Wednesday, 17th July 2019

Recent News

2 years ago

ದಾವಣಗೆರೆಯಲ್ಲಿ ಎಸಿ, ತಹಶೀಲ್ದಾರ್ ಹತ್ಯೆಗೆ ಯತ್ನ

ದಾವಣಗೆರೆ: ದಾವಣಗೆರೆಯಲ್ಲಿ ಎಸಿ ಹಾಗೂ ತಹಶೀಲ್ದಾರ್ ಕೊಲೆಗೆ ಯತ್ನ ನಡೆದಿದೆ. ದಾವಣಗೆರೆ ತಾಲೂಕಿನ ಹಳೇ ಬಾತಿಯ ದರ್ಗಾ ಬಳಿ ಇರುವ ಉಮಾಪತಿ ಎಂಬವರ ದಾಸ್ತಾನು ಮಳಿಗೆ ಮೇಲೆ ಇಂದು ಅಧಿಕಾರಿಗಳು ನಡೆಸಿದ್ರು. ಈ ವೇಳೆ ಅಕ್ರಮ ಪಡಿತರ ದಾಸ್ತಾನು ವಶಕ್ಕೆ ಮುಂದಾದ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಹಾಗೂ ತಹಸೀಲ್ದಾರ್ ಸಂತೋಷ್ ಅವರ ಮೇಲೆ ಕಿಡಿಗೇಡಿಗಳು ಟೆಂಪೋ ಹತ್ತಿಸಲು ಮುಂದಾಗಿದ್ದರು. ಅಲ್ಲದೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ರು. ಇದೇ ವೇಳೆ ಅಧಿಕಾರಿಗಳ ಹಾಗೂ ದಾಸ್ತಾನು ಮಾಲೀಕರ ಜೊತೆ ಮಾತಿನ ಚಕಮಕಿಯೂ […]

2 years ago

ದಾವಣಗೆರೆ: ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವ ಮೀನುಗಳು- ಆತಂಕದಲ್ಲಿ ಮೀನುಗಾರರು

ದಾವಣಗೆರೆ: ಬಿಸಿಲ ಬೇಗೆಗೆ ಕೆರೆಯಲ್ಲಿನ ಮೀನುಗಳು ಸಾವನ್ನಪ್ಪುತ್ತಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಬಿಸಿಲು ಹೆಚ್ಚಾಗಿದ್ದು ಬಿನಿಲಿನ ಶಾಖಕ್ಕೆ ದೇವರಬೆಳಕೆರೆ ಗ್ರಾಮದ ಕೆರೆಯ ನೀರಿನಲ್ಲಿದ್ದ ಮೀನುಗಳು ಪ್ರತಿನಿತ್ಯ ಸಾವನ್ನಪ್ಪಿ ದಡ ಸೇರುತ್ತಿವೆ. ಹರಿಹರ ತಾಲೂಕಿನ ದೊಡ್ಡ ಕೆರೆಯೆಂದು ಖ್ಯಾತಿ ಪಡೆದಿದ್ದ ಕೆರೆಯಲ್ಲಿ ಈ ವರ್ಷ ನೀರು...

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

2 years ago

ಉಡುಪಿ: ಶ್ರೀಕೃಷ್ಣನ ಅಪ್ಪಟ ಅಭಿಮಾನಿ, ಪದ್ಮವಿಭೂಷಣ ಗಾಯಕ ಕೆ.ಜೆ. ಯೇಸುದಾಸ್ ಉಡುಪಿಯಲ್ಲಿ ತಮ್ಮ ಗಾಯನದ ಮೂಲಕ ಸಾವಿರಾರು ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಗಾನಸುಧೆಯನ್ನು ಯೇಸುದಾಸ್ ಹರಿಸಿದರು. ಮೊದಲು ಕರ್ನಾಟಕ ಶಾಸ್ತ್ರೀಯ...

ವಿಡಿಯೋ: ತನ್ನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿದೆ ದಾವಣಗೆರೆಯ ಹಸು

2 years ago

ದಾವಣಗೆರೆ: ಹಸುವೊಂದು ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿರುವ ಘಟನೆ ಕೆಟಿಜೆ ನಗರದಲ್ಲಿ ನಡೆಯುತ್ತಿದೆ. ಹಲವು ದಿನಗಳಿಂದ ಹಸು ಹೀಗೆ ಹಾಲು ಕುಡಿಯುವುದನ್ನು ನೋಡಿದ ಜನರು ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ. ಕರು ಇಲ್ಲದ...

ದಾವಣಗೆರೆಯಲ್ಲಿ ರೆಡಿಯಾಗುತ್ತೆ ಯುಗಾದಿ ಹಬ್ಬದ ಸ್ಪೆಷಲ್ ಶಾವಿಗೆ

2 years ago

ದಾವಣಗೆರೆ: ಯುಗಾದಿ ಹಬ್ಬದ ವೇಳೆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ನಿತ್ಯ ಕಾಯಕ ಹಬ್ಬಕ್ಕೆ ಶಾವಿಗೆ ರೆಡಿ ಮಾಡೋದು, ಆದರೆ ಈಗ ಕಾಲ ಬದಲಾಗಿದೆ. ದಿನಗಟ್ಟಲೆ ಕೂತು ಮನೆಯಲ್ಲಿ ಯಾರು ಶಾವಿಗೆ ತಯಾರು ಮಾಡಲ್ಲ. ಆದ್ರೆ ದಾವಣಗೆರೆಯಲ್ಲೊಂದು ಕುಟುಂಬ ಶಾವಿಗೆ ತಯಾರು ಮಾಡಿ...

ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

2 years ago

ದಾವಣಗೆರೆ: ರಾಷ್ಟ್ರ ಪಕ್ಷಿ ನವಿಲನ್ನು ಬೇಟೆಯಾಡಿದ ಆರೋಪದ ಮೇಲೆ ಹರಿಹರ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆ ನಗರದ ಎಸ್‍ಎಸ್ ಲೇಔಟ್ ನಿವಾಸಿ ಮೆಹಬೂಬ್ ಬಾಷಾ (55), ಟಿಪ್ಪು ನಗರದ ನಿವಾಸಿ ಇಕ್ಬಾಲ್ (28) ಬಂಧಿತ ಆರೋಪಿಗಳು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ...

ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

2 years ago

ದಾವಣಗೆರೆ: ಇತ್ತೀಚಿನ ದಿನನಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದ್ದರೆ, ದಾವಣಗೆರೆಯ ಇಎಸ್‍ಐ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿಂದಾಗಿ ವೈದ್ಯಾಧಿಕಾರಿಗಳು ಆಪರೇಷನ್ ಮಾಡೋದನ್ನೇ ಮುಂದೂಡುತ್ತಿದ್ದಾರೆ. ಹೌದು. ಕಳೆದ 15 ದಿನಗಳಿಂದ ನಗರದ ಇಎಸ್‍ಐ ಆಸ್ಪತ್ರೆಗೆ ನೀರಿನ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ನೀರು...

ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

2 years ago

ದಾವಣಗೆರೆ: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ ಮೂವರನ್ನು ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಹಾಸನದ ಸುನೀಲ್ ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮೀಕಾಂತ್ ಬಂಧಿತರಾಗಿದ್ದಾರೆ. ಈ ಮೂವರು ನಗರದಲ್ಲಿ...