Tuesday, 25th June 2019

7 hours ago

ಕೆರೆ ಹೂಳೆತ್ತುವ ಕಾಯಕಕ್ಕೆ ಕಾರ್ಮಿಕರ ಜೊತೆ ಕೈ ಜೋಡಿಸಿದ ರೇಣುಕಾಚಾರ್ಯ

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕಾಯಕಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಲಿ ಕಾರ್ಮಿಕರ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆಯುತಿತ್ತು. ಈ ವೇಳೆ ಸ್ವತಃ ತಾವೇ ಮುಂದೆ ಬಂದು ಹಾರೆ ಕೋಲು ಹಿಡಿದು ಮಣ್ಣನ್ನು ತೆಗೆದು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಅಷ್ಟೇ ಅಲ್ಲದೆ ಯೋಗ ಮಾಡುವುದಕ್ಕಿಂತ 10 ನಿಮಿಷ ಕೂಲಿ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಕೆಲಸ ಮಾಡುತ್ತ […]

1 day ago

ತಾಯಿಯನ್ನು ನೋಡಿಕೊಳ್ಳಲಾಗದೇ ಬೀದಿಯಲ್ಲಿ ಬಿಟ್ಟು ಹೋದ ಮಕ್ಕಳು

– ಸ್ಥಳೀಯರಿಂದ ಮಕ್ಕಳಿಗೆ ಫುಲ್ ಕ್ಲಾಸ್ ದಾವಣಗೆರೆ: ಹೆತ್ತ ತಾಯಿಯನ್ನು ನೋಡಿಕೊಳ್ಳಲಾಗದೇ ಇಬ್ಬರು ಮಕ್ಕಳು ತಮ್ಮ ತಾಯಿಯನ್ನೇ ಬೀದಿಯಲ್ಲಿ ಬಿಟ್ಟು ಹೋದ ಮನಕಲುಕುವ ದೃಶ್ಯ ನಗರದಲ್ಲಿ ನಡೆದಿದೆ. ದಾವಣಗೆರೆಯ ವಿನೋಬಾ ನಗರದ ಯಲ್ಲಮ್ಮ ದೇವಾಸ್ಥಾನದ ಮುಂಭಾಗ ವೃದ್ಧೆಯನ್ನು ಪಾಪಿ ಮಕ್ಕಳು ಆಟೋದಲ್ಲಿ ಬಂದು ಬಿಟ್ಟು ಹೋಗಿದ್ದಾರೆ. ವೃದ್ಧೆಯ ಗೋಳಾಟ ನೋಡಲಾಗದೇ ಸ್ಥಳೀಯರು ಆಶ್ರಯ ನೀಡಿ ಮಾನವೀಯತೆ...

ಬಿಜೆಪಿಯವರು ಪಾದಯಾತ್ರೆ ಮಾಡಲಿ ಏನಾದ್ರು ರೋಗವಿದ್ರೆ ಹೋಗುತ್ತೆ: ಶಾಮನೂರು ಟೀಕೆ

1 week ago

ದಾವಣಗೆರೆ: ಬಿಜೆಪಿ ಅವರು ಜಿಂದಾಲ್ ವಿರುದ್ಧ ಪಾದಯಾತ್ರೆ ಮಾಡಲಿ, ಅವರಿಗೆ ಯಾವುದಾದರೂ ರೋಗವಿದ್ದರೆ ದೂರವಾಗುತ್ತವೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಮಲ ನಾಯಕರನ್ನು ಟೀಕಿಸಿದ್ದಾರೆ. ಜಿಂದಾಲ್ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರು ಪಾದಯಾತ್ರೆ...

ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಯುವಕನ ಕೊಲೆ

1 week ago

ದಾವಣಗೆರೆ: ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣಶೆಟ್ಟಿ ಲೇಔಟ್ ಹಿಂಭಾಗದ ಖಾಲಿ ನಿವೇಶನದಲ್ಲಿ ನಡೆದಿದೆ. ದಯನತ್ ಖಾನ್ (20) ಮೃತ ಯುವಕ. ದಹನತ್ ಹೊನ್ನಾಳಿ ಪಟ್ಟಣದ ದುರ್ಗಿ...

ಮಾಜಿ ಸಿಎಂ ಸಂಬಂಧಿಕರು, ಕೆಲಸ ಕೊಡಿಸುತ್ತೇವೆ ಎಂದು 60 ಲಕ್ಷ ದೋಚಿದ ಸಹೋದರರು

2 weeks ago

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಸಂಬಂಧಿಕರು, ನಾವು ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಮೂವರು ಸಹೋದರರು 10 ಯುವಕರನ್ನು ನಂಬಿಸಿ ಅವರಿಂದ 60 ಲಕ್ಷ ರೂಗಳನ್ನು ಪಡೆದುಕೊಂಡು ಪಂಗನಾಮ ಹಾಕಿದ ಘಟನೆ ದಾವಣೆಗೆರೆಯಲ್ಲಿ ನಡೆದಿದೆ. ಈ ಮೂವರು ಸಹೋದರರನ್ನು...

ಒಡೆದ ಮನೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಸಾರ – ಶ್ರೀರಾಮುಲು

2 weeks ago

ದಾವಣಗೆರೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ, ಒಡೆದ ಮನೆಯಲ್ಲಿ ಮೈತ್ರಿ ಸರ್ಕಾರ ಸಂಸಾರ ನಡೆಸುತ್ತಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿಯ ಮಾಜಿ ಸಚಿವ ಹಾಲಿ ಶಾಸಕ ಶ್ರೀರಾಮುಲು ವ್ಯಂಗ್ಯ ಮಾಡಿದ್ದಾರೆ. ಹರಿಹರದ ವಾಲ್ಮೀಕಿ ಮಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,...

ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ: ಸತೀಶ್ ಜಾರಕಿಹೊಳಿ

2 weeks ago

ದಾವಣಗೆರೆ: ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ. ಕೆಳಗೆ ನಿಂತು ನೋಡೋರಿಗೆ ಈಗ ಬೀಳುತ್ತೆ, ಆಗ ಬೀಳುತ್ತೆ ಅಂತ ಭಾಸವಾಗುತ್ತದೆ ಆದ್ರೆ ಬೀಳೋದಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿರುವ ಕೈ-ದಳದ ದೋಸ್ತಿ ಸರ್ಕಾರ...

ಅತ್ತೆ ಮನೆ ಧ್ವಂಸ ಮಾಡಿ ಬೆಂಕಿ ಹಚ್ಚಿದ ಕಿರಾತಕ ಅಳಿಯ

2 weeks ago

– 60 ಸಾವಿರ, 30 ಗ್ರಾಂ ಚಿನ್ನದೊಂದಿಗೆ ಪರಾರಿ ದಾವಣಗೆರೆ: ಅತ್ತೆಯ ಮನೆಯನ್ನು ಧ್ವಂಸ ಮಾಡಿ ಬಳಿಕ ಅಳಿಯನೇ ಬೆಂಕಿ ಹಚ್ಚಿದ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಮಾರುತಿ ಸರ್ಕಲ್ ಬಳಿ ನಡೆದಿದೆ. ಇಸ್ಮಾಯಿಲ್ ಅತ್ತೆ ಮನೆ ಧ್ವಂಸ ಮಾಡಿದ...