ಬೆಂಗಳೂರು: ಜಾತಿ ಗಣತಿ (Caste Survey) ವರದಿ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಗದ್ದಲ ಎಬ್ಬಿಸಿದ್ದು, ಜಾತಿಗಣತಿಯ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಭಾರೀ ಕೋಲಾಹಲ, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಜಾತಿ ಜನಗಣತಿ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ವಿವಾದದ ಸುಳಿಗೆ ಸಿಲುಕಿ ಪ್ರಬಲ ಸಮುದಾಯಗಳ ಆಕ್ರೋಶದ ಕಿಚ್ಚಿಗೆ ಕಾರಣವಾಗಿರುವ ಜಾತಿ ಗಣತಿ ವರದಿಯ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.
ಜಾತಿ ಗಣತಿ ವರದಿ ಚರ್ಚೆಗಾಗಿಯೇ ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಾಳೆ ಸಂಜೆ ವಿಶೇಷ ಸಚಿವ ಸಂಪುಟ ಸಭೆ (Cabinet Meeting) ಕರೆಯಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ
ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ಮಾಡಲಾಗಿತ್ತಾದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಸಂಪುಟದ ಸಚಿವರಿಗೆ ವರದಿಯ ಪ್ರತಿಯನ್ನು ಅಧ್ಯಯನಕ್ಕಾಗಿ ನೀಡಿದ್ದರು. ನಾಳೆ ನಡೆಯುವ ವಿಶೇಷ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದನ್ನೂ ಓದಿ: ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗ್ತಾರೆ: ಕುಮಾರಸ್ವಾಮಿ ಆಕ್ರೋಶ
ಸದ್ಯ ಬಹಿರಂಗಗೊಳ್ಳುತ್ತಿರುವ ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ ಸ್ವಪಕ್ಷದಲ್ಲೂ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತವಾಗಿದೆ. ವಿರೋಧವನ್ನೂ ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ ನಾಳೆ ಏನ್ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಸಿಎಂ ಮುಂದಿರುವ ಆಯ್ಕೆ ಏನು?
– ಜಾತಿಗಣತಿ ವರದಿ ಬಿಡುಗಡೆ ಮಾಡುವುದು
– ಜಾತಿಗಣತಿ ವರದಿ ಬಿಡುಗಡೆ ಮಾಡದಿರುವುದು
– ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸುವುದು
– ಸಚಿವ ಸಂಪುಟ ಉಪಸಮಿತಿ ರಚನೆ ಮಾಡುವುದು
– ವಿಶೇಷ ಅಧಿವೇಶನ ಕರೆಯುವುದು