Monday, 21st January 2019

Recent News

19 hours ago

ರಾತ್ರಿ ಆಸ್ಪತ್ರೆಗೆ ಕೈ ನಾಯಕರ ಭೇಟಿ- ಒಂದೂವರೆ ಗಂಟೆ ಆನಂದ್ ಸಿಂಗ್ ಜೊತೆ ಚರ್ಚೆ

ಬೆಂಗಳೂರು: ತಡರಾತ್ರಿ ಅಪೋಲೋ ಆಸ್ಪತ್ರೆ ಅಕ್ಷರಶಃ ಕಾಂಗ್ರೆಸ್ ನಾಯಕರಿಂದ ತುಂಬಿಹೋಗಿತ್ತು. ಈಗಲ್ಟನ್ ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ತಡರಾತ್ರಿ ಕಾಂಗ್ರೆಸ್ ನಾಯಕರ ದಂಡೇ ಆಸ್ಪತ್ರೆಗೆ ಹರಿದು ಬಂದಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹಸಚಿವ ಎಂ.ಬಿ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ ಶಿವಕುಮಾರ್, ಸಚಿವ ದೇಶಪಾಂಡೆ, ಸಚಿವ ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದರಾದ […]

19 hours ago

ರೆಸಾರ್ಟಿನಲ್ಲಿ ಕೈ ಶಾಸಕರ ಬಡಿದಾಟಕ್ಕೆ ಖಾಕಿ ಎಂಟ್ರಿ?

ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ಇಬ್ಬರ ನಡುವಿನ ಗಲಾಟೆಗೆ ಈಗ ಪೊಲೀಸರು ಎಂಟ್ರಿ ಕೊಟ್ಟಿದ್ದು, ತನಿಖೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈಗಲ್‍ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೆ ಒಳಗಾದ ಆನಂದ್ ಸಿಂಗ್ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪೋಲೋ ಆಸ್ಪತ್ರೆ ತನ್ನ ಮೆಡಿಕೋ ಲೀಗಲ್...

ರಾತ್ರೋರಾತ್ರಿ ಬೆಂಗಳೂರಿನ ಖಾಲಿ ಸೈಟ್‍ನಲ್ಲಿ ಎದ್ದು ನಿಂತ ಭುವನೇಶ್ವರಿ!

20 hours ago

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿಬಿಎಂಪಿಯ ಒಣ ಪ್ರತಿಷ್ಟೆಯಿಂದ ಒಂದು ವಾರ ಪಾಲಿಕೆಯ ಖಾಲಿ ಸೈಟಿನ ಮುಳ್ಳಿನಲ್ಲಿ ಮಲಗಿದ್ದ ಭುವನೇಶ್ವರಿ ದೇವಿ, ರಾತ್ರೋರಾತ್ರಿ ನಗರದ ಖಾಲಿ ಸೈಟಿನಲ್ಲಿ ಎದ್ದು ನಿಂತಿದ್ದಾಳೆ. ಹೌದು.ನಗರದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಬಿಬಿಎಂಪಿ ಜಾಗದಲ್ಲಿ...

ರೆಸಾರ್ಟಿನಲ್ಲಿ ಗನ್ ಕಿತ್ತುಕೊಳ್ಳಲು ಗನ್ ಮ್ಯಾನ್ ಕಿವಿ ಕಚ್ಚಿ ಕಿತ್ತಾಡಿದ ಗಣೇಶ್!

21 hours ago

ಬೆಂಗಳೂರು: ಕಾಂಗ್ರೆಸ್ ಶಾಸಕರ ಈಗಲ್ ಟನ್ ರೆಸಾರ್ಟ್ ಮಾರಾಮಾರಿ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಕಂಪ್ಲಿ ಶಾಸಕ ಗನ್ ಮ್ಯಾನ್ ಕಿವಿ ಕಚ್ಚಿದ್ದಾರೆ ಎನ್ನುವ ವಿಚಾರ ಪಕ್ಷದ ಮೂಲಗಳಿಂದ ಲಭ್ಯವಾಗಿದೆ. ಗನ್ ಮ್ಯಾನ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ರಹಸ್ಯವಾಗಿ ಖಾಸಗಿ ಆಸ್ಪತ್ರೆಗೆ...

ಆನಂದ್ ಸಿಂಗ್-ಗಣೇಶ್ ನಡುವಿನ ‘ಬಾಟಲ್’ ಬ್ಯಾಟಲ್ – ರಾತ್ರಿ ನಿಜವಾಗಿ ಏನಾಯ್ತು? ಇಲ್ಲಿದೆ ಇನ್‍ಸೈಡ್ ಸ್ಟೋರಿ

1 day ago

ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಬಾಟಲ್ ಗಲಾಟೆಗೆ ಕಾಂಗ್ರೆಸ್ ಶಾಸಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಪಾರ್ಟಿ ಆರಂಭಗೊಂಡಾಗ ಎಲ್ಲರೊಂದಿಗೆ ಸರಿಯಾಗಿದ್ದ ಶಾಸಕರು ಮದ್ಯದ ಅಮಲು ಏರುತ್ತಿದಂತೆ ಪರಸ್ಪರ ಕಿತ್ತಾಟ ನಡೆಸಿದ್ದಾರೆ. ಗಲಾಟೆಯಲ್ಲಿ ಶಾಸಕ...

ಅಣ್ಣನಿಗೆ ಏನಾದ್ರೂ ಆದ್ರೆ ಬಳ್ಳಾರಿಯಲ್ಲಿ ರುದ್ರಾವತಾರ ನೋಡುತ್ತೀರಿ- ಆನಂದ್ ಸಿಂಗ್ ಬೆಂಬಲಿಗರಿಂದ ಪೋಸ್ಟ್

1 day ago

ಬಳ್ಳಾರಿ: ಅಣ್ಣನಿಗೆ ಏನಾದ್ರೂ ಆದರೆ ನಾವು ಸುಮ್ಮನಿರಲ್ಲ. ಬಳ್ಳಾರಿಯಲ್ಲಿ ರುದ್ರಾವತಾರ ನೋಡುತ್ತೀರಿ ಅಂತ ಶಾಸಕ ಆನಂದ್ ಸಿಂಗ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಆನಂದ್ ಸಿಂಗ್ ಬೆಂಬಲಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಗಣೇಶ್ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ನಾಯಕ ಮೇಲೆ ಹಲ್ಲೆಯಾಗಿರುವ...

ಸಣ್ಣ ಜಗಳ ನಡೆದಿದೆ: ಬಿರಿಯಾನಿ ತಿಂದ ಕಥೆ ಹೇಳಿದ ಜಮೀರ್

1 day ago

ಬೆಂಗಳೂರು: ಸ್ನೇಹಿತರ ಜೊತೆ ಜಗಳ ನಡೆಯುದಿಲ್ಲವೇ? ಹಾಗೇ ಸಣ್ಣ ಜಗಳ ನಡೆದಿದೆ ಅಷ್ಟೇ. ಆದರೆ ಈ ಗಲಾಟೆ ವಿಚಾರವನ್ನು ನೀವೇ ದೊಡ್ಡದು ಮಾಡಿದ್ದೀರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ಆನಂದ್ ಸಿಂಗ್ ಅವರ...

Blunt Injury, ಪ್ರತ್ಯೇಕ ವಾರ್ಡಿಗೆ ಆನಂದ್ ಸಿಂಗ್ ಶಿಫ್ಟ್

1 day ago

ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಕಣ್ಣು, ಎದೆ ಮತ್ತು ತಲೆಯ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಯತೀಶ್ ಸ್ಪಷ್ಟನೆ ನೀಡಿದ್ದಾರೆ. ಬ್ಲಂಟ್ ಇಂಜೂರಿ ಆಗಿದ್ದು ಸದ್ಯಕ್ಕೆ ಸಿಟಿ ಸ್ಕ್ಯಾನಿಂಗ್, ಎಕ್ಸ್ ರೇ ಮಾಡಲಾಗಿದೆ....