– ನಾವು ಪ್ರತ್ಯೇಕವಾಗಿ ಡಿಜಿಟಲ್ ಸಮೀಕ್ಷೆ ಮಾಡುತ್ತೇವೆ
– ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ 15,64,741
ಬೆಂಗಳೂರು: ಜಾತಿ ಗಣತಿಯ (Caste Census) ಮೇಲೆ ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳು ತಪ್ಪಾಗಬಹುದು ಬ್ರಾಹ್ಮಣ (Brahmins) ಸಮುದಾಯದ ಸಂಖ್ಯೆ 15 ಲಕ್ಷ ಎನ್ನುತ್ತಿದ್ದಾರೆ. ನಮ್ಮ ಪ್ರಕಾರ ಸಮುದಾಯದ ಜನಸಂಖ್ಯೆ 45 ಲಕ್ಷ ಇದೆ ಎಂದು ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ (Ashok Haranahalli) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದ ಅಂಕಿ ಸಂಖ್ಯೆಗಳನ್ನು ನೋಡಿದ ಸಾಕಷ್ಟು ಜನರು ಮನೆಗೆ ಗಣತಿಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ನಾನು ರಾಜ್ಯಾದ್ಯಂತ ಓಡಾಡಿ ಮಾಹಿತಿಯನ್ನು ತೆಗೆದುಕೊಂಡಾಗಲೂ ಬಂದಿಲ್ಲ ಅಂದವರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಈ ವರದಿ ವೈಜ್ಞಾನಿಕವಾಗಿ ತಯಾರಿಸಿಲ್ಲ ಎನ್ನುವವುದು ನನ್ನ ಭಾವನೆ ಎಂದು ಹೇಳಿದರು. ಇದನ್ನೂ ಓದಿ: ಜಾತಿಗಣತಿ ವಿರುದ್ಧ ಸಿಡಿದ ಒಕ್ಕಲಿಗರು- ವರದಿ ಜಾರಿಯಾದ್ರೆ ಸರ್ಕಾರ ಪತನದ ಎಚ್ಚರಿಕೆ
ಈ ಸಮೀಕ್ಷೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡರೆ ಮುಂದೆ ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಬ್ರಾಹ್ಮಣ ಸಮುದಾಯದಿಂದಲೇ ನಾವು ಪ್ರತ್ಯೇಕವಾಗಿ ಸಮೀಕ್ಷೆ ಮಾಡಿಸುತ್ತೇವೆ. ನಮ್ಮ ಸಮುದಾಯದ ಡಿಜಿಟಲ್ ಸರ್ವೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಬ್ರಾಹ್ಮಣರಲ್ಲಿ 55 ಒಳ ಪಂಗಡಗಳನ್ನು ಗುರುತಿಸಿರುವ ಹಿಂದುಳಿದ ವರ್ಗಗಳ ಆಯೋಗ, ರಾಜ್ಯದಲ್ಲಿ ಒಟ್ಟಾರೆ ಬ್ರಾಹ್ಮಣರ ಜನಸಂಖ್ಯೆ 15,64,741 ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಬ್ರಾಹ್ಮಣ ಸಮುದಾಯದ ಜಾತಿಗಣತಿ
* ಬ್ರಾಹ್ಮಣರ ಜನಸಂಖ್ಯೆ – 15,64,741
* ಬ್ರಾಹ್ಮಣ – 11,85,605
* ಗೌಡ ಸಾರಸ್ವತ – 1,14,119
* ಹವ್ಯಕ – 85,595
* ಶ್ರೀವೈಷ್ಣವ – 16,286
* ಮಾಧ್ವ – 13,302,
* ಅಯ್ಯಂಗಾರ್ – 12,070
* ಸ್ಥಾನಿಕ 3,820
* ಸಂಕೇತಿ – 1,276 ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ