Sunday, 25th August 2019

Recent News

2 weeks ago

ಕಾಸಿಗೆ ಕಾಸು ಸೇರಿಸಿ ಕಟ್ಟಿದ ಮನೆ ಬಿಟ್ಟು ಬರಲ್ಲ: ಅಜ್ಜಿಯ ಕಣ್ಣೀರು

ಗದಗ: ನಾನು ಮಾತ್ರ ಈ ಮನೆಯನ್ನು ಬಿಟ್ಟು ಬರಲ್ಲ. ನೀರು ಬೇಕಾದ್ರೆ ಬರಲಿ ನಾನು ಇದೇ ಮನೆಯಲ್ಲಿ ಸಾಯುತ್ತೇನೆ ಎಂದು ಪ್ರವಾಹ ಪೀಡಿತ ಗ್ರಾಮದ ಅಜ್ಜಿಯೊಬ್ಬರು ಹಠ ಹಿಡಿದಿದ್ದಾರೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ 13 ಗ್ರಾಮಗಳು ಜಲಾವೃತಗೊಂಡಿವೆ. ಕೊಣ್ಣೂರು, ವಾಸನ, ಲಖಮಾಪೂರ, ಬೂದಿಹಾಳ ಸೇರಿದಂತೆ ನದಿಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ನರಗುಂದ ತಾಲೂಕಿನ ವಾಸನ ಗ್ರಾಮದ ನಿವಾಸಿ ಗಂಗಮ್ಮ ಅಜ್ಜಿ ಮಾತ್ರ ಮನೆಯ ತೊರೆಯಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರು, […]

2 weeks ago

ಪ್ರವಾಹದ ಮಧ್ಯೆ ಶ್ವಾನಗಳ ಮೂಕವೇದನೆ

ಗದಗ: ಎಡ ಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ನವಲಗುಂದ ಪ್ರದೇಶದ ಬೆಣ್ಣೆಹಳ್ಳದ ಬಳಿ ಶ್ವಾನಗಳು ನೀರಿನ ಮಧ್ಯೆ ಸಿಲುಕಿಕೊಂಡು ರಕ್ಷಣೆಗಾಗಿ ಪರದಾಡುತ್ತಿದೆ. ಮಳೆಗೆ ಬೆಣ್ಣೆಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಸುತ್ತಮುತ್ತಲ ಜಮೀನುಗಳು ನಡುಗಡ್ಡೆಯಂತಾಗಿದೆ. ಈ ನಡುವೆ ಶ್ವಾನಗಳೆರಡು ಪ್ರವಾಹದಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಮೊರೆ ಇಡುತ್ತಿವೆ. ಜಮೀನಿನಲ್ಲಿ ಉಂಟಾದ ಪ್ರವಾಹಕ್ಕೆ ಬುಧವಾರ ರಾತ್ರಿಯಿಂದಲೂ...

ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ

4 weeks ago

ಗದಗ: ಜಿಲ್ಲೆಯ ಸ್ವಚ್ಛತಾ ಯುವಸೇನೆ ತಂಡದ ಯುವಕರು ಪ್ರತಿ ರವಿವಾರ ಸ್ವಚ್ಛತಾ ಆಂದೋಲನಕ್ಕೆ ಮುಂದಾಗಿದ್ದಾರೆ. ಬೇರೆ ಬೇರೆ ಕಾಲೇಜಿನ ಸ್ನೇಹಿತರೆಲ್ಲ ಸೇರಿಕೊಂಡು ಈ ಒಂದು ಟೀಮ್ ಮಾಡಿಕೊಂಡಿದ್ದಾರೆ. ಗದಗ ಬೆಟಗೇರಿ ಅವಳಿ ನಗರದ ಸ್ವಚ್ಛ ಹಾಗೂ ಸೌಂದರ್ಯಕ್ಕಾಗಿ ಈ ಯುವಪಡೆ ಸುಂದರ...

ತಹಶೀಲ್ದಾರ್ ಸೇರಿ ನಾಲ್ಕು ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್

1 month ago

ಗದಗ: ಜಾತಿ ಪ್ರಮಾಣಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ನಾಲ್ಕು ಜನ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧದ ದೌರ್ಜನ್ಯ ತಡೆ) ಕಾಯ್ದೆಯ ಅಡಿ ಕೇಸ್ ದಾಖಲಾಗಿರುವ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ. ತಹಶೀಲ್ದಾರ್...

ಕರ್ತವ್ಯ ನಿರತರಾಗಿದ್ದ ವೇಳೆ ಗಾಯಗೊಂಡಿದ್ದ ಯೋಧ ನಿಧನ

1 month ago

ಗದಗ: ಕರ್ತವ್ಯ ನಿರತರಾಗಿದ್ದ ವೇಳೆ ಗಾಯಗೊಂಡಿದ್ದ ಗದಗದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕುಮಾರಸ್ವಾಮಿ ಡಿ ನಾಗರಾಳ (36) ನಿಧನರಾದ ಯೋಧ. ಕುಮಾರಸ್ವಾಮಿ ಅವರ ಪಾರ್ಥಿವ ಶರೀರ ಜಿಲ್ಲೆಯ ವಿವೇಕಾನಂದ ನಗರದಲ್ಲಿ ಇರುವ ಅವರ ಮನೆಗೆ ಆಗಮಿಸಿದೆ. ಯೋಧರ ಪಾರ್ಥಿವ ಶರೀರ...

ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ನರಗುಂದ ಬಂದ್

1 month ago

ಗದಗ: ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ಆಗ್ರಹಿಸಿ ಇಂದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ರೈತಸೇನೆ ರೈತರ ನಿರಂತರ ಹೋರಾಟಕ್ಕೆ ಇಂದಿಗೆ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ರೈತ ಮುಖಂಡ ವೀರೇಶ ಸೊಬರದಮಠ ನೇತೃತ್ವದಲ್ಲಿ ಬಂದ್‍ಗೆ ಕರೆ...

ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

1 month ago

ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ...

ಮೋದಿ ಹಾಗೂ ಅಮಿತ್ ಶಾ ಅವರ ಕುದುರೆ ವ್ಯಾಪಾರ ಯಶಸ್ವಿಯಾಗಲ್ಲ – ಎಚ್.ಕೆ ಪಾಟೀಲ್

2 months ago

ಗದಗ: ರಾಜ್ಯದಲ್ಲಿನ ಈ ಬೆಳವಣಿಗೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕುದುರೆ ವ್ಯಾಪಾರವೇ ಕಾರಣ. ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಶಾಸಕ ಎಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ...