Monday, 10th December 2018

Recent News

2 hours ago

ಶವಸಂಸ್ಕಾರಕ್ಕೆ ಅರಣ್ಯಾಧಿಕಾರಿಗಳಿಂದ ಅಡ್ಡಿ- ರಸ್ತೆಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರಿಂದ ಆಕ್ರೋಶ

ಮಂಡ್ಯ: ಅರಣ್ಯ ಇಲಾಖೆಯವರು ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದಕ್ಕೆ ಬುಡಕಟ್ಟು ಜನಾಂಗದ ಜನರು ರಸ್ತೆಯಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ. ಇಂದು ಶಿಕಾರಿಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಗ್ರಾಮಸ್ಥರು ಮೃತದೇಹವನ್ನು ಈ ಹಿಂದೆ ಅಂತ್ಯಕ್ರಿಯೆ ಮಾಡುತ್ತಿದ್ದ ಜಾಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಇದು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಹೇಳಿ ಅರಣ್ಯ ಇಲಾಖೆಯವರು ಅಂತ್ಯಕ್ರಿಯೆ ನಡೆಸದಂತೆ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶ್ರವಣಬೆಳಗೋಳ- ನಾಗಮಂಗಲ ರಸ್ತೆಗೆ ಬೆಂಕಿ […]

2 hours ago

ಟೆಕ್ಕಿ ಜೋಡಿಗೆ ಉಡುಗೊರೆಯಾಗಿ ಸಿಕ್ತು ದೇಶಿ ತಳಿಯ ಹಸುವಿನ ಕರುಗಳು

ಮಂಡ್ಯ: ನವ ದಂಪತಿಗೆ ಹಣ, ಚಿನ್ನಾಭರಣವನ್ನು ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ನೂತನ ಜೋಡಿಗೆ ದೇಶಿ  ತಳಿಯ ಹಸುವಿನ ಕರುಗಳನ್ನು ಉಡುಗೊರೆ ನೀಡಲಾಗಿದೆ. ವರ ಕಿರಣ್ ಕುಮಾರ್ ಹಾಗೂ ವಧು ನಾಗಶ್ರೀ ಇಂದು ಮಂಡ್ಯ ಜಿಲ್ಲೆಯ ಮದ್ದೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರಣ್ ಕುಮಾರ್ ಮತ್ತು ನಾಗಶ್ರೀ ಇಬ್ಬರು ಸಾಫ್ಟ್...

ಮಂಡ್ಯದಲ್ಲಿ ಸಿಲಿಂಡರ್ ಬದಲಿಸುವಾಗ ಗ್ಯಾಸ್ ಲೀಕ್..!

11 hours ago

ಮಂಡ್ಯ: ಖಾಲಿಯಾದ ಸಿಲಿಂಡರ್ ಬದಲಿಸಿ ಹೊಸ ಸಿಲಿಂಡರ್ ಅಳವಡಿಸುವಾಗ ಇದ್ದಕ್ಕಿದ್ದಂತೆ ಗ್ಯಾಸ್ ಲೀಕ್ ಆಗಿದ್ದು, ನಾಲ್ವರಿಗೆ ಸುಟ್ಟ ಗಾಯಗಳಾಗಿ ಮನೆಯವರೆಲ್ಲ ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ನಡೆದಿದೆ. ಮಂಜು, ರಶ್ಮಿ, ಮಂಗಳ ಹಾಗೂ ಸುಶೀಲಮ್ಮ ಗಾಯಗೊಂಡವರು....

30 ಮಂದಿಯನ್ನ ಬಲಿ ತೆಗೆದುಕೊಂಡ ಮಂಡ್ಯ ಬಸ್ ಚಾಲಕ ಕೊನೆಗೂ ಅರೆಸ್ಟ್

12 hours ago

ಮಂಡ್ಯ: ಜಿಲ್ಲೆಯಲ್ಲಿ ಬಸ್ ನಾಲೆಗೆ ಉರುಳಿ 30 ಜನರು ಜಲಸಮಾಧಿಯಾದ ದುರಂತ ಘಟನೆಗೆ ಕಾರಣನಾದ ಖಾಸಗಿ ಬಸ್ ಚಾಲಕ ಕೊನೆಗೂ ಸೆರೆ ಸಿಕ್ಕಿದ್ದಾನೆ. ನವೆಂಬರ್ 24 ರಂದು ಪಾಂಡವಪುರದ ಕನಗನಮರಡಿ ಖಾಸಗಿ ಬಸ್ ವಿ.ಸಿ ನಾಲೆಗೆ ಬಿದ್ದು, 30 ಜನರು ಮೃತಪಟ್ಟಿದ್ದರು....

ಅಂಬಿ ಹುಟ್ಟೂರಿಗೆ ಸುಮಲತಾ, ಅಭಿಷೇಕ್ ಭೇಟಿ – ಕಾಲಭೈರವೇಶ್ವರನಿಗೆ ಪ್ರಾರ್ಥನೆ, ಸಮಾಧಿಗೆ ಪೂಜೆ

2 days ago

ಮಂಡ್ಯ: ಇಂದು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ 27ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸುಮಲತಾ, ಅಭಿಷೇಕ್ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರು ಮಂಡ್ಯದ ಕಾಲಭೈರವೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಅಭಿಷೇಕ್ ಮತ್ತು ಸುಮಲತಾ ಮನೆ ದೇವರಾದ ಗಂಡು ದೇವರು...

ಮೇಕೆದಾಟುವಿನಿಂದಾಗಿ ಮುಳುಗುತ್ತಾ ಮುತ್ತತ್ತಿ- ಆಂಜನೇಯನ ಕಾಪಾಡ್ತಾರಾ ಟ್ರಬಲ್ ಶೂಟರ್?

2 days ago

ಬೆಂಗಳೂರು/ಮಂಡ್ಯ: ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ರಾಮಯಣದಲ್ಲಿ ಮುತ್ತತ್ತಿಯ ಬಗ್ಗೆ ಉಲ್ಲೇಖವಿರುವ, ಐತಿಹಾಸಿಕ ಪ್ರಸಿದ್ಧ ಮುತ್ತತ್ತಿ ಕೂಡ ಮುಳುಗಡೆಯಾಗುತ್ತದೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಮೇಕೆದಾಟು ಕನ್ನಡಿಗರ ಕನಸು ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿದೆ. ಆದ್ರೆ ಈ ಕನಸಿನ ಪ್ರಾರಂಭದಲ್ಲೇ ಸಣ್ಣ ತೊಡಕೊಂದು...

ಮಂಡ್ಯದಲ್ಲಿ ನಾಮಕರಣಕ್ಕೆ ಮೊದಲೇ ಗಂಡು ಮಗು ದುರ್ಮರಣ

2 days ago

ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ನಂತರ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜ್ಯೋತಿ ಮತ್ತು ಸ್ವಾಮಿ ದಂಪತಿಯ ಒಂದೂವರೆ ತಿಂಗಳ ಗಂಡು ಮಗುವಿಗೆ ಗುರುವಾರ ಕಾಡುಕೊತ್ತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು...

ಆತ್ಮಹತ್ಯೆ ಮಾಡ್ಕೊಳ್ಳಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸ್ತೇವೆ- ರೈತಾಪಿ ವರ್ಗಕ್ಕೆ ಸಿಎಂ ಮನವಿ

2 days ago

ಮಂಡ್ಯ: ಮುಖ್ಯಮಂತ್ರಿ ಆದ ನಂತ್ರ ಆಗಸ್ಟ್ ತಿಂಗಳಲ್ಲಿ ಮಂಡ್ಯದ ಅರಳಕುಪ್ಪೆ ಗ್ರಾಮದಲ್ಲಿ ರೈತರ ಜೊತೆ ಗದ್ದೆಗಿಳಿದಿದ್ದ ಮುಖ್ಯಮಂತ್ರಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ರು. ಅಂದು ನಾಟಿ ಮಾಡಿದ ಗದ್ದೆಯ ಕಟಾವಿನ ಸಮಯಕ್ಕೆ ಮತ್ತೆ ಆಗಮಿಸಿದ ಕುಮಾರಸ್ವಾಮಿ ರೈತರ ಕಷ್ಟಗಳಿಗೆ ಸ್ಪಂದಿಸಿ ಜೊತೆಯಿರುವ ಭರವಸೆ...