ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಜಾತಿ ಗಣತಿ ರೂಪದಲ್ಲಿ ಅಸಲಿ ಸವಾಲು ಈಗ ಶುರುವಾಗಿದೆ. ಕರ್ನಾಟಕದಲ್ಲಿ ಜಾತಿ ಗಣತಿ (Caste Survey) ಮಂಡನೆಗೆ ಪ್ರಬಲ ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಲಿಂಗಾಯತ – ಒಕ್ಕಲಿಗ ಸಮುದಾಯಗಳು (Lingayat Vokkaliga Community) ಆಕ್ಷೇಪ ವ್ಯಕ್ತವಾಗುತ್ತಿದೆ.
ಹೊಸದಾಗಿ ಜಾತಿಗಣತಿ ನಡೆಸಬೇಕೆಂದು ಆದಿಚುಂಚನಗಿರಿ ಶ್ರೀಗಳು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ನಿರ್ಮಲಾನಂದನಾಥ ಶ್ರೀ, ನಂಜಾವದೂತ ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಒಕ್ಕಲಿಗ ಸಮುದಾಯದ ಚಿಂತನ ಮಂಥನ ಸಭೆ ನಡೆದಿದೆ. ಸಭೆಯಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಮಾಜಿ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ
ಕಾಂತರಾಜು ವರದಿ (Kantharaju Report) ವಿರೋಧಿಸಿ ಈ ಸಭೆಯಲ್ಲಿ 8 ಅಂಶಗಳ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತಾಡಿದ ನಿರ್ಮಲಾನಂದ ಶ್ರೀ, ಜಾತಿ ಜನಗಣತಿ ವಾಸ್ತವ ನೆಲೆಗಟ್ಟಿನಲ್ಲಿ ವರದಿ ತಯಾರಾಗಿಲ್ಲ.ಸಾಕಷ್ಟು ದೋಷಗಳಿದ್ದು, ಜಾತಿ ಜನಗಣತಿ ಬಿಡುಗಡೆ ಮಾಡಬೇಕಾದರೆ ಹೊಸದಾಗಿ ಗಣತಿ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ ಸರ್ಕಾರದ ಭಾಗವಾಗಿರುವ ಡಿಸಿಎಂ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ ಸ್ವಾಮೀಜಿಗಳು ಮಾತನಾಡುತ್ತಾರೆ ಎಂದು ಹೇಳಿ ಹೊರಟರು.
ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಸಹ ಜಾತಿಗಣತಿಯಲ್ಲಿ ಲೋಪ ಇದೆ, ಒಪ್ಪಲು ಸಾಧ್ಯವಿಲ್ಲ ಎಂದರೆ ಸಚಿವರಾದ ಚಲುವರಾಯಸ್ವಾಮಿ, ಜಾತಿ ಗಣತಿಯಲ್ಲಿ ಲೋಪ ಇದೆ, ಸರಿಪಡಿಸಲು ಸಿಎಂ ಗಮನಕ್ಕೆ ತರುತ್ತೇವೆ ಎಂದರು.
ಒಕ್ಕಲಿಗರ ಸಂಘದ ಸಭೆಯ ನಿರ್ಣಯ ಏನು?
– ಯಾವ ಕಾರಣಕ್ಕೂ ಕಾಂತರಾಜು ಕಮಿಟಿ ವರದಿ ಒಪ್ಪಬಾರದು. ಜಾತಿ ಜನಗಣತಿ ಮಾಡುವುದಾದರೆ ಹೊಸದಾಗಿ ಜಾತಿ ಆಧಾರಿತವಾಗಿ ಮಾಡಲಿ
– ಕಾಂತರಾಜು ವರದಿಯನ್ನು ಶೈಕ್ಷಣಿಕ, ಸಾಮಾಜಿಕ ಗಣತಿ ಅಂತ ಮಾತ್ರ ಒಪ್ಪಬಹುದು. ಸರ್ಕಾರ ಸಮಯದಾಯದ ಜೊತೆ ಮಾತನಾಡುವುದಾದ್ರೆ ಶ್ರೀಗಳ ಸಮ್ಮುಖದಲ್ಲಿ ಸಭೆ ನಡೆಸಲಿ.
– ಕಾಂಗ್ರೆಸ್‌ನ ಒಕ್ಕಲಿಗ ಶಾಸಕರು ಹಾಗೂ ಸಚಿವರು ಸರ್ಕಾರದ ಮಟ್ಟದಲ್ಲಿ ವಿರೋಧಿಸಬೇಕು. ಯಾವುದೇ ಪಕ್ಷ ಇರಲಿ ಸಮುದಾಯದ ಎಲ್ಲಾ ಶಾಸಕರು, ಸಂಸದರು ಒಂದಾಗಬೇಕು.
– ಜಾತಿ ಗಣತಿ ಅಂಕಿ ಅಂಶ ಬಿಡುಗಡೆ ಮಾಡುವುದಾದರೆ ಮೊದಲು ಸಮುದಾಯದ ಗಮನಕ್ಕೆ ತರಬೇಕು. ಹೋರಾಟ ಅನಿವಾರ್ಯವಾದರೆ ಪಕ್ಷಾತೀತವಾಗಿ ಎಲ್ಲರೂ ಸಮುದಾಯದ ಪರ ನಿಲ್ಲಬೇಕು.
Web Stories