Tuesday, 16th July 2019

10 hours ago

ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ನರಗುಂದ ಬಂದ್

ಗದಗ: ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ಆಗ್ರಹಿಸಿ ಇಂದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ರೈತಸೇನೆ ರೈತರ ನಿರಂತರ ಹೋರಾಟಕ್ಕೆ ಇಂದಿಗೆ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ರೈತ ಮುಖಂಡ ವೀರೇಶ ಸೊಬರದಮಠ ನೇತೃತ್ವದಲ್ಲಿ ಬಂದ್‍ಗೆ ಕರೆ ನೀಡಲಾಗಿತ್ತು. ಅಗಸ್ಟ್ 14, 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣದಿಂದ ರಾಜ್ಯಕ್ಕೆ 13.5 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಲಾಗಿತ್ತು. ನ್ಯಾಯಾಧೀಕರಣ ತೀರ್ಪು ನೀಡಿ ವರ್ಷಗಳೇ ಕಳೆದರೂ ಯೋಜನೆ ಕಾರ್ಯ ರೂಪಕ್ಕೆ ಬಾರದ ಹಿನ್ನೆಲೆ ನರಗುಂದ […]

4 days ago

ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ. ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ...

ಲಾರಿಗೆ ಬೈಕ್ ಡಿಕ್ಕಿ – ಕರ್ತವ್ಯ ನಿರತ ಪೊಲೀಸ್ ಪೇದೆ ಸ್ಥಳದಲ್ಲೇ ಸಾವು

2 weeks ago

ಗದಗ: ಕರ್ತವ್ಯದಲ್ಲಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಂಭವಿಸಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಬಳಿ ನಡೆದಿದೆ. ಪೊಲೀಸ್ ಪೇದೆ ಶಿವಪ್ರಕಾಶ ಲೂಟಿಮಠ(31) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪೇದೆಯು ಗದಗದಿಂದ ಮುಂಡರಗಿಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ....

ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

2 weeks ago

ಗದಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಪ್ಪು ಇರುವೆಗಳ ಹಾವಳಿಯಿಂದ ಬಾಣಂತಿಯರು ಮತ್ತು ಹಸುಗೂಸುಗಳು ರಾತ್ರಿ ನಿದ್ರೆಯಿಲ್ಲದೆ ಹೈರಾಣಾಗುತ್ತಿದ್ದಾರೆ. ನಗರದ ಜಿಮ್ಸ್ ಆಸ್ಪತ್ರೆ ಸ್ವಚ್ಛತೆ ಇಲ್ಲದಿರೋದರಿಂದ ಬಹುತೇಕ ವಾರ್ಡ್ ಗಳಲ್ಲಿ ಇರುವೆಗಳ ಲೋಕವೇ ಸೃಷ್ಟಿಯಾಗುತ್ತದೆ. ಇರುವೆಗಳಿಂದ ತಪ್ಪಿಸಿಕೊಳ್ಳಲು ಬಾಣಂತಿಯರು ಕಷ್ಟಪಡುವ ದೃಶ್ಯಗಳು ಜಿಮ್ಸ್ ನಲ್ಲಿ...

ಗದಗದ ಸ್ಮಶಾನದಲ್ಲಿ ಮೂಳೆ, ಬುರುಡೆ ಅಗೆದು ಮರಳುಗಾರಿಕೆ

2 weeks ago

ಗದಗ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಹೆಣ ಹೂಳುವ ಜಾಗವನ್ನೂ ಬಿಡುತ್ತಿಲ್ಲ. ಹೆಣಗಳನ್ನು ಲೆಕ್ಕಿಸದೆ ಅಕ್ರಮ ಮರಳು ಲೂಟಿ ನಡೆದಿದೆ. ಮನೆ, ಮಠ ನಿರ್ಮಾಣಕ್ಕೆ ಹೆಣಗಳ ಅಸ್ಥಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಅಕ್ರಮ ದಂಧೆ ಬಗ್ಗೆ ಮಾತಾಡಲು ಗ್ರಾಮದ...

ಬಾರ್ ಹಠಾವೋ ಮಠ ಬಚಾವೋ- ಬಾರ್ ವಿರುದ್ಧ ಬೀದಿಗಿಳಿದ ಮಹಿಳೆಯರು

3 weeks ago

ಗದಗ: ಅದು ಮುದ್ರಣಕಾಶಿ. ಸುಸಂಸ್ಕೃತರ ನೆಲ. ಆದರೀಗ ಇಲ್ಲಿ ಬಾರ್ ಗಳ ದರ್ಬಾರ್ ಜೋರು. ಹೀಗಾಗಿ ಬಾರ್ ಹಠಾವೋ ಮಠ ಬಚಾವೋ ಎಂದು ಬುಧವಾರದಂದು ಬಾರ್ ವಿರುದ್ಧ ಗದಗದ ಮಹಿಳೆಯರು ಸಿಡಿದೆದ್ದಿದ್ದರು. ಹೌದು. ಗದಗನ ತೋಂಟದಾರ್ಯ ಮಠದ ಸಮೀಪವೇ ಹಲವಾರು ಬಾರ್...

ಶಾಲೆಗೆ ಬಕೆಟ್ ತೆಗೆದುಕೊಂಡು ಹೋಗ್ಲೇಬೇಕು- ಗದಗ ವಸತಿ ಶಾಲೆಯ ದುಸ್ಥಿತಿ

3 weeks ago

ಗದಗ: ಜಿಲ್ಲೆಯಲ್ಲೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಶಾಲೆಗೆ ಹೋಗಬೇಕಾದರೆ ಬುಕ್ಸ್, ನೋಟ್ ಬುಕ್, ಪೆನ್ನು, ಪೆನ್ಸಿಲ್ ಒಯ್ಯೋದು ಸಹಜ. ಆದರೆ ಈ ಶಾಲೆಗೆ ವಿದ್ಯಾರ್ಥಿಗಳು ಹೋಗಬೇಕಾದರೆ ಬಕೆಟ್ ತೆಗೆದುಕೊಂಡು ಹೋಗಲೇಬೇಕು. ಹೌದು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ...

ಉತ್ತರ ಕರ್ನಾಟಕದ ಬಿಸಿಲ ಜಿಲ್ಲೆಗಳಲ್ಲಿ ವರ್ಷಧಾರೆ – ಉಕ್ಕಿಹರಿದ ತೊರೆಹಳ್ಳಗಳು, ಅಲ್ಲಲ್ಲಿ ಅವಾಂತರ

3 weeks ago

ಬೆಂಗಳೂರು: ಮುಂಗಾರು ಮಳೆ ಕೊನೆಗೂ ಕಾಡಿ, ಸತಾಯಿಸಿ ಬಂದಿದ್ದು, ಕೇವಲ ನಾಲ್ಕು ದಿನಗಳ ಅವಧಿಯಲ್ಲೇ ದೇಶದ 10ಕ್ಕೂ ಹೆಚ್ಚು ರಾಜ್ಯಗಳನ್ನು ಆವರಿಸಿದೆ. ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ 20 ದಿನಗಳಿಂದ 40-45 ಡಿಗ್ರಿಯಷ್ಟು ಬಿಸಿಲಿನ ತಾಪ ದಾಖಲಾಗಿತ್ತು. ಭಾನುವಾರ ಮಧ್ಯಾಹ್ನ,...