ಬೆಂಗಳೂರು: ಇಷ್ಟು ದಿನ ಬೆಂಗಳೂರಿನ ಏರಿಯಾಗಳಲ್ಲಿ ಬೀದಿ ನಾಯಿ (Street Dog) ಕಾಟದ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈ ಬಾರಿ ಬೆಕ್ಕುಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದು, ಬೆಕ್ಕಿನ ಕಾಟಕ್ಕೆ ಬೇಸತ್ತಿರೋ ಸ್ಥಳೀಯರು ದಯಾಮಾಡಿ ಬೆಕ್ಕುಗಳಿಗೂ ನಾಯಿಗಳಂತೆ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ.
Advertisement
ಹೌದು. ಬೆಂಗಳೂರಿನ ವಾರ್ಡ್ ನಂಬರ್ 5 ನ್ಯಾಯಾಂಗ ಬಡಾವಣೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಬೆಕ್ಕು (Cat) ಗಳ ಹಾವಳಿ ಜಾಸ್ತಿಯಾಗಿದಯಂತೆ. ಬೆಕ್ಕುಗಳು ಪ್ರತಿ ಆರು ತಿಂಗಳಿಗೊಮ್ಮೆ ಮರಿಗಳನ್ನು ಹಾಕಲಿದ್ದು, ಚಿಕ್ಕ ಮರಿಗಳಿಂದ ದೊಡ್ಡ ದೊಡ್ಡ ಬೆಕ್ಕುಗಳವರೆಗೂ ಪ್ರತಿನಿತ್ಯ ಇಲ್ಲಿನ ಜನರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಅಂತಾ ಪಾಲಿಕೆಗೆ ದೂರು ನೀಡಿದ್ದಾರೆ. ಇಲ್ಲಿನ ಮನೆಗಳಲ್ಲಿ ಯಾರೋ ಸಾಕಿ ಬಿಟ್ಟ ಬೆಕ್ಕುಗಳು ಬಂದು ಸೇರಿಕೊಳ್ಳುತ್ತಿದ್ದು, ಎಲ್ಲೆಂದರಲ್ಲಿ 6 ತಿಂಗಳಿಗೊಮ್ಮೆ ಮರಿಗಳನ್ನ ಹಾಕುತ್ತೀವೆ ಅನ್ನೋದೆ ಈ ಭಾಗದ ಜನರಿಗೆ ದೊಡ್ಡ ತಲೆನೋವಾಗಿದೆ.
Advertisement
Advertisement
ಕೆಲವೊಮ್ಮೆ ಕಿಟಕಿ ಒಳಗಡೆಯಿಂದ ನುಗ್ಗುವ ಬೆಕ್ಕುಗಳು ಮಂಚದ ಕೆಳಗೆ ಮರಿ ಹಾಕಿವೆ. ಕೆಲವು ಬೆಕ್ಕುಗಳಂತೂ ರೌಡಿಸಂ ಕೂಡ ತೋರಿಸುತ್ತ ಅಂತೆ. ಈಗೆಲ್ಲ ಸಾಲು ಸಾಲು ದೂರಗಳನ್ನ ಪಾಲಿಕೆಗೆ ಈ ಭಾಗದ ಜನ ಸಲ್ಲಿಸಿದ್ದು, ದಯಾಮಾಡಿ ಈ ಭಾಗದಲ್ಲಿರುವ ಬೆಕ್ಕುಗಳಿಗೆ ವಯಸ್ಸಿನ ಆಧಾರದ ಮೇಲೆ ಸಂತಾನಹರಣ ಚಿಕಿತ್ಸೆ ಮಾಡಿ ಅಂತಾ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಆಗಿಲ್ಲ ಎಂದು ಕಿಚಾಯಿಸಿದ ಸ್ನೇಹಿತನ ಕೊಲೆ
Advertisement
ಈ ನಿವಾಸಿಗಳು ಪಾಲಿಕೆಗೆ ಪತ್ರ ಬರೆದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ, ಈ ವಿಚಾರ ಸಂಬಂಧ ಆದಷ್ಟು ಬೇಗ ನಿಮ್ಮ ಈ ಸಮಸ್ಯೆಯನ್ನ ಬಗೆಹರಿಸುವುದಾಗಿ ಪ್ರತಿಕ್ರಿಯೆ ಕೂಡ ನೀಡಿದೆ. ಒಟ್ಟಾರೆ ಇಷ್ಟು ದಿನ ಬೀದಿ ನಾಯಿಗಳಿಗಿದ್ದ ಕೆಲ ಟಮ್ರ್ಸ್ ಅಂಡ್ ಕಂಡೀಷನ್ ಬೀದಿ ಬೆಕ್ಕುಗಳ ವಿಚಾರದಲ್ಲೂ ಬಂದರ ಬರಬಹುದು. ಅದೇನೆ ಆಗಲಿ ಸಮಸ್ಯೆ ಬಗ್ಗೆ ಪಾಲಿಕೆ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೆ ಸದ್ಯದ ಕುತೂಹಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k