Tuesday, 21st January 2020

2 hours ago

ನಟಿ ರಚಿತಾ ರಾಮ್ ಶೃಂಗೇರಿಗೆ ಭೇಟಿ

ಚಿಕ್ಕಮಗಳೂರು: ಡಿಂಪಲ್ ಬೆಡಗಿ ರಚಿತಾ ರಾಮ್ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. ದೇವಸ್ಥಾನಕ್ಕೆ ಬಂದು ಶಾರದಾಂಬೆ ಹಾಗೂ ತೋರಣ ಗಣಪತಿ ದರ್ಶನ ಪಡೆದು ಹೊರನಾಡಿಗೆ ಹೋಗಬೇಕು ಎಂದು ಹಿಂದಿರುಗಿದ್ದಾರೆ. ರಚಿತಾ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಎಲ್ಲರಿಗೂ ಸೆಲ್ಫಿಗೆ ಪೋಸ್ ಕೊಟ್ಟ ರಚಿತಾ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಅಲ್ಲದೆ “ಪರ್ಸನಲ್ ಆಗಿ ಬಂದಿದ್ದೇನೆ. ಸಾರಿ. ಹೊರನಾಡಿಗೆ ಹೋಗಬೇಕು ತಡವಾಗುತ್ತದೆ” ಎಂದು ಹೇಳಿ ಹೋಗಿದ್ದಾರೆ. ಕಳೆದ ಐದು ದಿನಗಳಿಂದ ಶೃಂಗೇರಿ ಶಾರದಾಂಭೆ […]

18 hours ago

ಮಂಗಳೂರಲ್ಲಿ ಬಾಂಬ್ ಪತ್ತೆ, ಪೊಲೀಸರು ಮತ್ತೊಂದು ಕಥೆ ಸೃಷ್ಟಿಸದಿರಲಿ: ಹೆಚ್‍ಡಿಕೆ

ಚಿಕ್ಕಮಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ ಪತ್ತೆ ಮಾಡಬೇಕು. ಇದಕ್ಕೇ ಹದಿನೈದು ದಿನ ಅಥವಾ ತಿಂಗಳ ಸಮಯ ಪಡೆದು, ಬಳಿಕ ಪೊಲೀಸರು ಮತ್ತೊಂದು ಕಥೆ ಸೃಷ್ಟಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಶೃಂಗೇರಿಯಲ್ಲಿ ಕುಟುಂಬದಿಂದ ನಡೆಯುತ್ತಿರುವ ಯಾಗದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಎಚ್‍ಡಿಕೆ,...

ನಂದಿಗಿರಿಧಾಮದಲ್ಲಿ ಪ್ರವಾಸಿಗರು ಐಸ್ ಕ್ರೀಂ, ತಿಂಡಿ ತಿನ್ನಂಗಿಲ್ಲ

3 days ago

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಅಂದ್ರೆ ಅದು ಪ್ರೇಮಿಗಳ ಪಾಲಿನ ಹಾಟ್ ಫೇವರಿಟ್ ತಾಣ. ಅಲ್ಲಿ ಸದಾ ಪ್ರೇಮ ಪಕ್ಷಿಗಳದ್ದೇ ಕಲರವ. ಆದರೆ ಆ ಪ್ರೇಮಧಾಮ ನಂದಿಗಿರಿಧಾಮಕ್ಕೆ ಬರೋ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಈಗ ರೌಡಿಗಳ ಕಾಟ ಶುರುವಾಗಿದೆ. ಅವರು ಅಂತಿಂಥ ರೌಡಿಗಳಲ್ಲ,...

ದಾಖಲೆ ಇಲ್ಲದೆ ದೇಶಕ್ಕೆ ಬಂದ್ರೆ ಸಹಿಸಲು ಆಗಲ್ಲ: ಸಂಸದೆ ಶೋಭಾ

3 days ago

ಚಿಕ್ಕಮಗಳೂರು: ವೀಸಾದ ಸಮಯ ಮುಗಿದ ಬಳಿಕ ಯಾವ ದೇಶದಲ್ಲೂ ಇರುವಂತಿಲ್ಲ. ಅದೇ ರೀತಿ ನಮ್ಮ ದೇಶದಲ್ಲೂ ಮಾಡುವುದು ತಪ್ಪಲ್ಲ. ಯಾವುದೇ ದಾಖಲೆ ಇಲ್ಲದೆ ಭಾರತಕ್ಕೆ ಬಂದರೆ ಅದನ್ನ ಸಹಿಸಲು ಆಗಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಚಿಕ್ಕಮಗಳೂರಿನ ರಾಷ್ಟ್ರ ಜಾಗರಣಾ...

ಐದು ದಿನಗಳ ಕಾಲ ಶೃಂಗೇರಿಯಲ್ಲಿ ದೊಡ್ಡ ಗೌಡರ ಯಾಗ

4 days ago

ಚಿಕ್ಕಮಗಳೂರು: ರಾಜಕೀಯವಾಗಿ ಒಂದಲ್ಲ ಒಂದು ರೀತಿ ಹಿನ್ನೆಡೆ ಕಾಣುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೊಸ ವರ್ಷದ ಆರಂಭದಲ್ಲಿ ಶಕ್ತಿ ದೇವತೆ ಶೃಂಗೇರಿಯ ಶಾರದಾಂಬೆಯ ಮೊರೆ ಹೋಗಿದ್ದಾರೆ. ಪತ್ನಿ ಜೊತೆ ಶೃಂಗೇರಿಗೆ ಆಗಮಿಸಿರುವ ದೊಡ್ಡಗೌಡರು ಮಂಗಳವಾರದವರೆಗೂ ಶಾರದಾಂಬೆ ಸನ್ನಿಧಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ....

ಯಶ್, ಪುನೀತ್ ಅಲ್ಲ, ಸೈನಿಕರು ನಿಜವಾದ ಹೀರೋಗಳು: ಹನುಮಂತಪ್ಪ ಕೊಪ್ಪದ್ ಪತ್ನಿ

5 days ago

ಚಿಕ್ಕಮಗಳೂರು: ಸಿನಿಮಾಗಳಲ್ಲಿ ಮೂರು ಗಂಟೆ ನಟನೆ ಮಾಡುವ ಯಶ್, ಪುನೀತ್ ನಿಜವಾದ ಹೀರೋಗಳಲ್ಲ. ದೇಶಕ್ಕಾಗಿ ಹೋರಾಡುವ ಸೈನಿಕರು ಹಾಗೂ ದೇಶಕ್ಕಾಗಿ ಬೆವರು ಹರಿಸಿ ದುಡಿಯೋ ರೈತರು ನಿಜವಾದ ಹೀರೋಗಳು ಎಂದು ಮೃತ ಯೋಧ ಹನುಂತಪ್ಪ ಕೊಪ್ಪದ್ ಪತ್ನಿ ಹೇಳಿದ್ದಾರೆ. ನಗರದ ವಂದೇ...

ಭದ್ರಾ ನದಿಯಲ್ಲಿ ಈಜಲು ಹೋಗಿ ಅಯ್ಯಪ್ಪ ಮಾಲಾಧಾರಿ ಸಾವು

6 days ago

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋದ ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದ ಶಿವಪ್ರಸಾದ್ (35) ಮೃತ ದುರ್ದೈವಿ. ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಬಳಿ ಘಟನೆ...

ಮಾಧ್ಯಮಗಳ ಜೊತೆ ಸಿಎಂ ಯಡಿಯೂರಪ್ಪ ಕ್ಷಮೆ

7 days ago

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪೊಲೀಸರು ಮಾಡಿದ ತಪ್ಪಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ. ಇಂದು ಶ್ರೀ ಗುರು ಸಿದ್ಧರಾಮೇಶ್ವರರ 847ನೇ ಜಯಂತಿಯ ಅಂಗವಾಗಿ ಸಿಎಂ ಯಡಿಯೂರಪ್ಪ ಅಜ್ಜಂಪುರಕ್ಕೆ ಆಗಮಿಸಿದ್ದರು. ಇದೇ ವೇಳೆ ವೇದಿಕೆ ಮುಂಭಾಗಕ್ಕೆ ಪತ್ರಕರ್ತರು ಹೋಗಲು...