ಮಡಿಕೇರಿ: ಬೆಕ್ಕು ತನ್ನದಲ್ಲದ ಮೊಲದ ಮರಿಗಳಿಗೆ ಹಾಲುಣಿಸುವ ಮೂಲಕ ತಾಯ್ತನವನ್ನು ತೋರಿಸಿತ್ತಿದೆ. ತನ್ನ ಬೆಕ್ಕಿನ ಮರಿಗಳಿಗೆ ಹಾಲು ಉಣಿಸುವುದರ ಜೊತೆಗೆ ಮೊಲದ ಮರಿಗಳಿಗೂ ಹಾಲು ಉಣಿಸುತ್ತಿದೆ. ತಾಯಿ ಮೊಲದಿಂದ ಬೇರ್ಪಟ್ಟ ಮರಿ ಮೊಲಗಳನ್ನು ಬೆಕ್ಕು ರಕ್ಷಣೆ ಮಾಡುತ್ತಿದೆ.
Advertisement
ಒಂದು ವಾರದ ಹಿಂದೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ತೋಟದಲ್ಲಿ ತಾಯಿ ಇಲ್ಲದೇ ಮೂರು ಮೊಲದ ಮರಿಗಳು ಮಳೆಯಲ್ಲಿ ಒದ್ದೆಯಾಗುತ್ತಿತ್ತು. ಈ ಸಂದರ್ಭ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಎಂಬವರು ಮೂರು ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಮೂರು ಮೊಲದ ಮರಿಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಬಂದು ಸಾಕಲು ಮುಂದಾಗಿದ್ದಾರೆ. ಆದರೆ ತಾಯಿಯನ್ನು ಕಳೆದುಕೊಂಡಿರುವ ಮೂರು ಮೊಲದ ಮರಿಗಳಿಗೆ ಈಗ ನಾಡಿನ ತಾಯಿ ಬೆಕ್ಕು ಆಸರೆಯಾಗಿದೆ.
Advertisement
Advertisement
ಕಳೆದ ಒಂದು ವಾರದ ಹಿಂದೆ ಮಹೇಶ್ ಅವರ ಮನೆಯಲ್ಲಿರುವ ಬೆಕ್ಕು ಎರಡು ಮರಿಗಳಿಗೆ ಜನ್ಮ ನೀಡಿದೆ. ಇದೀಗ ಆ ತಾಯಿ ಬೆಕ್ಕು ಮೊಲಗಳಿಗೂ ತನ್ನ ಆಸರೆ ನೀಡಿದೆ. ರಾತ್ರಿ ವೇಳೆಯಲ್ಲಿಯೂ ತನ್ನೊಂದಿಗೆ ಮಲಗಿಸಿಕೊಂಡು ಪೋಷಣೆ ಮಾಡುತ್ತಿದೆ. ಮರಿಗಳು ಸ್ವಲ್ಪ ಬೆಳೆದ ನಂತರ ಅದನ್ನು ಕಾಡಿಗೆ ಬಿಡುವ ನಿರ್ಧಾರ ಮಾಡಿಕೊಂಡಿದ್ದಾರೆ.
Advertisement