Sunday, 22nd July 2018

Recent News

1 month ago

ಮುಂದುವರಿದ ವರುಣನ ಆರ್ಭಟ- ಶಾಲಾ-ಕಾಲೇಜಿಗೆ ರಜೆ, ಅಪಾಯದ ಮಟ್ಟ ಮೀರಿದ ತುಂಗಾಭದ್ರ ಜಲಾಶಯ

ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಡಿಕೇರಿ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕ – ಕೇರಳ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪೆರುಂಬಾಡಿ – ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ 25 ಕಡೆಗಳಲ್ಲಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜುಲೈ 12ರ ವರೆಗೆ ವಾಹನ ಸಂಚಾರ ನಿಷೇಧಗೊಳಿಸಿ ಡಿಸಿ ಶ್ರೀ ವಿದ್ಯಾ ಆದೇಶಿಸಿದ್ದಾರೆ. ಮಳೆಯಿಂದಾಗಿ ಅಂಗನವಾಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲಾ – ಕಾಲೇಜುಗಳಿಗೆ ಇಂದೂ ಸಹ ರಜೆ ಘೋಷಿಸಲಾಗಿದೆ. […]

1 month ago

ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

ಚಿಕ್ಕಮಗಳೂರು: ರಾತ್ರಿ ಒಂಬತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಸಂಚಾರಕ್ಕೆ ನಿರ್ಬಂಧವಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖ ಮಾರ್ಗದಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶಿರಾಡಿ ಘಾಟ್ ಬಂದ್ ಆದ ಮೇಲೆ ಕಳೆದ 4 ತಿಂಗಳಿನಿಂದ ಕುದುರೆಮುಖದಿಂದ ಮಂಗಳೂರಿಗೆ ಹೋಗುವ ಭಾರೀ ವಾಹನಗಳು ಹಾಗೂ ಇತರೇ ವಾಹನಗಳು ಮಾರ್ಗದಲ್ಲಿ ರಾತ್ರಿ ಪಾಳಯದಲ್ಲೂ ಸಂಚರಿಸಲು...

ಅಪಘಾತಗೊಂಡಿದ್ದ ಆಲ್ಟೋ ಕಾರು ನೋಡಲು ಹೋಗಿ ಲಾರಿಗೆ ಸಫಾರಿ ಕಾರು ಡಿಕ್ಕಿ

1 month ago

ಚಿಕ್ಕಮಗಳೂರು: ಅಪಘಾತವಾಗಿ ನಿಂತಿದ್ದ ಕಾರನ್ನ ನೋಡಲು ಹೋಗಿ ಸಫಾರಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾರ್ಗಲ್ ಗ್ರಾಮದಲ್ಲಿ ನಡೆದಿದೆ. ಆಲ್ಟೋ ಕಾರೊಂದು ಇಂದು ಬೆಳಗ್ಗೆ ಅಪಘಾತವಾಗಿ ರಸ್ತೆ ಬದಿ ನಿಂತಿತ್ತು. ಮಂಗಳೂರಿನಿಂದ ಬರುತ್ತಿದ್ದ ಸಫಾರಿ...

ಮೈದುಂಬಿ ಹರಿಯುತ್ತಿದೆ ಕಲ್ಲತ್ತಿಗರಿ ಫಾಲ್ಸ್

1 month ago

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿದೆ. ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್ ಗಿರಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ದಶಕಗಳ ಬಳಿಕ ಕಲ್ಲತ್ತಿಗರಿ ಫಾಲ್ಸ್‍ನಲ್ಲಿ ಭಾರೀ...

ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

1 month ago

ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಆರು ತಿಂಗಳು ಭಕ್ತರಿಗೆ ದರ್ಶನ ನೀಡುವುದಿಲ್ಲ. ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡ್ತಿದ್ದ...

ಟಿಂಬರ್ ಕೆಲಸಕ್ಕಾಗಿ ಆನೆಗಳನ್ನ ಹೊತ್ತೊಯ್ಯುತ್ತಿದ್ದ ಲಾರಿ ಸಹಿತ ಮಾವುತ ವಶಕ್ಕೆ!

1 month ago

ಚಿಕ್ಕಮಗಳೂರು: ಟಿಂಬರ್ ಕೆಲಸಕ್ಕಾಗಿ ಕೇರಳದಿಂದ ಚಿಕ್ಕಮಗಳೂರಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಸೀತಾಳಯ್ಯನ ಗಿರಿ ಮಂಜುನಾಥ ಕಾಫಿ ತೋಟದಲ್ಲಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಆನೆಗಳನ್ನು ಸಾಗಿಸುತ್ತಿದ್ದ ವಿಚಾರವನ್ನು ಪರಿಸರವಾದಿ ಗಿರೀಶ್ ಅರಣ್ಯ ಇಲಾಖೆಗೆ ಮಾಹಿತಿ...

ಜಲಕ್ರೀಡೆ ವಿಡಿಯೋ ಮಾಡ್ತಿದ್ದ ಪ್ರವಾಸಿಗರ ಮೇಲೆ ಎರಗಿಬಂದ ಆನೆಗಳು: ವಿಡಿಯೋ ವೈರಲ್

1 month ago

ಚಿಕ್ಕಮಗಳೂರು: ತಾಯಿ ಆನೆ ತನ್ನ ಮರಿ ಆನೆಗಳೊಂದಿಗೆ ನೀರಲ್ಲಿ ಆಟವಾಡ್ತಿದ್ದ ದೃಶ್ಯ ಸೆರೆ ಹಿಡಿಯುತ್ತಿದ್ದ ಪ್ರವಾಸಿಗರ ಜೀಪಿನ ಮೇಲೆ ಆನೆಯೊಂದು ದಾಳಿಗೆ ಮುಂದಾದ ಘಟನೆ ವಿಡಿಯೋ ವೈರಲ್ ಆಗಿದೆ. ಜಿಲ್ಲೆಯ ಮುತ್ತೋಡಿ ಭದ್ರಾ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಜೂನ್ 5 ರಂದು...

ಕಡೂರಿನಲ್ಲಿ ನೀರಿನಲ್ಲಿಯೇ ಬೆಳಗಿತು ದೀಪ – ಸ್ಥಳೀಯರಲ್ಲಿ ಅಚ್ಚರಿ

2 months ago

ಚಿಕ್ಕಮಗಳೂರು: ನೀರಲ್ಲಿ ದೀಪ ಉರಿಯುತ್ತೆ ಅಂದ್ರೆ ಯಾರೂ ನಂಬೋದಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಡೆಯೋ ಎಣ್ಣೆಹೊಳೆ ಪೂಜಾ ಕಾರ್ಯಕ್ರಮದಲ್ಲಿ ನೀರಿನಿಂದಲೇ ದೀಪ ಉರಿಸಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯೋ ಈ ಪೂಜಾ ಕಾರ್ಯ ಕಳೆದ...