Saturday, 21st July 2018

Recent News

1 day ago

ಈಶ್ವರ್ ಖಂಡ್ರೆಗೆ ನಿಂಬೆಹಣ್ಣು ಕೊಟ್ರು ಐಜಿ ಸನದಿ

ಹುಬ್ಬಳ್ಳಿ: ಎರಡು ನಿಂಬೆಹಣ್ಣು ನೀಡಿ, ವಿಶೇಷ ರೀತಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಈಶ್ವರ್ ಖಂಡ್ರೆ ಅವರನ್ನು ಮಾಜಿ ಸಂಸದ ಐಜಿ ಸನದಿ ಸ್ವಾಗತಿಸಿದ್ದಾರೆ. ಸನದಿ ನೀಡಿದ ನಿಂಬೆ ಹಣ್ಣನ್ನು ನಗುನಗುತ್ತಲೇ ಸ್ವೀಕರಿಸಿ, ಇದು ಶುಭದ ಸಂಕೇತ ಎಂದರು. ಬಳಿಕ ಮಾಧ್ಯಮಗೋಷ್ಠಿ ಮುಗಿಯುವವರೆಗೂ ಎರಡು ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡೇ ಖಂಡ್ರೆ ಕುಳಿತಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿತ್ತು. ಆದರೆ 2018ರ […]

2 days ago

10 ವರ್ಷದಿಂದ ಡಾ. ರಾಜ್ ಕುಮಾರ್ ಗಾಗಿ ಕಾದಿದ್ದ ಶಿಕ್ಷಕಿಯ ಆಸೆಯನ್ನು ನೆರವೇರಿಸಿದ್ರು ಪುನೀತ್!

ಹುಬ್ಬಳ್ಳಿ: ಕಳೆದ ಹತ್ತು ಹದಿನೈದು ವರ್ಷಗಳಿಂದ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ ನಿವೃತ್ತ ಶಿಕ್ಷಕಿಯ ಆಸೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಗೂ ಈಡೇರಿಸಿದ್ದಾರೆ. ಹುಬ್ಬಳ್ಳಿಯ ಗೋಕುಲ್ ರೋಡ್‍ನ ಅಕ್ಷಯ ಪಾರ್ಕ್ ನ ನಿವಾಸಿಯಾದ ಸುನಂದಾ ವೆರ್ಣೆಕರ್ ರಾಜ್ ಕುಮಾರ್ ಅವರ ಹುಚ್ಚು ಅಭಿಮಾನಿ. ವೃತ್ತಿಯಲ್ಲಿ...

ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಸಿದ್ದರಾಮಯ್ಯ

4 days ago

ಹುಬ್ಬಳ್ಳಿ: ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕಳೆದ ಬಜೆಟ್‍ನಲ್ಲಿಯೇ ಸಾಕಷ್ಟು ಅನುದಾನವನ್ನು ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕಕ್ಕೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ಅನುದಾನ...

ಟಿಕೆಟ್ ಪಡೆಯದೇ ಪ್ರಯಾಣಿಸಿದ್ದ ಮಹಿಳೆಗೆ ಬೈದಿದ್ದಕ್ಕೆ ಪ್ರಯಾಣಿಕರಿಂದ ಕಂಡಕ್ಟರ್ ಗೆ ತರಾಟೆ!

5 days ago

ಹುಬ್ಬಳ್ಳಿ: ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಮಹಿಳೆಗೆ ಬೈದಿದ್ದಕ್ಕೆ ಕಂಡಕ್ಟರ್ ನನ್ನು ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಗ್ರಾಮೀಣ ಘಟಕಕ್ಕೆ ಸೇರಿದ ಬಸ್ಸಿನಲ್ಲಿ ಮಹಿಳೆಯೊಬ್ಬಳು ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದಳು. ಆಗ ಕಂಡಕ್ಟರ್ ಹಾಗೂ...

ಪ್ರಿಯಕರನ ಜೊತೆ ಸೇರಿ 10 ವರ್ಷ ಸಂಸಾರ ಮಾಡಿದ್ದ ಪತಿಯನ್ನೇ ಹತ್ಯೆ ಮಾಡಿದ್ದಾಕೆಯ ಬಂಧನ!

6 days ago

ಹುಬ್ಬಳ್ಳಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಬಾನಾ ಆಯಟ್ಟಿ ಹಾಗೂ ಪ್ರೀಯಕರ ಬಾಷಾಸಾಬ್ ಬಂಧಿತ ಆರೋಪಿಗಳು. ಇವರು ಹುಬ್ಬಳ್ಳಿಯ ಬಲ್ಡೋಜರ ನಿವಾಸಿ ಮೊಹಮ್ಮದ್ ರಫೀಕ್...

ಈಗಷ್ಟೇ ಅಧಿಕಾರಕ್ಕೆ ಬಂದ ಹೆಚ್‍ಡಿಕೆ ಮೇಲೆ ಆರೋಪ ಮಾಡಿದ್ರೆ ಹೇಗೆ: ಹೆಚ್‍ಡಿಡಿ

6 days ago

ಧಾರವಾಡ: ರಾಜ್ಯ ಕಂಡ ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲಿ ಏನು ಆಗಿದೆ ಎನ್ನುವುದು ಚರ್ಚೆಯಾಗಬೇಕು. ಎರಡು ತಿಂಗಳಿಂದ ಹಿಂದಷ್ಟೇ ಅಧಿಕಾರಕ್ಕೆ ಬಂದ ದೇವೇಗೌಡ್ರ ಮಗನ ಮೇಲೆ ಆರೋಪ ಮಾಡಿದರೆ ಹೇಗೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ನಗರದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ...

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲು ಈಗ ಸಾಧ್ಯವಿಲ್ಲ: ಎಚ್‍ಡಿಡಿ

7 days ago

ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗ ಗ್ರಾಮ ವಾಸ್ತವ್ಯ ಹೂಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಹತ್ತು- ಹಲವಾರು ಸಮಸ್ಯೆಗಳಿವೆ. ಅವೆಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ...

ಬೆಳ್ಳಂಬೆಳಗ್ಗೆ ಬಸವರಾಜ್ ಹೊರಟ್ಟಿ ಮನೆಗೆ ಮಾಜಿ ಪ್ರಧಾನಿ ಎಚ್‍ಡಿಡಿ ಭೇಟಿ

7 days ago

ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಮನೆಗೆ ಭೇಟಿ ನೀಡಿದ್ದಾರೆ. ಬೆಳಗ್ಗೆ ಬೆಂಗಳೂರಿನಿಂದ ಪಕ್ಷದ ಕಾರ್ಯಕ್ರಮದ ನಿಮಿತ್ತ ಎಚ್.ಡಿ ದೇವೇಗೌಡರು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಬಸವರಾಜ ಹೊರಟ್ಟಿ ಅವರ...