Sunday, 17th February 2019

Recent News

4 days ago

ಸಾಧಕ ಕೋತಿರಾಜ್‍ಗೆ ಸರ್ಕಾರ ಕಲ್ಪಿಸುತ್ತಿಲ್ಲ ಮನೆ ಭಾಗ್ಯ!

ಚಿತ್ರದುರ್ಗ: ತನ್ನ ಜೀವದ ಹಂಗು ತೊರೆದು ಮತ್ತೊಬ್ಬರ ಜೀವರಕ್ಷಣೆ ಮಾಡುವ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್‍ಗೆ ಕರ್ನಾಟಕ ಸರ್ಕಾರ ಈವರೆಗೆ ಮನೆ ಭಾಗ್ಯ ಕರುಣಿಸಿಲ್ಲ. ಸತತ ನಾಲ್ಕು ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆ ಕಲ್ಪಿಸುವಂತೆ ಚಿತ್ರದುರ್ಗದಲ್ಲಿ ಅರ್ಜಿ ಸಲ್ಲಿಸುತ್ತಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ರಾಕ್ ಕ್ಲೈಮಿಂಗ್ ಹಾಗು ವಾಲ್ ಕ್ಲೈಮಿಂಗ್‍ನಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಸಾಧಿಸಿದ್ದಾರೆ. ಆದ್ರೆ ಈ ಸಾಧಕನಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಈ ಸಾಧಕನ ಚಾತುರ್ಯತೆ ಗಮನಿಸಿರೊ ತಮಿಳುನಾಡು […]

5 days ago

ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

ಚಿತ್ರದುರ್ಗ: ವಿವಿಧ ತರಕಾರಿಗಳು ಹಾಗು ಹಣ್ಣುಗಳಲ್ಲಿ ಕಣ್ಮನ ತಣಿಸುವ ಹೂಗಳ ಉದ್ಯಾನವನದಲ್ಲಿ, ಭಕ್ತರನ್ನು ಆಕರ್ಷಿಸುತ್ತಿರೋ ಸಿದ್ದಗಂಗಾ ಶ್ರೀಗಳು ಹಾಗು ಭೂಮಿತಾಯಿಯ ಕಲಾಕೃತಿಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥದ್ದೊಂದು ಅದ್ಭುತ ಲೋಕ ಕೋಟೆನಾಡು ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ. ಹೌದು. ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು 28ನೇ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಆಯೋಜಿಸಿದ್ದಾರೆ. ಬಗೆಬಗೆಯ ಕಲರ್ ಫುಲ್ ಹೂಗಳ...

ಮಾಳಿಗೆ ಕುಸಿದು ತಾಯಿ, ಮೂವರು ಮಕ್ಕಳ ದುರ್ಮರಣ

1 week ago

ಚಿತ್ರದುರ್ಗ: ಮಾಳಿಗೆ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ. ತಾಯಿ ನಾಗರತ್ನಮ್ಮ (30), ಮಕ್ಕಳಾದ ಕೋಮಲ (02), ತೀರ್ಥವರ್ಧನ(04) ಮತ್ತು ಯಶಸ್ವಿನಿ(05) ಮೃತ ದುರ್ದೈವಿಗಳು. ಚಂದ್ರಶೇಖರ್ ಹಾಗೂ ದೇವಿಕಾ ಎಂಬವರಿಗೆ...

ಅನ್ನಸಂತರ್ಪಣೆಯೊಂದಿಗೆ `ನಟಸಾರ್ವಭೌಮ’ನಿಗೆ ಅಭಿಮಾನಿಗಳು ಸ್ವಾಗತ

1 week ago

ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲೆಯ ಬಸವೇಶ್ವರ ಚಿತ್ರ ಮಂದಿರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಕೋಟೆನಾಡಿನ ಬಸವೇಶ್ವರ ಚಿತ್ರ ಮಂದಿರದಲ್ಲಿ...

ಚಿತ್ರದುರ್ಗ ಪೊಲೀಸರಿಂದ ನಾಟಕ ಪ್ರದರ್ಶನ – ಸಿಬ್ಬಂದಿ ಅಭಿನಯಕ್ಕೆ ಮನಸೋತ ಅಧಿಕಾರಿಗಳು

2 weeks ago

ಚಿತ್ರದುರ್ಗ: ಪೊಲೀಸರು ಅಂದರೆ ಕೇವಲ ಕಾನೂನು ಪಾಲಕರು ಅಷ್ಟೇ ಅಂತ ಭಾವಿಸಿದ್ದೇವೆ. ಆದರೆ ಪೊಲೀಸರಲ್ಲೂ ಅದ್ಭುತ ಕಲಾವಿದರಿದ್ದಾರೆ ಎಂಬುದನ್ನ ಚಿತ್ರದುರ್ಗ ಪೊಲೀಸರು ಸಾಬೀತುಪಡಿಸಿದ್ದಾರೆ. ದಿನ ನಿತ್ಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಅವರ ದೈನಂದಿನ ಒತ್ತಡದ ಬದುಕನ್ನು ಬದಿಗಿಟ್ಟು, ಮುಖಕ್ಕೆ ಬಣ್ಣ ಹಚ್ಚಿ...

ಸಾಣೇಹಳ್ಳಿ ತರಳಬಾಳು ಪಂಡಿತಾರಾಧ್ಯ ಶ್ರೀಗಳ ಕಾರು ಅಪಘಾತ..!

2 weeks ago

ಚಿತ್ರದುರ್ಗ: ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಇಂದು ಜಿಲ್ಲೆಯ ಸಾಸಲು ಗ್ರಾಮದ ಬಳಿ ಅಪಘಾತ ನಡೆದಿದೆ. ಹೊಳೆಲ್ಕರೆ ತಾಲೂಕಿನ ಸಾಸಲು ಗ್ರಾಮದ ಬಳಿ ಪಂಡಿತಾರಾಧ್ಯ ಶ್ರೀಗಳ ಕಾರಿಗೆ ಲಾರಿಯೊಂದು...

ಪ್ರಧಾನಿ ಅಭ್ಯರ್ಥಿ ಘೋಷಿಸಿದರೆ ಮಹಾಮೈತ್ರಿಯಲ್ಲಿ ಗೊಂದಲ ಫಿಕ್ಸ್: ಬಿ.ಜಿ.ಪುಟ್ಟಸ್ವಾಮಿ

2 weeks ago

– ರೈತರ ಸಾಲಮನ್ನಾ ಅನ್ನೋದು ಮುಗಿಯದ ಅಧ್ಯಾಯ – ಕುಟುಂಬ ರಾಜಕಾರಣ ಮಾಡೋರಿಂದ ರಚನೆ ಆಗಿದ್ದೇ ಮಹಾಘಟಬಂಧನ್ ಚಿತ್ರದುರ್ಗ: ಮಹಾಘಟಬಂಧನ್‍ನಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆಯಾದರೆ ಅವರಲ್ಲಿಯೇ ಗೊಂದಲ ಉಂಟಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ...

ನಿಂತಿದ್ದ ಲಾರಿಗೆ ಟ್ಯಾಂಕರ್ ಡಿಕ್ಕಿ- ಇಬ್ಬರ ಸಾವು

2 weeks ago

ಚಿತ್ರದುರ್ಗ: ಲಾರಿಗೆ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗೇಟ್ ಬಳಿ ನಡೆದಿದೆ. ಹಾಸನ ಮೂಲದ ಶಕೀಲ್(32) ಹಾಗೂ ಮಹಮ್ಮದ್ ರಫಿ(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗ ಹಾಗು ಅಜಾಗರೂಕತೆಯಿಂದ ಟ್ಯಾಂಕರ್...