Wednesday, 19th September 2018

Recent News

3 weeks ago

ಸಹೋದರರ ಜಗಳ ಬಿಡಿಸಲು ಬಂದವನ ಸಾವು

ಚಿತ್ರದುರ್ಗ: ಅಣ್ಣ-ತಮ್ಮಂದಿರಿಬ್ಬರ ಜಗಳ ಬಿಡಿಸಲು ಬಂದ ವ್ಯಕ್ತಿಯೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಳ್ಳಕೆರೆಯ ಬಲ್ಲನಾಯಕನಹಟ್ಟಿಯಲ್ಲಿ ನಡೆದಿದೆ. ಸಣ್ಣಪಾಲಯ್ಯ ಮೃತ ವ್ಯಕ್ತಿ. ಜಮೀನು ವಿಷಯದಲ್ಲಿ ಉಜಿನ್ನಯ್ಯ ಮತ್ತು ಚಿನ್ನಪಾಲಯ್ಯ ಸಹೋದರರ ನಡುವೆ ಜಗಳ ಏರ್ಪಟ್ಟಿತ್ತು. ಉಜಿನ್ನಯ್ಯ ಮತ್ತು ಚಿನ್ನಪಾಲಯ್ಯ ಇಬ್ಬರ ಮಧ್ಯೆ 20 ಎಕರೆ ಜಮೀನಿಗಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಷಯವಾಗಿ ಶನಿವಾರ ಸಹ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ಸಣ್ಣಪಾಲಯ್ಯ ಜಗಳ ಬಿಡಿಸಲು ಮುಂದಾಗಿದ್ದರು. ಮೂವರ ಮಧ್ಯೆ ತಳ್ಳಾಟ-ನೂಕಾಟ […]

3 weeks ago

ಮನೆ ಗೋಡೆ ಕುಸಿದು 2 ಹಸು ಸಾವು -2 ಎತ್ತುಗಳಿಗೆ ಗಂಭೀರ ಗಾಯ

ಚಿತ್ರದುರ್ಗ: ತಡರಾತ್ರಿ ಇದ್ದಕ್ಕಿದಂತೆ ಮನೆಯ ಗೋಡೆಗಳು ಕುಸಿದು ಬಿದ್ದಿದರಿಂದ ಎರಡು ಹಸುಗಳು ಸಾವನ್ನಪ್ಪಿದ್ದು, ಅಲ್ಲೇ ಇದ್ದ ಎರಡು ಎತ್ತುಗಳಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ನಡೆದಿದೆ. ರೇಣುಕಮ್ಮ ಎಂಬವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿಯುತ್ತಿದಂತೆ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಹಾಗಾಗಿ ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ...

ಮೂರು ಬಾರಿ ಗೆದ್ದಿರೋ ನಂಗೆ ರೂಲ್ಸ್ ಹೇಳ್ತೀಯಾ: ಕಾಂಗ್ರೆಸ್ ಅಭ್ಯರ್ಥಿಯಿಂದ ಪೊಲೀಸರಿಗೆ ಧಮ್ಕಿ

1 month ago

ಚಿತ್ರದುರ್ಗ: ನಗರಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. 22ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಬಾಬು ಪೋಲಿಸರಿಗೆ ಧಮ್ಕಿ ಹಾಕಿದ್ದಾರೆ. ಇಂದು ನಗರಸಭೆಯ 35 ವಾರ್ಡ್ ಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ...

ವಾಜಪೇಯಿ ಆರೋಗ್ಯದಲ್ಲಿ ಏರುಪೇರು- ದಾವಣಗೆರೆ, ಚಿತ್ರದುರ್ಗದಲ್ಲಿ ವಿಶೇಷ ಪೂಜೆ

1 month ago

ದಾವಣಗೆರೆ/ ಚಿತ್ರದುರ್ಗ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಅಜಾತಶತ್ರು ವಾಜಪೇಯಿ ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ದಾವಣಗೆರೆಯ ನಿಟ್ಟುವಳ್ಳಿ ಆಂಜನೇಯ ದೇವಸ್ಥಾನದಲ್ಲಿ ಈ ವಿಶೇಷ...

ವೇಶ್ಯಾವಾಟಿಕೆ ನಡೆಸುತ್ತಿದ್ದ 3 ಲಾಡ್ಜ್‌ಗಳ ಮೇಲೆ ದಾಳಿ- ವಿದೇಶಿ ಯುವತಿಯರ ರಕ್ಷಣೆ

1 month ago

ಚಿತ್ರದುರ್ಗ: ನಗರದ ಮೂರು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, 6 ಜನ ಆರೋಪಿಗಳನ್ನು ಬಂಧಿಸಿ, 6 ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಸಾಗಾಟ ಮಾಡಲ್ಪಟ್ಟ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಒಡನಾಡಿ ಸಂಸ್ಥೆಯು ಬಾಂಗ್ಲಾದೇಶದ ಬಾಲಕಿಯೊಬ್ಬಳನ್ನು ವಿಚಾರಿಸಿ,...

36 ಗಂಟೆಯಲ್ಲೇ ಕೊಲೆಗಾರ ಅರೆಸ್ಟ್ – ಹಸೆಮಣೆ ಏರಬೇಕಿದ್ದವ ಈಗ ಕಂಬಿ ಹಿಂದೆ

1 month ago

ಚಿತ್ರದುರ್ಗ: ಅತಿ ಬುದ್ಧಿವಂತಿಕೆಯಿಂದ ಕೊಲೆಗೈದಿದ್ದರೂ ಪೊಲೀಸರ ಕಾರ್ಯಾಚರಣೆಯಿಂದ 36 ಗಂಟೆಯಲ್ಲಿಯೇ ಹಸೆಮಣೆ ಏರಬೇಕಿದ್ದ ಆರೋಪಿ ಈಗ ಜೈಲು ಸೇರಿದ್ದಾನೆ. ಚಿತ್ರದುರ್ಗದ ಶೂರ ವಾರಪತ್ರಿಕೆ ಸಂಪಾದಕ ಮಂಜುನಾಥ್ ಕೊಲೆಯಾದ ದುರ್ದೈವಿ. ಆರೋಪಿ ವಿಜಯಕುಮಾರ್ ಬಂಧಿತ ಆರೋಪಿಯಾಗಿದ್ದು, ಇದೇ ಆಗಸ್ಟ್ 25 ರಂದು ವಿಜಯ್‍ಕುಮಾರ್...

ತಾಯಿಯನ್ನು ಕೊಂದ ತಂದೆಯನ್ನೇ ಜೈಲಿಗೆ ಕಳುಹಿಸಿದ ಮಗ ಗ್ರಾಮದಲ್ಲಿ ಈಗ ಹೀರೋ!

1 month ago

ಚಿತ್ರದುರ್ಗ: ಮಗನೊಬ್ಬ ತನ್ನ ತಾಯಿಯನ್ನ ಕೊಂದ ತಂದೆಯನ್ನೆ ಜೈಲಿಗೆ ಕಳಿಸಿದ್ದು, ಆತನಿಗೆ ಅನಾಥ ಪ್ರಜ್ಞೆ ಕಾಡದಿರಲೆಂದು ಖಾಸಗಿ ಶಾಲೆಯೊಂದು ಆತನನ್ನು ದತ್ತು ಪಡೆದಿದೆ. ಬಗ್ಗಲರಂಗವ್ವನಹಳ್ಳಿ ಗ್ರಾಮದ ನಾಲ್ಕು ವರ್ಷದ ಬಾಲಕ ಧನುಷ್ ತಾಯಿ ಕೊಲೆಯಾದಾಗ ಕಣ್ಣಾರೆ ಕಂಡ ಸತ್ಯವನ್ನ ನ್ಯಾಯಾಧೀಶರ ಮುಂದೆ...

ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

2 months ago

ಚಿತ್ರದುರ್ಗ: ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಸಮೀಪ ನಡೆದಿದೆ. ಚಳ್ಳಕೆರೆ ತಾಲೂಕಿನ ಚೌಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವಘಡ...