರಂಭಿಸಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ...

ಅಮೆರಿಕದಿಂದ ಬಂದು ಮೈಸೂರಿನಲ್ಲಿ ಮಂತ್ರ ಮಾಂಗಲ್ಯ ವಿವಾಹ ಮಾಡಿಕೊಂಡ ಜೋಡಿ

8 months ago

ಮೈಸೂರು: ನಗರದಲ್ಲಿ ಇಂದು ಅಪರೂಪದ ಮದುವೆಯೊಂದು ನಡೆದಿದೆ. ಅಮೆರಿಕಾದಿಂದ ನವ ಜೋಡಿ ಬಂದು ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಪವನ್ ಕುಮಾರ್ ಎಂಬ ವರ ಮೈಸೂರಿನ ರಂಜಿತ ಎಂಬ ವಧುವನ್ನು ಇಂದು ಮಂತ್ರ ಮಾಂಗಲ್ಯದ ಮೂಲಕ...

ಮೈಸೂರಿನಲ್ಲಿ ಕಪ್ಪು, ಬಿಳಿ ಕಾಗೆ ಪ್ರತ್ಯಕ್ಷ!

8 months ago

ಮೈಸೂರು: ಕಾಗೆ ಬಣ್ಣ ಕಪ್ಪು ಇರುವುದು ಎಲ್ಲರಿಗೆ ತಿಳಿದಿರುವ ವಿಚಾರ. ಆದರೆ ಮೈಸೂರಿನಲ್ಲಿ ಬಿಳಿ ಕಾಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಕಾಗೆಯ ಅರ್ಧ ಭಾಗ ಹಾಗೂ ಪುಕ್ಕ ಬಿಳಿ ಬಣ್ಣದಿಂದ ಕೂಡಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಈ ಬಿಳಿ ಕಾಗೆ...

ಅರಳಿಮರದಲ್ಲಿ ಮೂಡಿದ ಗಣೇಶ ಮೂರ್ತಿ – ಮೈಸೂರಲ್ಲೊಂದು ವಿಸ್ಮಯ!

8 months ago

ಮೈಸೂರು: ಆರು ವರ್ಷಗಳ ಹಿಂದೆ ಮಳೆ ಬಂದು ಊರೆಲ್ಲಾ ಜಲಾವೃತವಾಗಿ, ಊರಿನ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭಗುಡಿಯಲ್ಲಿದ್ದ ಗಣೇಶ ವಿಗ್ರಹಕ್ಕೆ ಮಾತ್ರ ಏನೂ ಆಗಿರಲಿಲ್ಲ. ಇಂತಹ ಅಚ್ಚರಿ ನಡೆದಿದ್ದ ದೇವಸ್ಥಾನದಲ್ಲಿ ಈಗ ಮತ್ತೊಂದು ಅಚ್ಚರಿ ನಡೆದಿದೆ. ಗಣೇಶ ದೇವಾಲಯದ ಹಿಂಬದಿಯ...

ಪತ್ನಿ ಹೆಸ್ರಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆಯೋ ಮಂದಿಗೆ ಯದುವೀರ್ ಖಡಕ್ ವಾರ್ನಿಂಗ್

8 months ago

ಮೈಸೂರು: ಪತ್ನಿ ತ್ರಿಷಿಕಾದೇವಿ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಮ್ ಅಕೌಂಟ್ ತೆಗೆದಿರುವ ವಿಚಾರವನ್ನು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಂಭೀರವಾಗಿ ಸ್ವೀಕರಿಸಿದ್ದಾರೆ. ಈ ವಿಚಾರ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಹಲವು ಬಾರಿ...

ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

8 months ago

ಮೈಸೂರು: ನಗರದಲ್ಲಿ ವೈದ್ಯನೊಬ್ಬನ ಚುಚ್ಚುಮದ್ದು ಸೋಂಕಿನಿಂದ ಬಿ.ಎಸ್‍ಸಿ ಪದವೀಧರೆಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಹೆಚ್‍ಡಿ ಕೋಟೆ ತಾಲೂಕಿನ ಕಾಳಿಹುಂಡಿ ಬಳಿ ನಡೆದಿದೆ. ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು 21 ವರ್ಷದ ಅಂಕುಶ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅಂಕುಶಳಿಗೆ ವಾರದ ಹಿಂದೆ ಜ್ವರ...