ಬೆಂಗಳೂರು: ಜಾತಿಗಣತಿ (Caste Cenusu) ಮುಂದೂಡಲ್ಲ, ಮುಂದೂಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎರಡು ಬಾರಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಂವಿಧಾನಿಕ ಸಂಸ್ಥೆ. ಎಲ್ಲರ ಅಭಿಪ್ರಾಯ ಪಡೆದು ಅವರು ತೀರ್ಮಾನ ಮಾಡಿದ್ದಾರೆ. ಜಾತಿಗಣತಿ ಮುಂದೂಡಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಳಂದ ಫೈಲ್ಸ್ ಕೇಸ್ ತನಿಖೆಗೆ ಎಸ್‌ಐಟಿ ರಚನೆಗೆ ಕ್ಯಾಬಿನೆಟ್ ಒಲವು
ಕ್ಯಾಬಿನೆಟ್‌ನಲ್ಲಿ ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ನೀವು ಕೂಡ ರಾಜಕೀಯವಾಗಿ ಎದುರಿಸಬೇಕು. ಅದನ್ನ ಖಂಡಿಸಬೇಕು ಎಂದು ಸಚಿವರಿಗೆ ಹೇಳಿದ್ದೇನೆ ಎಂದಿದ್ದಾರೆ.
ಗುರುವಾರ (ಸೆ.18) ನಡೆದ ಕ್ಯಾಬಿನೆಟ್‌ನಲ್ಲಿ ಜಾತಿಗಣತಿಯಿಂದ ಸರ್ಕಾರಕ್ಕೆ ಯಾವುದೇ ಹಾನಿಯಾಗಬಾರದು. ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಸಾಧ್ಯವಿದ್ಯಾ? ಜಾತಿಗಣತಿ ಮುಂದೂಡುವಂತೆ ಡಿಕೆಶಿ ಸೇರಿದಂತೆ 20ಕ್ಕೂ ಹೆಚ್ಚು ಸಚಿವರು ಹೇಳಿದ್ದರು.ಇದನ್ನೂ ಓದಿ: ಕ್ಯಾಬಿನೆಟ್ ಸಭೆಯಲ್ಲಿ ಜಾತಿ ಜಟಾಪಟಿ – ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ