ನೆಲಮಂಗಲ: ಕಳ್ಳತನ ಹಾಗೂ ಅಡ್ಡ ದಾರಿಯ ಪ್ರತಿಫಲ ಕೆಟ್ಟದಾಗಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಮನೆಯಲ್ಲಿ ಸಾಕಿದ ಬೆಕ್ಕೊಂದು ಅಡುಗೆ ಮನೆಯಲ್ಲಿ ತಂಬಿಗೆಯಲ್ಲಿದ್ದ ಹಾಲು ಕದ್ದು ಕುಡಿಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದೆ. ಹೌದು. ಬೆಕ್ಕು ಹಾಲುಕುಡಿಯಲು ಹೋಗಿ ಅದರ ತಲೆ ತಂಬಿಗೆಯೊಳಗೆ ಸಿಲುಕಿ ಕೆಲಕಾಲ ಪರದಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದಲ್ಲಿ ನಡೆದಿದೆ.
ತಂಬಿಗೆಯೊಳಗೆ ತಲೆ ಸಿಲುಕಿ ಹೊರ ಬರಲಾಗದೆ ಬೆಕ್ಕು ನರಳಾಡುತ್ತಿತ್ತು. ಬೆಕ್ಕಿನ ನರಲಾಟ ಕೇಳಿದ ಅಲ್ಲೇ ಇದ್ದ ಯುವಕ ತಾನು ಸಾಕಿದ ಕರಿ ಬೆಕ್ಕನ್ನು ರಕ್ಷಿಸಿದ್ದಾರೆ. ಕರಿ ಬೆಕ್ಕು ತಂಬಿಗೆಯಿಂದ ತನ್ನ ತಲೆಯನ್ನ ಹೊರ ತೆಗೆಯಲು ಸಾಕಷ್ಟು ಹರಸಾಹಸ ಪಟ್ಟಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಕರಿ ಬೆಕ್ಕು ಅಡುಗೆ ಮನೆಯಲ್ಲಿ ಕದ್ದು ಹಾಲು ಕುಡಿಯಲು ಹೋಗಿ, ಕೆಲಕಾಲ ಪೇಚಿಗೆ ಸಿಲುಕಿಕೊಂಡಿತ್ತು. ಸದ್ಯ ಬೆಕ್ಕು ಪ್ರಾಣಪಾಯದಿಂದ ಪಾರಾಗಿದೆ.
https://youtu.be/MNQnpGEPGlU