ಉಡುಪಿ: ಜಾತಿಗಣತಿ ವರದಿ ಬಹಿರಂಗವಾಗಬೇಕು ಎಂದು ಕಾಂಗ್ರೆಸ್ ನಾಯಕ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಜಾತಿಗಣತಿಗೆ ಸುಮಾರು 150 ಕೋಟಿ ರೂ. ಖರ್ಚಾಗಿದೆ. ಸರ್ಕಾರದ ಹಣ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿದೆ. ಆ ವರದಿ ಹೊರಗಡೆ ತರಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳೆ ಬೆಳೆ ಕೊಚ್ಚಿ ಹೋಯ್ತು – ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ ರೈತರು
ನಮ್ಮ ಸರ್ಕಾರ ಇದ್ದಾಗ ವರದಿ ಸಂಪೂರ್ಣ ಆಗಿರಲಿಲ್ಲ. ಕಾಂತರಾಜ್ ಅವರು ಈಗ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಕೈಯಲ್ಲಿರುವ ವರದಿಯನ್ನು ಅಸೆಂಬ್ಲಿಯಲ್ಲಿ ಇಟ್ಟು ಚರ್ಚೆ ಮಾಡಲಿ. ವರದಿಯಲ್ಲಿ ಸಮಸ್ಯೆ ಇದ್ದರೆ ಸರಿಪಡಿಸುವ ತೀರ್ಮಾನ ಕೈಗೊಳ್ಳಲಿ. ವರದಿ ಬಹಿರಂಗ ಮಾಡುವುದರಿಂದ ಸರ್ಕಾರಕ್ಕೆ ಮುಜುಗರ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ
ಯಾವುದೇ ಸಮುದಾಯ ಹೆಚ್ಚಿರುವುದು ಕಡಿಮೆ ಇರುವುದು ಸ್ವಾಭಾವಿಕ. ಜಾತಿಗಣತಿ ಒಪ್ಪಿಗೆ ಆಗದಿದ್ದರೆ, ಒಮ್ಮತ ಮೂಡದೆ ಇದ್ದರೆ ರೀ ಸರ್ವೆ ಮಾಡಬಹುದು. ಈ ವರದಿಯನ್ನು ಒಪ್ಪಿಕೊಳ್ಳುವ ಅಧಿಕಾರದ ಸರ್ಕಾರಕ್ಕಿದೆ ಎಂದರು.