ನಾಗ್ಪುರ: ಧೋನಿ ಮೈದಾನದಲ್ಲಿ ತಮ್ಮ ಸಮಯ ಪ್ರಜ್ಞೆಯಿಂದಲೇ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುತ್ತಾರೆ. ಇದರಂತೆ ಅಂತಹದ್ದೇ ಘಟನೆ ಇಂದು ಕೂಡ ನಡೆದಿದ್ದು, ಭದ್ರತೆಯನ್ನು ಮೀರಿ ಮೈದಾನಕ್ಕಿಳಿದ ಅಭಿಮಾನಿಯೊಬ್ಬರನ್ನು ಕ್ಷಣ ಕಾಲ ಕಾಡಿದ್ದಾರೆ.
ನಾಗ್ಪುರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ವೇಳೆ ಘಟನೆ ನಡೆದಿದ್ದು, ಟೀಂ ಇಂಡಿಯಾ ಆಟಗಾರರು ಫೀಲ್ಡಿಂಗ್ ಬರುವ ವೇಳೆ ಅಭಿಮಾನಿ ಏಕಾಏಕಿ ಆಟಗಾರರ ನಡುವೆ ಓಡಿ ಬಂದು ಧೋನಿರನ್ನು ಮಾತನಾಡಲು ಯತ್ನಿಸಿದ್ದಾನೆ.
https://twitter.com/imMB23/status/1102918752683745280
ಈ ನಡುವೆ ಅಭಿಮಾನಿಯ ಕೈಗೆ ಸಿಗದ ಧೋನಿ ಕ್ಷಣ ಕಾಲ ಮೈದಾನದಲ್ಲಿ ಓಟಕಿತ್ತು ನೋಡುಗರಿಗೆ ಮನರಂಜನೆ ಸಿಗುವಂತೆ ಮಾಡಿದ್ದಾರೆ. ಬಳಿಕ ಅಭಿಮಾನಿಗೆ ಅಪ್ಪುಗೆ ನೀಡಿ ಕಳುಹಿಸಿದ್ದಾರೆ.
9 ವರ್ಷದ ಬಳಿಕ ಧೋನಿ ಗೋಲ್ಡನ್ ಡಕ್: ಮೊದಲ ಏಕದಿನ ಪಂದ್ಯದಲ್ಲಿ ಎಚ್ಚರಿಕೆ ಆಟವಾಡಿ ಪಂದ್ಯದ ಗೆಲುವಿಗೆ ಕಾರಣವಾಗಿದ್ದ ಧೋನಿ ಈ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಈ ಹಿಂದೆ ಧೋನಿ 2010ರಲ್ಲಿ ಮೊದಲ ಎಸೆತದಲ್ಲಿ ಔಟಾಗಿದ್ದರು. ಇದುವರೆಗೂ ಧೋನಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದು, ಆಸೀಸ್ ವಿರುದ್ಧ 2ನೇ ಬಾರಿ ಡಕ್ ಔಟ್ ಆಗಿದ್ದಾರೆ.
Dhoni Bhai ????❤️
Never Fails To Entertain!! pic.twitter.com/mgSJibrNgk
— Viserys I (@AksShivam) March 5, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv