ಬೆಂಗಳೂರು: ಬೆಕ್ಕಿನ ಕಣ್ಣು ಹೋಲುವ ಕ್ಯಾಟ್ ಸ್ನೇಕ್‍ವೊಂದು ನಗರದ ಹೊರವಲಯದ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ಪತ್ತೆಯಾಗಿದೆ.
Advertisement
ಕ್ಯಾಟ್ ಸ್ನೇಕ್ ಹೆಚ್ಚಾಗಿ ಗುಡ್ಡುಗಾಡು ಪ್ರದೇಶದಲ್ಲಿ ಕಾಣಸಿಗುತ್ತದೆ. ಈ ಹಾವಿನ ಕಣ್ಣುಗಳು ಬೆಕ್ಕಿನ ಹಾಗೆ ಇರೋದ್ರಿಂದ ಇದನ್ನ ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತದೆ. ಯಂಟಗಾನಹಳ್ಳಿಯ ಕಾರ್ಖಾನೆಯ ಆವರಣದಲ್ಲಿ ಈ ಹಾವು ಪತ್ತೆಯಾಗಿದ್ದು, ಸ್ನೇಕ್ ಲೋಕೇಶ್ ಅವರು ಹಾವನ್ನ ರಕ್ಷಿಸಿದ್ದಾರೆ.
Advertisement
Advertisement
ವಿಶೇಷತೆ: ಐದು ವರ್ಷಗಳ ಕಾಲ ಬದುಕಬಲ್ಲ ಈ ಹಾವು, ತನ್ನ ಸಂತತಿಗಾಗಿ ಏಕ ಕಾಲದಲ್ಲಿ 8 ರಿಂದ 10 ಮೊಟ್ಟೆಯನ್ನಿಡುವ ಸಾಮರ್ಥ್ಯ ಹೊಂದಿದ್ದು, ಈ ಸಂತತಿಯ ವಿಶೇಷ ಅಂದ್ರೆ ರಾತ್ರಿ ಹೊತ್ತಿನಿಲ್ಲಿ ಸಂಚರಿಸುತ್ತದೆ. ಬೂದು ಬಣ್ಣದಿಂದ ನಕ್ಷತ್ರಗಳ ರೂಪದ ಮೈನೋಟದಿಂದ ತನ್ನ ದೇಹ ವಿನ್ಯಾಸವನ್ನು ಹೊಂದಿದೆ. ಇದು ಭೂಮಿ ಮತ್ತು ಮರದ ಮೇಲೆ ವೇಗವಾಗಿ ಚಲಿಸುತ್ತದೆ.
Advertisement