ಬೆಂಗಳೂರು: ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಜಾತಿಗಣತಿ ಮಾಡುತ್ತಿರುವಂತಿದೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ (A Narayanaswamy) ಅವರು ಆಕ್ಷೇಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರು 1.40 ಕೋಟಿಗೂ ಹೆಚ್ಚಿದ್ದಾರೆ. ಅವರು ಕ್ರಿಶ್ಚಿಯನ್ನರು ಹಾಕುವ ಬಿರಿಯಾನಿಗೆ ಹೋಗುತ್ತಾರೆ. ಅದನ್ನು ತಿಂದವರೆಲ್ಲರೂ ಕ್ರಿಶ್ಚಿಯನ್ನರು. ಅದಕ್ಕಾಗಿ ಅವರನ್ನು ಹಿಂದೂ ಧರ್ಮದಿಂದ ತೆಗೆಯುತ್ತೇವೆ ಎಂದಿದ್ದಾರೆ ಎಂದು ಟೀಕಿಸಿದರು.ಇದನ್ನೂ ಓದಿ: ಟ್ರಂಪ್ H-1B ವೀಸಾ ಟಫ್ ರೂಲ್ಸ್ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ
ಕ್ರೈಸ್ತ ವ್ಯಾಪ್ತಿಗೆ ಸೇರಿಸಿದ ಇನ್ನೂ 13-14 ಪರಿಶಿಷ್ಟ ಜಾತಿಗಳ ಕ್ರೈಸ್ತ ಪದವನ್ನು ಕಾಣದಂತೆ (ಹೈಡ್) ಮಾಡಿ ಎಂದರೆ, ನಾನು ಯೋಚಿಸಬೇಕು ಎನ್ನುತ್ತಾರೆ ಎಂದು ದೂರಿದರು. ಈ ಜಾತಿಗಣತಿಯನ್ನು ಬಿಜೆಪಿ, ಪರಿಶಿಷ್ಟ ಜಾತಿಗೆ ಸೇರಿದ ಶಾಸಕರು, ಸಂಸದರು, ಮಾಜಿ ಸಚಿವರು ವಿರೋಧಿಸುತ್ತೇವೆ. ಕೇವಲ ಹೈಡ್ ಮಾಡುವುದಲ್ಲ; ಸರ್ವೇಗೆ ಹೋದಾಗ ಚರ್ಚ್‍ಗೆ ಹೋಗುತ್ತೀರಾ? ಬರ್ಕೊಳ್ಳಲೇ ಎಂಬ ಪದಗಳನ್ನು ಉಪಯೋಗಿಸಬಾರದು ಎಂದು ಎಚ್ಚರಿಕೆ ನೀಡಿ, ಈ ವಿಚಾರದಲ್ಲಿ ದಲಿತ ಸಂಘಟನೆಗಳು ಜಾಗೃತರಾಗಬೇಕು ಎಂದು ತಿಳಿಸಿದರು.
ಆಯೋಗವನ್ನು ಕಾಂಗ್ರೆಸ್ ಸರ್ಕಾರ ನಿಯಂತ್ರಿಸುತ್ತಿದೆ. ಕ್ರಿಶ್ಚಿಯನ್ ಪದ ಸೇರಿಸಿ ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವ ಸಂದೇಶ ನೀಡಲು ಹೊರಟ ಆಯೋಗದ ಅಧ್ಯಕ್ಷರ ನಡವಳಿಕೆಯನ್ನು ವಿರೋಧಿಸಲು ಮನವಿ ಮಾಡಿದರು. ಇದೇ ವೇಳೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು.ಇದನ್ನೂ ಓದಿ: ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಸ್ಥಾಪನೆ: ಲಕ್ಷ್ಮೀ ಹೆಬ್ಬಾಳ್ಕರ್

