ಬೆಂಗಳೂರು: ಕಾಂಗ್ರೆಸ್ (Congress) ಜಾತಿ ಗಣತಿ (Caste Survey) ದಂಗಲ್ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಾಳೆ ಸಂಜೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಭೆ ಕರೆದಿದ್ದಾರೆ.
ನಾಳೆ ಸಂಜೆ 6 ಗಂಟೆಗೆ ಡಿಕೆಶಿ ತಮ್ಮ ಸರ್ಕಾರಿ ನಿವಾಸದಲ್ಲಿ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈ ಸಭೆಗೆ ಒಕ್ಕಲಿಗ ಸಚಿವರು, ಶಾಸಕರು, ಎಂಎಲ್‌ಸಿಗಳಿಗೆ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಜಾತಿಗಣತಿ ವಿಚಾರದಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಮರ್ಯಾದೆ, ಮಾತನಾಡುವ ಯೋಗ್ಯತೆ ಇಲ್ಲ: ಬೈರತಿ ಸುರೇಶ್
ಜಾತಿ ಗಣತಿ ಸಂಬಂಧ ಏ.17 ರಂದು ಸಿಎಂ ಸಿದ್ದರಾಮಯ್ಯ ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ಮುನ್ನ ಒಕ್ಕಲಿಗ ನಾಯಕರ ನಿಲುವು ಏನಿರಬೇಕೆಂದು ಡಿಕೆಶಿ ಅಭಿಪ್ರಾಯ ಸಂಗ್ರಹ ಮಾಡಲು ಈ ಸಭೆಯನ್ನು ಕರೆದಿದ್ದಾರೆ. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್
ಜಾತಿ ಗಣತಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಇನ್ನೂ ನಾನು ವರದಿಯನ್ನೇ ಓದಿಲ್ಲ. ಶಾಸಕರ ಜೊತೆ ಚರ್ಚಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬಿಸಿ ಮೀಸಲಾತಿ ಪ್ರಮಾಣವನ್ನು 32% ರಿಂದ 51%ಕ್ಕೆ ಏರಿಸಿ – ಆಯೋಗದ ಶಿಫಾರಸು ಏನು? ಯಾವ ಜಾತಿಗೆ ಎಷ್ಟು ಮೀಸಲಾತಿ ಏರಿಕೆ?