Thursday, 20th June 2019

Recent News

5 hours ago

ಗ್ರಾಮ ವಾಸ್ತವ್ಯಕ್ಕಾಗಿ ಸಿಎಂ ರೈಲು, ಕೆಎಸ್‌ಆರ್‌ಟಿಸಿ ಯಾನ – ಸಿಎಂ ಸ್ವಾಗತಕ್ಕೆ ಸಜ್ಜಾಗಿದೆ ಚಂಡರಕಿ ಗ್ರಾಮ

ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರ, ಆಪರೇಷನ್ ಕಮಲ ರಗಳೆ ಹಾಗೂ ಮೈತ್ರಿ ಪಕ್ಷದ ಜೊತೆಗಿನ ರಾಜಕೀಯದಿಂದ ಹೊರ ಬಂದಂತೆ ಇರುವ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಯಾದಗಿರಿಗೆ ರೈಲು ಹತ್ತಿ ಪ್ರಯಾಣ ಆರಂಭಿಸಿದ್ದಾರೆ. ಕಳೆದ ಗ್ರಾಮ ವಾಸ್ತವ್ಯಕ್ಕಿಂತಲೂ ಭಿನ್ನವಾಗಿ ಈ ಬಾರಿಯ ಕಾರ್ಯಕ್ರಮ ಇರುತ್ತೆ ಎಂದಿರುವ ಮುಖ್ಯಮಂತ್ರಿಗಳು, ಸಮಸ್ಯೆಗೆ ಕಿವಿಗೊಟ್ಟು, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡುವ ಯತ್ನಕ್ಕೆ ಮುಂದಾಗಿದ್ದಾರೆ. ಪಬ್ಲಿಕ್ ಟಿವಿವೊಂದಿಗೆ ತಮ್ಮ ಗ್ರಾಮ ವಾಸ್ತವ್ಯದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಅವರು, […]

7 hours ago

ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಮಾಜಿ ಕಾರ್ಪೋರೇಟರ್ ಸೇರಿ ಗ್ರಾಮಸ್ಥರು ವಿಷ ಸೇವನೆಗೆ ಯತ್ನ

ಶಿವಮೊಗ್ಗ: ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ರೆಡ್ಡಿ ಜೊತೆ ಸ್ಥಳೀಯ ಗ್ರಾಮಸ್ಥರು ಸೇರಿ ವಿಷಯ ಕುಡಿಯಲು ಮುಂದಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪಾಲಿಕೆ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿರುವ ಪುರಲೆ ಬಡಾವಣೆಯಲ್ಲಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಗುಜರಾತ್ ಮೂಲದ ಸಂಸ್ಥೆ ಮುಂದಾಗಿದೆ. ಇದೂವರೆಗೂ ಈ...

ಒಂದೇ ದಿನ 2 ಕಾಳಿಂಗ ಸರ್ಪ ರಕ್ಷಣೆ -ವಿಡಿಯೋ ನೋಡಿ

9 hours ago

ಕಾರವಾರ: ಮಳೆ ಬಂದರೆ ಸಾಕು ಸರಿಸೃಪಗಳು ಎಲ್ಲಿ ಬೇಕೆಂದರಲ್ಲಿ ಆಹಾರ ಅರಸಿ ಹೋಗುತ್ತವೆ. ಇದೀಗ ಆಹಾರ ಅರಸಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಲ್ಲಿದ್ದ ಜನರನ್ನು ಭಯಗೊಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ನಗರದಲ್ಲಿ ನಡೆದಿದೆ. ಅಪರೂಪಕ್ಕೆ ಆಸ್ಪತ್ರೆಗೆ ಆಗಮಿಸಿದ್ದ ಕಾಳಿಂಗ...

‘ಕೈ’ ಶಾಸಕರ ಬಂಡಾಯಕ್ಕೆ ಮಣಿದ ಸಿಎಂ

9 hours ago

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕ ಸುಧಾಕರ್ ಅವರ ಬಂಡಾಯಕ್ಕೆ ಮಣಿದಿರುವ ಮುಖ್ಯಮಂತ್ರಿಗಳು ದಿಡೀರ್ ಬೆಳವಣಿಗೆಯಲ್ಲಿ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇಂದು ಬೆಳಗ್ಗೆ ಮಂಡಳಿಯ ಅಧ್ಯಕ್ಷರಾಗಿದ್ದ ಸಿ. ಜಯರಾಮ್ ಅವರು ತಮ್ಮ ಹುದ್ದೆಗೆ...

ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ – ಎ ಮಂಜು ಸ್ಫೋಟಕ ಆರೋಪ

9 hours ago

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಾಜಿ ಸಚಿವ ಎ. ಮಂಜು ಸ್ಫೋಟಕ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಮಂಜು ಅವರು, ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್‍ನಲ್ಲಿ...

9 ದಿನ ಸಂಸಾರ ಮಾಡಿ ಪತಿ ಎಸ್ಕೇಪ್- ಗಂಡನ ಮನೆ ಮುಂದೆ ಪತ್ನಿ ಧರಣಿ

9 hours ago

ಕೋಲಾರ: 9 ದಿನ ಸಂಸಾರ ಮಾಡಿದ ಗಂಡ ಕಾಣೆಯಾಗಿದ್ದು ಈಗ ಪತ್ನಿ ಪತಿಯ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಕೋಲಾರ ತಾಲೂಕಿನ ವೇಮಗಲ್ ಮೂಲದ 24 ವರ್ಷದ ನಾಗವೇಣಿ ಎಂಬವರನ್ನ ಅದೇ...

25 ಲಕ್ಷ ಲಾಟರಿ ಬಂದಿದೆ ಎಂದು ಆನ್‍ಲೈನ್ ಮೂಲಕ ಮಹಿಳೆಗೆ 3 ಲಕ್ಷ ಮೋಸ

9 hours ago

ಚಿಕ್ಕಬಳ್ಳಾಪುರ: ಐಎಂಎ ಜ್ಯೂವೆಲರ್ಸ್ ಮಾಲೀಕ ಮನ್ಸೂರ್ ಅಲಿಖಾನ್ ಸಾವಿರಾರು ಜನರಿಗೆ ಮೋಸ ಮಾಡಿರೋದು ಕಣ್ಣುಮುಂದೆ ಇರಬೇಕಾದರೆ, 25 ಲಕ್ಷ ಲಾಟರಿ ಬಂದಿದೆ ಎಂದು ಹೇಳಿ ಆನ್‍ಲೈನ್ ಮೂಲಕ ಮಹಿಳೆಯಿಂದ 3 ಲಕ್ಷ ಕಟ್ಟಿಸಿಕೊಂಡು ಮೋಸ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ...

ಕುರುಬ ಸಮುದಾಯದ ಕ್ಷಮೆ ಕೋರಿದ ಮಾಜಿ ಶಾಸಕ ಸುರೇಶ್ ಗೌಡ

10 hours ago

ತುಮಕೂರು: ನಾನು ಕುರುಬ ಸಮುದಾಯಕ್ಕೆ 420 ಎಂದು ಹೇಳಿಲ್ಲ. ಪುಟ್ಟರಾಜು ಎಂಬ ಪೇದೆ 420 ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ ಅಷ್ಟೇ ಎಂದು ಮಾಜಿ ಶಾಸಕ ಸುರೇಶ್ ಗೌಡ ಅವರ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ನನ್ನ ಹೇಳಿಕೆಯಿಂದ ಕುರುಬ ಸಮುದಾಯದವರಿಗೆ ನೋವಾಗಿದರೆ...