Sunday, 15th July 2018

Recent News

7 hours ago

10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಕಳೆದ 10 ವರ್ಷ ಕೆಲವರು ನನ್ನನ್ನು ವ್ಯಂಗ್ಯ ಮಾತುಗಳಿಂದ ಚುಚ್ಚಿದರು. ಆದರೆ ಈ ಭಾರೀ ಕ್ಷೇತ್ರ ಮತದಾರರು ನನ್ನ ಹಣೆಬರಹ ಬರೆದಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2013ರ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋತಿದ್ದು, ಈ ಬಾರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಭಿನಂದನಾ ಕಾರ್ಯಕ್ರಮದ ಬಳಿಕ […]

15 hours ago

ಚಿಕ್ಕೋಡಿಯಲ್ಲಿ ಧಾರಾಕಾರ ಮಳೆಗೆ 6 ಸೇತುವೆಗಳು ಜಲಾವೃತ!

ಬೆಳಗಾವಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಕೃಷ್ಣಾ ನದಿಯ ಒಳ ಹರಿವು ಹೆಚ್ಚಾಗುತ್ತಿದೆ. 1,39,000 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಅದರಲ್ಲಿ 1,28,000 ಕ್ಯೂಸೆಕ್ ನೀರನ್ನು ಹಿಪ್ಪರಗಿ ಜಲಾಶಯದ 16 ಗೇಟಗಳ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ. ಕೃಷ್ಣಾ ನದಿಯ ನೀರು ನದಿ ಪಾತ್ರ ಬಿಟ್ಟು ಹೊರ ಬರುತ್ತಿದೆ....

ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

3 days ago

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮದೇವತೆ ಬಂಗಾಳಿ ಬಾಬಾ ದೇವಸ್ಥಾನ ಆವರಣದಲ್ಲಿ ನದಿ ನೀರು ನುಗ್ಗಿದೆ. ಈ ದೇವಸ್ಥಾನ ದೂದ ಗಂಗಾ ನದಿ ಸಮೀಪದಲ್ಲಿದೆ. ಕೊಲ್ಹಾಪುರ...

ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

3 days ago

ಬೆಳಗಾವಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನವನದ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12.70 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ ಎಂದು ಆರ್ ಟಿಐ ಮೂಲಕ ಬಹಿರಂಗವಾಗಿದೆ. ನಗರದ ಆರ್ ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ ರವರು, ರಾಷ್ಟ್ರಪತಿ ಭವನ ಉದ್ಯಾನವನದ...

ಪವರ್ ಸ್ಟಾರ್ ಸಿನಿಮಾ ನೋಡಿ ಸ್ಟಂಟ್ ಕಲಿಕೆ – ಪುನೀತ್ ಮುಂದೆ ಸಾಹಸ ಪ್ರದರ್ಶಿಸಲು ಫ್ಯಾನ್ಸ್ ಆಸೆ!

6 days ago

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿತ್ರದಲ್ಲಿ ಮಾಡುವ ಸಾಹಸಗಳನ್ನು ಕಲಿತು ಈ ಎಲ್ಲ ಸಾಹಸ ಪ್ರದರ್ಶನಗಳನ್ನ ಅವರು ಆರಾಧಿಸುವ ಅಪ್ಪು ಮುಂದೆ ಪ್ರದರ್ಶಿಸಿಬೇಕೆಂದು ಅಭಿಮಾನಿಗಳು ತಮ್ಮ ಆಸೆ ವ್ಯಕ್ತ ಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಭಿಮಾನಿಗಳು...

ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿ ಅರೆಸ್ಟ್!

6 days ago

ಚಿಕ್ಕೂಡಿ: ಲವ್ವರ್ ಸಿಗಲಿಲ್ಲ ಅಂತ ಶಾಲೆಗೆ ಬೆಂಕಿ ಇಟ್ಟಿದ್ದ ಪಾಗಲ್ ಪ್ರೇಮಿಯನ್ನು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ. ಉಮೇಶ್ ಅಚಕನಹಳ್ಳಿ(18) ಬಂಧಿತ ಆರೋಪಿ. ಕಳೆದ ಜೂನ್ 4ರಂದು ಉಮೇಶ್ ಶಾಲೆಗೆ ಬೆಂಕಿ ಇಟ್ಟಿದ್ದನು. ಪ್ರಕರಣದ...

ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

7 days ago

ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯ ಬ್ಯಾಗನ್ನು ಶಾಲೆ ಗೋಡೆಯ ಬಳಿ ಇಟ್ಟಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಆ ಬ್ಯಾಗಿನಿಂದ...

ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬೆಳಗಾವಿಯಿಂದ ಅಭಿಮಾನಿ ಸೈಕಲ್ ಯಾತ್ರೆ!

7 days ago

ಬೆಳಗಾವಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಕುಂದಾ ನಗರಿ ಬೆಳಗಾವಿಯಿಂದ ಅಭಿಮಾನಿಯೊಬ್ಬರು ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಭಾನುವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ...