Wednesday, 19th September 2018

Recent News

1 week ago

ಇಬ್ಬರು ಕಳ್ಳರನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದ ಪೊಲೀಸರು!

ಬಳ್ಳಾರಿ: ಒಬ್ಬಂಟಿ ಮಹಿಳೆಯರ ಸರಗಳ್ಳತನ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರನಾಕ್ ಕಳ್ಳರನ್ನು ನಗರದ ಕೌಲಬಜಾರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಬಂಧಿತರಿಂದ ಬೆಳ್ಳಿ ಹಾಗೂ ಬಂಗಾರ ಸೇರಿದಂತೆ 17 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ತಾಲೂಕಿನ ಜಾನೆಕುಂಟೆ ತಾಂಡಾದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿನಾಯಕ್ (38) ಹಾಗೂ ಸಂಡೂರು ತಾಲೂಕಿನ ವೆಂಕಟಗಿರಿ ತಾಂಡಾದ ವೆಂಕಟೇಶ್ ನಾಯ್ಕ್ (43) ಬಂಧಿತ ಕಳ್ಳರು. ಆರೋಪಿಗಳ ವಿರುದ್ಧ ಬಳ್ಳಾರಿಯ ಕೌಲಬಜಾರ, ಕೊಪ್ಪಳದ ಕುಷ್ಟಗಿ, ಆಂಧ್ರಪ್ರದೇಶದ […]

1 week ago

ಗಣಿನಾಡಿನಲ್ಲಿ ಝಳಪಿಸಿದ ಮಚ್ಚು, ಲಾಂಗು..!

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗುಗಳು ಝಳಪಿಸಿವೆ. ಮನೆ ಖಾಲಿ ಮಾಡಿಸಲು ಮಚ್ಚು ಲಾಂಗುಗಳಿಂದ ದಾಳಿ ಮಾಡಿದ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೌಲಬಜಾರ ಪ್ರದೇಶದ ಗೋಲ್ಡ್ ಸ್ಮಿತ್ ಕಾಲೋನಿಯ ನಿವಾಸಿ ರಘುರಾಮ ಸುಬ್ರಹ್ಮಣ್ಯವರ ಮನೆ ಖಾಲಿ ಮಾಡಿಸಲು ವಕೀಲರೊಬ್ಬರು ಮಚ್ಚು ಲಾಂಗುಗಳಿಂದ ದಾಳಿ ಮಾಡಿಸಿದ್ದಾರಂತೆ. ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು, ಮನೆಯೆಲ್ಲ...

ಚುನಾವಣಾ ನಿವೃತ್ತಿ ಘೋಷಿಸಿದ ಕೈ ಶಾಸಕ ಬಿ.ಆನಂದ್ ಸಿಂಗ್

2 weeks ago

ಬಳ್ಳಾರಿ: ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ, ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಹಾಲಿ ಶಾಸಕ ಬಿ.ಆನಂದ್ ಸಿಂಗ್ ಚುನಾವಣೆಗೆ ನಿವೃತ್ತಿ ಘೋಷಿಸಿದ್ದಾರೆ. ಬುಧವಾರ ಹೊಸಪೇಟೆಯಲ್ಲಿ ನಡೆದ ವಾಲ್ಮೀಕಿ ಸಮಾಜದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ...

ಮತ ಹಾಕದ್ದಕ್ಕೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟ ಶಾಸಕ ಪರಮೇಶ್ವರ್ ನಾಯ್ಕ್

2 weeks ago

ಬಳ್ಳಾರಿ: ತನಗೆ ಮತ ಹಾಕದ್ದಕ್ಕೆ ಆಕ್ರೋಶಗೊಂಡು ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮತದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಬುಧವಾರ ಮೈಲಾರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಶಿಲಾನ್ಯಾಸ...

ಕುಡತಿನಿಯಲ್ಲಿ ಕಾಂಗ್ರೆಸ್ ಗೆದ್ದರೂ ಬಿಜೆಪಿ ಅಭ್ಯರ್ಥಿಗೆ ಅಧಿಕಾರ!

2 weeks ago

ಬಳ್ಳಾರಿ: ಜಿಲ್ಲೆಯ ಕುಡತಿನಿ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆದ್ದರೆ, ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಡೂರಿನ ತಾಲೂಕಿನ ಕುಡತಿನಿ ಪಟ್ಟಣ ಪಂಚಾಯತಿಗೆ ನಡೆದ 19 ವಾರ್ಡ್ ಗಳ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ...

ಚಿಕಿತ್ಸೆ ಬೇಕಾದ್ರೆ ಮಧ್ಯರಾತ್ರಿಯಿಂದಲೇ ಕ್ಯೂ ನಿಲ್ಲಬೇಕು-ಇದು ತೋರಣಗಲ್ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ..!

3 weeks ago

-ಪ್ರಶ್ನೆ ಮಾಡಿದ್ರೆ ಪ್ರವೇಟ್‍ಗೆ ಹೋಗಿ ಅಂತಾ ಅವಾಜ್ ಬಳ್ಳಾರಿ: ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ಮಧ್ಯರಾತ್ರಿಯಿಂದಲೇ ಕ್ಯೂ ಹಚ್ಚಬೇಕು. ಇದು ಬಳ್ಳಾರಿ ಜಿಲ್ಲೆಯ ಸಂಡೂರು ತೋರಣಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸ್ಥಿತಿ. ಈ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಗರ್ಭಿಣಿಯರಿಗೆ ತಪಾಸಣೆ...

ಗಣಿನಾಡಿನ ಚಿತ್ರಮಂದಿರದಲ್ಲಿ `ಅಯೋಗ್ಯ’ ಚಿತ್ರ ವೀಕ್ಷಿಸಿದ ನಿನಾಸಂ ಸತೀಶ್

3 weeks ago

ಬಳ್ಳಾರಿ: ಗಣಿನಾಡು ಬಳ್ಳಾರಿಗೆ ಅಯೋಗ್ಯ ಚಿತ್ರತಂಡ ಭೇಟಿ ನೀಡಿದ್ದು, ಅಲ್ಲಿನ ಉಮಾ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಣೆ ಮಾಡಿದೆ. ಅಯೋಗ್ಯ ಚಿತ್ರ ವೀಕ್ಷಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿನಾಸಂ ಸತೀಶ್ ಅವರು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಡೆಯಿಂದಲೂ ಅಭೂತಪೂರ್ವ...

ಗಂಗೆ ಪೂಜೆ ಮುಗಿಸಿ ಬರುತ್ತಿದ್ದ 26 ಜನರಿದ್ದ ಟ್ಯಾಕ್ಟರ್ ಪಲ್ಟಿ

3 weeks ago

ಬಳ್ಳಾರಿ: ಟ್ಯಾಕ್ಟರ್ ಆಯ ತಪ್ಪಿ ಪಲ್ಟಿಯಾದ ಪರಿಣಾಮ 26 ಜನರು ಗಾಯಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹಂಪಿ ಬಳಿ ನಡೆದಿದೆ. ಹಂಪಿಯ ಕೃಷ್ಣ ಬಜಾರ್ ಸಮೀಪ ಈ ಅಪಘಡ ಸಂಭವಿಸಿದೆ. ಇವರೆಲ್ಲರೂ ಹೊಸಪೇಟೆ ತಾಲೂಕಿನ ಮಲಪನಗುಡಿಯಿಂದ ಹಂಪಿಗೆ...