Tuesday, 17th July 2018

Recent News

5 months ago

ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ- ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಮಿಕಲ್ ಕಾರ್ಖಾನೆ ಹೊತ್ತಿ ಉರಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕ್ಷಣ ಕ್ಷಣಕ್ಕೂ ಬೆಂಕಿ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿವೆ. ಬೆಂಕಿ ನಂದಿಸಲು ಪೀಣ್ಯ, ಯಶವಂತಪುರ, ತುಮಕೂರುನಿಂದ ಅಗ್ನಿಶಾಮಕ ವಾಹನಗಳು ಬಂದಿದ್ವು. ಲಿಯೋನಿಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಕೆಮಿಕಲ್ ಹಾಗೂ ಇನ್ನಿತರೆ ವಸ್ತುಗಳು ಸುಟ್ಟು ಭಸ್ಮವಾಗಿದೆ. ಶಿವರಾತ್ರಿ ಹಬ್ಬವಾದುದರಿಂದ ಕಾರ್ಖಾನೆಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

5 months ago

ನೆಲಮಂಗಲದಲ್ಲಿ ಸರಣಿ ಅಪಘಾತ- ಐದು ವಾಹನಗಳಲ್ಲಿದ್ದ ಪ್ರಯಾಣಿಕರು ಪಾರು

ಬೆಂಗಳೂರು: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 3 ಕಾರು, ಒಂದು ಲಾರಿ ಹಾಗೂ ಒಂದು ಮಿನಿಬಸ್ ನಡುವೆ ಪರಸ್ಪರ ಹಿಂದಿನಿಂದ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಐದು ವಾಹನಗಳಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ಮಾರ್ಗದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ವಾಹನಗಳ ನಡುವೆ...

ತಮಿಳ್ನಾಡಿನ ಸೂಳಗಿರಿಯಲ್ಲಿ ಭೀಕರ ಅಪಘಾತ – ಬೆಂಗ್ಳೂರಿನ ವೈದ್ಯ ದಂಪತಿ ಸೇರಿ ಮೂವರ ದುರ್ಮರಣ

6 months ago

ಬೆಂಗಳೂರು: ತಮಿಳುನಾಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ವೈದ್ಯ ದಂಪತಿ ಸೇರಿದಂತೆ ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಆರ್.ಟಿ ನಗರ ನಿವಾಸಿಗಳಾದ ಅಂಬುಜಮ್ಮ(50) ಪತಿ ರಾಮಚಂದ್ರ (74) ಹಾಗೂ ಲಾರಿ ಚಾಲಕ ಕುಮಾರ್(30) ಎಂದು ಗುರುತಿಸಲಾಗಿದೆ....

ಅಪಘಾತದಲ್ಲಿ ಕಾಲು ತುಂಡಾಗಿ ನಡುರಸ್ತೆಯಲ್ಲೇ ನರಳಾಡಿದ ಯುವಕ

6 months ago

ಬೆಂಗಳೂರು: ಹೆದ್ದಾರಿ ಅಪಘಾತದಲ್ಲಿ ತುಮಕೂರು ಮೂಲದ ಹರೀಶ್ ದೇಹ ಎರಡು ತುಂಡಾಗಿ ನರಳಾಡಿ ಮೃತ ಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ. ಈ ಘಟನೆ ಕೂಡ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಬಳಿ ನಡೆದಿದೆ. ವಸಂತ್(28),...

ನಿತ್ಯಾನಂದ ಸ್ವಾಮೀಜಿ ಭಕ್ತರಿಂದ ಹಿಟ್ ಆ್ಯಂಡ್ ರನ್- ಶಿಷ್ಯೆ, ನಟಿ ರಂಜಿತಾ ಎಸ್ಕೇಪ್

6 months ago

ಬೆಂಗಳೂರು: ಕಾಮಿ ಸ್ವಾಮಿ ಕುಖ್ಯಾತಿಯ ನಿತ್ಯಾನಂದ ಸ್ವಾಮೀಜಿಯ ಶಿಷ್ಯೆ ರಂಜಿತಾ ಹೋಗ್ತಿದ್ದ ಧ್ಯಾನಪೀಠ ಆಶ್ರಮಕ್ಕೆ ಸೇರಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ನಟಿ, ಶಿಷ್ಯೆ ರಂಜಿತಾ ಬೇರೊಂದು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ. ಇಂದು ಮಧ್ಯಾಹ್ನ ನೆಲಮಂಗಲದ ಜಿಂದಾಲ್ ಬಳಿ...

ಇಲಿಯನ್ನು ಅಟ್ಟಾಡಿಸಿಕೊಂಡು ಬಂದು ಪೈಪ್ ನಲ್ಲಿ ಸಿಲುಕಿಕೊಂಡ ನಾಗರಹಾವು!

6 months ago

ಬೆಂಗಳೂರು: ಇಲಿಯನ್ನು ಅಟ್ಟಾಡಿಸಿಕೊಮಡು ಬಂದ ನಾಗರಹಾವೊಂದು ಮನೆಗೆ ನುಗ್ಗಿ ಪ್ಲಾಸ್ಟಿಕ್ ಪೈಪ್ ನಲ್ಲಿ ಅದರ ತಲೆ ಸಿಲುಕಿ ಗಂಟೆಗಟ್ಟಲೆ ನರಳಾಡಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಾಗರಾಜು ಎಂಬವರ ಮನೆಗೆ...

ಉರ್ದು ಶಾಲೆಯಲ್ಲಿ ಕಾಲಿನಿಂದ ತುಳಿದು ರಾಷ್ಟ್ರ ಧ್ವಜಕ್ಕೆ ಅವಮಾನ

6 months ago

ಬೆಂಗಳೂರು: ಗಣರಾಜ್ಯೋತ್ಸವದ ಆಚರಣೆ ನಂತರ ರಾಷ್ಟ್ರ ಧ್ವಜವನ್ನು ಕಾಲಿನಿಂದ ತುಳಿದು ಅವಮಾನ ಮಾಡಿರುವ ಘಟನೆ ನಗರದ ವರ್ತೂರು ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ. 69 ನೇ ಗಣರಾಜ್ಯೋತ್ಸವ ಅಂಗವಾಗಿ ಇಂದು ಮುಂಜಾನೆ ಶಾಲೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲಾಗಿತ್ತು. ಸಂಜೆ 5:30 ಸಮಯದಲ್ಲಿ...

ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ – ವೃದ್ಧ ದಂಪತಿ ಸ್ಥಳದಲ್ಲೇ ಸಾವು

6 months ago

ಬೆಂಗಳೂರು: ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರ ಬಳಿ ನಡೆದಿದೆ. ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಮೃತ ಪಟ್ಟಿದ್ದು,...