ವಾಷಿಂಗ್ಟನ್: ಪ್ರತಿ ಜೂಮ್ ಕ್ಲಾಸ್ ಮಿಸ್ ಮಾಡದೆ ಬೆಕ್ಕೊಂದು ಹಾಜರಾಗಿದ್ದು, ಯುಎಸ್ ವಿಶ್ವವಿದ್ಯಾಲಯ ಹ್ಯಾಟ್ ಕೊಟ್ಟು ಅಭಿನಂದಿಸಿದೆ.
ಯುಎಸ್ ಕಾಲೇಜೊಂದರಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಧ್ಯೆ ಬೆಕ್ಕು ಎಲ್ಲರ ಗಮನ ಸೆಳೆದಿದೆ. ಈ ಕುರಿತು ಬೆಕ್ಕನ್ನು ಸಾಕುತ್ತಿದ್ದ ಯುವತಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಫ್ರಾನ್ಸೆಸ್ಕಾ ಬೌರ್ಡಿಯರ್ ಇತ್ತೀಚೆಗೆ ಆಸ್ಟಿನ್‍ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯ ಪದವಿ ಪ್ರದಾನ ಮಾಡಿತು. ಈ ಫೋಟೋ ಶೇರ್ ಮಾಡಿದ ಯುವತಿ, ಈ ರೀತಿಯ ಮೈಲಿಗಲ್ಲನ್ನು ಸಾಧಿಸುವಲ್ಲಿ ನಾನು ಒಬ್ಬಂಟಿಯಾಗಿರಲಿಲ್ಲ. ಏಕೆಂದರೆ ನನ್ನ ಮುದ್ದಿನ ಬೆಕ್ಕು ಸುಕಿಯೂ ನನ್ನ ಜೊತೆ ಇತ್ತು ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ನನ್ನ ಬೆಕ್ಕು ನಾನು ಹಾಜರಾಗುತ್ತಿದ್ದ ಪ್ರತಿಯೊಂದು ಜೂಮ್ ಉಪನ್ಯಾಸಕ್ಕೂ ಬರುತ್ತಿತ್ತು. ಆದ್ದರಿಂದ ನಾವಿಬ್ಬರೂ ಆಸ್ಟಿನ್‍ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಒಟ್ಟಿಗೆ ಪದವಿ ಪಡೆಯುತ್ತೇವೆ ಎಂದು ಫೋಟೋ ಶೇರ್ ಮಾಡಿದ್ದಾರೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ಸುಕಿ ಸಾಧನೆ ಮತ್ತು ಪದವಿ ಉಡುಪಿನ ಬಗ್ಗೆ ಪ್ರಶಂಸಿದ್ದಾರೆ. ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ.