ಬೆಂಗಳೂರು: ಜಾತಿಗಣತಿಗೆ (Caste Census) ಸಾಕಷ್ಟು ಆಕ್ಷೇಪ, ವಿರೋಧ ಎದ್ದಿದೆ. ಮತ್ತೊಂದು ಕಡೆ ಅವೈಜ್ಞಾನಿಕ, ಮನೆ ಮನೆಗೆ ಭೇಟಿ ಕೊಟ್ಟಿಲ್ಲ ಎನ್ನುವ ದೊಡ್ಡ ಆರೋಪ ಇದೆ. ‘ಪಬ್ಲಿಕ್ ಟಿವಿ’ (Public TV) ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿದೆ. ಜಾತಿಗಣತಿ ಸರ್ವೆಗೆ ಮನೆ ಮನೆಗೆ ಬಂದಿದ್ದರಾ ಎಂಬ ಬಗ್ಗೆ ಜನರು ಏನು ಹೇಳಿದ್ದಾರೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.
ಜಾತಿಗಣತಿ ಸರ್ವೆಗೆ ನಮ್ಮ ಮನೆಗೆ ಯಾರು ಕೂಡ ಬಂದಿಲ್ಲ. ನಾವು 50 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ. ಸರ್ವೆಗೆ ಯಾರೂ ಬಂದಿಲ್ಲ ಎಂದು ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು
ಮೂರು ವರ್ಷಗಳ ಹಿಂದೆ ಮನೆಗೆ ಬಂದು ಸರ್ವೆ ಮಾಡಿದ್ದರು. 10 ವರ್ಷಗಳ ಹಿಂದೊಮ್ಮೆ ನಾವು ಪಬ್ಲಿಕ್‌ನಲ್ಲಿದ್ದಾಗ ಬಂದು ಸರ್ವೆ ಮಾಡಿದ್ದರು ಎಂದು ಸರ್ವೆ ಆಗಿರುವ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಮ್ಮ ಮನೆಗೆ ಸರ್ವೆಗೆ ಯಾರೂ ಬಂದೇ ಇಲ್ಲ. ನಮ್ಮ ಜಾತಿಯೇ ಲೆಕ್ಕಕ್ಕೆ ಬಂದಿಲ್ಲ. ಕ್ಷತ್ರಿಯರು ಅನ್ನೋದೆ ಬಂದಿಲ್ಲ. ಯಾವ್ಯಾವ್ದೋ ಜಾತಿ ಲೆಕ್ಕ ಎಲ್ಲಾ ಹೇಳ್ತಾರೆ. ಹಾಗಾದ್ರೆ, ನಮ್ಮ ಜಾತಿಯೇ ಇಲ್ವಾ? ಇವರು ಜಾತಿಗಣತಿ ಮಾಡಿರೋದೆ ಗೊತ್ತಿಲ್ಲ ಎಂದು ಮಲ್ಲೇಶ್ವರಂನ ಮಹಿಳೆಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ
ಯಾರು ಕೂಡ ಬಂದಿಲ್ಲ. ಬಂದಿದ್ದರೆ ಅಲ್ವಾ ನೆನಪಿರೋದು. ಜಾತಿಗಣತಿ ಬಗ್ಗೆ ಚರ್ಚೆ ಆಗುತ್ತಿರುವುದು ಬೇಡದಿರುವ ಕೆಲಸ. ನಿಜ ಆಗಿದ್ದರೆ ಒಪ್ಪಿಕೊಳ್ಳಬಹುದು. ಎಲ್ಲರಿಗೂ ಗೊತ್ತು ಅದು ಸುಳ್ಳು ಅಂತಾ. ಯಾವುದೋ ನಂಬರ್ ಕೊಟ್ಟಿದ್ದಾರೆ. ಎಷ್ಟು ಕಾಗೆ ಇತ್ತು ಅನ್ನೋ ಬೀರ್‌ಬಲ್ ಕಥೆ ಥರ ಆಯ್ತು ಇದು ಎಂದು ಜಯನಗರ ನಿವಾಸಿಯೊಬ್ಬರು ಮಾತನಾಡಿದ್ದಾರೆ.
10 ವರ್ಷಗಳ ಹಿಂದೆ ಸರ್ವೆ ಮಾಡೋದಕ್ಕೆ ಬಂದಿದ್ದರು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ? ನಿಮ್ಮ ಜಾತಿ ಯಾವುದು ಅಂತಾ ಕೇಳಿದ್ದರು. ಅದು ಬಿಟ್ಟು ಬೇರೆ ಏನೂ ಕೇಳಿರಲಿಲ್ಲ ಎಂದು ಹಿಂದೆ ಜಾತಿಗಣತಿಗೆ ಬಂದಿದ್ದರೆಂದು ದಾವಣಗೆರೆ ಮಹಿಳೆಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?
ನಮ್ಮ ಮನೆಗೆ ಯಾರೂ ಬಂದಿಲ್ಲ. ಅದರ ಬಗ್ಗೆ ಗೊತ್ತು. ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ಇದು. ರಾಜಕೀಯವಾಗಿ ಮಾಡುತ್ತಿರುವ ತಂತ್ರವಿದು. ನಮ್ಮ ಸ್ನೇಹಿತರ ವಲಯದಲ್ಲೂ ಯಾರ ಮನೆಗೂ ಹೋಗಿಲ್ಲ ಅಂತಾನೇ ಹೇಳ್ತಿದ್ದಾರೆ. ಇವರ ಉದ್ದೇಶ ಏನು ಅಂತಾನೂ ಅರ್ಥ ಆಗ್ತಿಲ್ಲ ಎಂದು ಮತ್ತೊಬ್ಬ ಜಯನಗರ ನಿವಾಸಿ ಜಾತಿಗಣತಿ ಸರ್ವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಲೇಔಟ್‌ನಲ್ಲಿ 85 ಮನೆಗಳಿವೆ. ಜಾತಿಗಣತಿ ಸರ್ವೆಗೆ ಯಾರೂ ಬಂದಿಲ್ಲ. ನಮ್ಮ ಮನೆಗೂ ಒಬ್ಬರೂ ಕೂಡ ಬಂದಿಲ್ಲ ಎಂದು ಮೈಸೂರಿನ ನಿವಾಸಿಗಳು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ
ಒಬ್ಬರ ಮನೆಗೂ ಇಲ್ಲಿ ವಿಸಿಟ್ ಕೊಟ್ಟಿಲ್ಲ. ಸರ್ಕಾರದಿಂದ ಜಾತಿಗಣತಿ ಪ್ರಕಟ ಆದರೆ ಉಗ್ರ ಹೋರಾಟ ಆಗಬಹುದು. ಸರ್ಕಾರ ಇದನ್ನು ವಾಪಸ್ ತೆಗೆದುಕೊಳ್ಳಬೇಕು. ಸರ್ಕಾರ ತಮ್ಮ ಪರವಾಗಿ ಇರಲಿ ಅಂತಾ ಜಾತಿಗಣತಿ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ರಾಮನಗರ ನಿವಾಸಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಮಂಡ್ಯ, ಕೋಲಾರ, ಧಾರವಾಡ, ರಾಯಚೂರು, ಉಡುಪಿ ಹೀಗೆ ಅನೇಕ ಜಿಲ್ಲೆಗಳಲ್ಲಿ ಜಾತಿಗಣತಿ ಸರ್ವೆ ಆಗಿದೆಯಾ ಅಥವಾ ಇಲ್ಲವಾ ಎಂದು ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಮಾಡಿದೆ. ಕೆಲವರು ಸರ್ವೆಗೆ ಬಂದಿದ್ದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಬಂದಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.