-ಈಕೆ ಶ್ರೀರೆಡ್ಡಿ ಅಭಿಮಾನಿ ಅಂದ್ರು ನಿರ್ದೇಶಕ!
ಬೆಂಗಳೂರು: ಕಾಸ್ಟಿಂಗ್ ಕೌಚ್ ಹೆಸರಲ್ಲಿ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಚೆಲ್ಲಾಟ ಆಡುತ್ತಿದ್ದು, ಈಗ ತಾನು ನಿರ್ದೇಶಕರ ವಿರುದ್ಧ ಮಾಡಿದ್ದ ಆರೋಪ ಸುಳ್ಳು ಎಂದು ಫಿಲ್ಮ್ ಚೇಂಬರ್ ನಲ್ಲಿ ಮಾಧ್ಯಮಗಳ ಮುಂದೆ ಕ್ಷಮೆಯಾಚಿದ್ದಾರೆ.
ಈ ಹಿಂದೆ ನಿರ್ದೇಶಕ ಮಂಜು ಹೆದ್ದೂರು ನನಗೆ ಕಾಸ್ಟಿಂಗ್ ಕೌಚ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಈ ಬಗ್ಗೆ ನಿರ್ದೇಶಕರ ಮಂಜು ಅವರು ಫಿಲ್ಮ್ ಚೇಂಬರ್ ಗೆ ದೂರು ನೀಡಿ ತಮ್ಮ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಟಿ ಜಯಶ್ರೀ ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪಿನ ಬಗ್ಗೆ ಹೇಳಿದ್ದಾರೆ.
ಹಿರಿಯರ ಜೊತೆ ಮಾತನಾಡಿ ಕ್ಷಮೆ ಕೇಳಿದ್ದೇನೆ. ಅವರು ಊಟಕ್ಕೆ ಕರೆದಿದ್ದರು. ನಾನು ಅದಕ್ಕೆ ಓಕೆ ಡಿಯರ್ ಎಂದು ಹೇಳಿದ್ದೆ. ನಾನು ಅಪ್ಪ-ಅಮ್ಮನಿಗೂ ಡಿಯರ್ ಎಂದು ಕರೆಯುತ್ತೇನೆ. ಆದ್ದರಿಂದ ನಾನು ಕಾಮನ್ ಆಗಿ ಡಿಯರ್ ಎಂದು ಕರೆದೆ ಅಷ್ಟೇ. ಮೊದಲಿಗೆ ನಾನು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ ತಪ್ಪು ಮಾಡಿದೆ. ಆದ್ದರಿಂದ ಅದು ನನ್ನ ತಪ್ಪು ಎಂದು ಜಯಶ್ರೀ ಹೇಳಿದ್ದಾರೆ.
ಈ ಬಗ್ಗೆ ನಿರ್ದೇಶಕ ಮಂಜು ಹೆದ್ದೂರು ಅವರು ಪ್ರತಿಕ್ರಿಯಿಸಿದ್ದು, ನನ್ನ ಸಂಸಾರ ಮುಳುಗೋದಲ್ಲ, ಹೆಚ್ಚು ಕಡಿಮೆ ಏನೇನೋ ಆಗಿರುತ್ತಿತ್ತು. ಸಿನಿಮಾದವರು ಎಂದು ನಮ್ಮನ್ನು ನೋಡುವ ರೀತಿಯ ಬದಲಾಗಿತ್ತು. ನಾನು ಲಾಂಗ್ ಡ್ರೈವ್ ಹೋಗೋಕೆ ಕರೆದರು ಎಂದು ಹೇಳಿದ್ದಾರೆ. ಆದರೆ ನನ್ನ ಬಳಿ ಪೆಟ್ರೋಲಿಗೆ ಹಣವಿಲ್ಲ ಅಂತಹ ಸಮಸ್ಯೆಗಳನ್ನು ನಾನು ಎದುರಿಸುತ್ತಿದ್ದೇನೆ. ಮೊದಲಿಗೆ ಈ ಕಾಸ್ಟಿಂಗ್ ಕೌಚ್ ಬಗ್ಗೆ ನನಗೆ ತಿಳಿದಿಲ್ಲ. ಯಾರೊ ಶ್ರೀ ರೆಡ್ಡಿ ಅವರ ಅಭಿಮಾನಿ ಇರಬೇಕು ಅದಕ್ಕೆ ಅವರನ್ನೇ ಫಾಲೋ ಮಾಡುತ್ತಿದ್ದಾರೆ. ಕೆಲಸಕ್ಕಾಗಿ ಯಾರು ಆ ರೀತಿ ಕೇಳುವುದಿಲ್ಲ. ಇದು ನಿಜವಾದರೆ ನಾನು ವಾಣಿಜ್ಯ ಮಂಡಳಿ ಹೇಳಿದ ರೀತಿ ಕೇಳ್ತಿನಿ ಎಂದು ಹೇಳಿದ್ದಾರೆ.
ಈ ಹಿಂದೆ ಜಯಶ್ರೀ ಬಿಗ್‍ಬಾಸ್ ಶೋದಿಂದ ಹೊರ ಬಂದ ನಂತರ ಒಂದೆರಡು ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. “ನಟ ನಟಿಯರು ಬೇಕಾಗಿದ್ದಾರೆ” ಸಿನಿಮಾಕ್ಕೆ ಮೊದಲು ಜಯಶ್ರೀ ನಾಯಕಿಯಾಗಿ ಆಯ್ಕೆಯಾಗಿದ್ದರು. ಒಂದೆರಡು ದಿನ ಅಭಿನಯಿಸಿದ ಮೇಲೆ ಆಕೆಗೆ ಮತ್ತೆ ಚಿತ್ರತಂಡದಿಂದ ಬುಲಾವ್ ಬರಲಿಲ್ಲ. ಅಷ್ಟಕ್ಕೇ ಈಕೆ `ನನ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆಲ್ಲ ನಿರ್ದೇಶಕನ ಮಾತನ್ನು ನಾನು ಕೇಳದೇ ಇರುವುದು ಕಾರಣ. ಲಾಂಗ್ ಡ್ರೈವ್ ಬಾ, ಎಣ್ಣೆ ಹಾಕೋಣ ಬಾ ಬೇಬಿ ಎನ್ನುತ್ತಿದ್ದರು. ಅದಕ್ಕೆ ನಾನು ವಿರೋಧಿಸಿದಕ್ಕೆ ಸಿನಿಮಾದಿಂದ ನನ್ನನ್ನು ಬಿಡಲಾಗಿದೆ ಎಂದು ಆರೋಪಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv