Sunday, 22nd July 2018

Recent News

4 months ago

ಪ್ರೀತಿಸಿ ಮದ್ವೆಯಾಗಿ ಎಸ್‍ಪಿ ಕಚೇರಿಗೆ ಬಂದ ಜೋಡಿ

ಚಿತ್ರದುರ್ಗ: ಪ್ರಾಣ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ಇದೀಗ ರಕ್ಷಣೆ ಕೋರಿ ಚಿತ್ರದುರ್ಗ ಎಸ್‍ಪಿ ಕಚೇರಿಗೆ ಮೊರೆಹೋಗಿದೆ. ಚಿತ್ರದುರ್ಗದ ಮಾರುತಿ-ರುಕ್ಸಾರ್ (ಹೆಸರು ಬದಲಾಯಿಸಲಾಗಿದೆ) ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೂಲತಃ ಚಿಕ್ಕಮಗಳೂರಿನಲ್ಲಿರುವ ಯುವತಿ ಕುಟುಂಬ ನೆಲೆಸಿದ್ದು, ಈ ಹಿಂದೆ ಕುಟುಂಬ ಚಿತ್ರದುರ್ಗದಲ್ಲಿ ನೆಲೆಸಿದ್ದಾಗ ಮಾರುತಿ ಮೇಲೆ ಪ್ರೇಮಾಂಕುರವಾಗಿತ್ತು. ಸದ್ಯ ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿದ್ದು, ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜೋಡಿ ಮಾರ್ಚ್ 8ರಂದು ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ರಂಗನಾಥಸ್ವಾಮಿ ದೇಗುಲದಲ್ಲಿ ಪ್ರೇಮವಿವಾಹ ಆಗಿದ್ದರು. […]

4 months ago

ಶಾಸಕ ಡಿ.ಸುಧಾಕರ್ ಯುಗಾದಿ ಹಬ್ಬಕ್ಕೆ ವಿತರಿಸಿದ್ದ ಸೀರೆ, ಪಂಚೆಗೆ ಗ್ರಾಮಸ್ಥರಿಂದ ಬೆಂಕಿ

ಚಿತ್ರದುರ್ಗ: ಹಿರಿಯೂರಿನ ಶಾಸಕ ಡಿ.ಸುಧಾಕರ್ ಚುನಾವಣೆಗೂ ಮುನ್ನವೇ ಮತದಾರರನ್ನು ಓಲೈಸಲು ಯುಗಾದಿ ಹಬ್ಬದ ಉಡುಗೊರೆಯಾಗಿ ನೀಡಿರೋ ಸೀರೆ, ಪಂಚೆಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಅವರ ಭಾವಚಿತ್ರ ಹಾಗೂ ಕ್ಯಾಲೆಂಡರ್‍ವುಳ್ಳ ಬ್ಯಾಗ್‍ಗಳಲ್ಲಿ ಸೀರೆ, ಪಂಚೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕ್ಷೇತ್ರದ ಎಲ್ಲಾ...

ಮದ್ವೆಯಾಗುವುದಾಗಿ ನಂಬಿಸಿ 3-4 ಬಾರಿ ಅತ್ಯಾಚಾರ- ವಿಷ ಕುಡಿದ ಗರ್ಭಿಣಿ

5 months ago

ಚಿತ್ರದುರ್ಗ: ಗರ್ಭಿಣಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಹುಲ್ಲೂರು ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಉಮೇಶ್ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಏಳು ತಿಂಗಳ ಗರ್ಭಿಣಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ...

ಬಿಜೆಪಿಯದ್ದು ಮಿಷನ್ ಸರ್ಕಾರ, ಕಾಂಗ್ರೆಸ್ಸಿನದ್ದು ಕಮೀಷನ್ ಸರ್ಕಾರ, ನಮ್ಮದು ವಿಷನ್ ಸರ್ಕಾರ- ಹೆಚ್‍ಡಿಕೆ

5 months ago

ಚಿತ್ರದುರ್ಗ: ಬಿಜೆಪಿದ್ದು ಮಿಷನ್ ಸರ್ಕಾರ..ಕಾಂಗ್ರೆಸ್ಸಿನದ್ದು ಕಮೀಷನ್ ಸರ್ಕಾರ.. ನಮ್ಮದು ವಿಷನ್ ಸರ್ಕಾರ ಅಂತ ಮಾಜಿ ಸಿಎಂ, ಜಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.   ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, ನಮ್ ಸರ್ಕಾರ ಬಂದ್ರೆ ರೈತರಿಗೆ ಷರತ್ತು ರಹಿತ ಸಾಲ ಮನ್ನಾಗೆ...

ದಾಂಪತ್ಯ ಜೀವನಕ್ಕೆ ಕಾಲಿಡುವ ಹೊಸ್ತಿಲಲ್ಲಿದ್ದ ಕೋತಿರಾಜ್

5 months ago

ಚಿತ್ರದುರ್ಗ: ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರದುರ್ಗ ಎಂದಾಕ್ಷಣ ಎಲ್ಲರಿಗೂ ನೆನೆಪಾಗೋದು ಏಳುಸುತ್ತಿನ ಕೋಟೆ, ಮದಕರಿನಾಯಕ, ಒನಕೆ ಓಬವ್ವ ಮತ್ತು ನಾಗರಹಾವು ಚಲನಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಡಾ. ವಿಷ್ಣುವರ್ಧನ್ ಹಾಗು ಪುಟ್ಟಣ್ಣ ಕಣಗಾಲ್. ಅಂತೆಯೇ ಕಳೆದ 12 ವರ್ಷಗಳಿಂದ ಚಿತ್ರದುರ್ಗದ ಕೋಟೆ ನೋಡಿದವರಿಗೆ...

ಲಾರಿ, ಖಾಸಗಿ ಬಸ್ ಡಿಕ್ಕಿ – ತಿರುಪತಿಯಿಂದ ವಾಪಸ್ಸಾಗುತ್ತಿದ್ದ 8ರ ಬಾಲಕ ದುರ್ಮರಣ

5 months ago

ಚಿತ್ರದುರ್ಗ: ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿಯಾಗಿ ಬಸ್ ನಲ್ಲಿದ್ದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕನನ್ನು 8 ವರ್ಷದ ವಿಶ್ವನಾಥ ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಐವರಿಗೆ ಗಂಭೀರ...

1 ವರ್ಷದಲ್ಲಿ 800 ಗೂಡು ನಿರ್ಮಿಸಿ ಅಳಿವಿನಂಚಿನಲ್ಲಿದ್ದ ಗುಬ್ಬಚ್ಚಿಗಳನ್ನು ರಕ್ಷಿಸಿದ ಚಿತ್ರದುರ್ಗದ ಕಾರ್ತಿಕ್

5 months ago

ಚಿತ್ರದುರ್ಗ: ಬೇಸಿಗೆ ಶುರುವಾಗಿದ್ದು ಈಗಲೇ ನೀರಿಗೆ ಹಲವು ಕಡೆ ಬರ ಬಂದಿದ್ದು ಪ್ರಾಣಿ ಪಕ್ಷಿಗಳು ನೀರು ಸಿಗದೇ ಒದ್ದಾಡುತ್ತಿವೆ. ಅದರಲ್ಲೂ, ಅವಸಾನದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಕಥೆ ಹೇಳೋಕೆ ಆಗಲ್ಲ. ಆದ್ರೆ, ಚಿತ್ರದುರ್ಗದ ಕಾರ್ತಿಕ್ ಅನ್ನೋವರು ಮಾತ್ರ ವಿಭಿನ್ನ ಪ್ರಯತ್ನದ ಮೂಲಕ ಗುಬ್ಬಚ್ಚಿ...

ಗಡಿ ಭಾಗದಲ್ಲಿರುವ ಕನ್ನಡ ಗ್ರಂಥಾಲಯದ ಅಭಿವೃದ್ಧಿಗೆ ಬೇಕಿದೆ ಸಹಾಯ

6 months ago

ಚಿತ್ರದುರ್ಗ: ಆಂದ್ರಪ್ರದೇಶ ಹಾಗು ಕನಾಟಕ ರಾಜ್ಯಗಳ ಗಡಿರೇಖೆಯಲ್ಲಿರೋ ಗ್ರಾಮ. ಈ ಗ್ರಾಮದಲ್ಲಿ ಕನ್ನಡ ಮಾತನಾಡುವರು ತುಂಬಾನೇ ವಿರಳ ಹಾಗೂ ಕನ್ನಡ ಕಲಿಯಬೇಕಾದರೆ ಸರ್ಕಾರಿ ಶಾಲೆಗಳಿಗೆ ಹೋಗಬೇಕಾಗುತ್ತದೆ. ಗಡಿಭಾಗದಲ್ಲಿ ಕನ್ನಡವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಯುವಕನೋರ್ವ ಗ್ರಾಮಸ್ಥರ ನೆರವಿನೊಂದಿಗೆ ಸಾರ್ವಜನಿಕ ಗ್ರಂಥಾಲಯವನ್ನು ತೆರೆದಿದ್ದಾರೆ....