ಬೆಂಗಳೂರು: ಮನೆ ಮನೆಗೆ ಹೋಗಿ ಜಾತಿ ಸಮೀಕ್ಷೆ (Caste Census) ಮಾಡುವಂತೆ ನಾವು ಸರ್ಕಾರಕ್ಕೆ ಒತ್ತಾಯ ಮಾಡ್ತೀವಿ ಎಂದು ಕಾಂಗ್ರೆಸ್ (Congress) ಶಾಸಕ ಬಾಲಕೃಷ್ಣ (Balakrishna) ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇಂದು ಜಾತಿಗಣತಿ ವರದಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಸಭೆ ಮಾಡಲು ಕರೆದಿದ್ದಾರೆ. ನಮ್ಮ ಅಭಿಪ್ರಾಯಗಳನ್ನ ಸಭೆಯಲ್ಲಿ ಹೇಳ್ತೀವಿ. ನಮ್ಮ ಸಮುದಾಯದ ತೀರ್ಮಾನ ಏನು ಮಾಡಬೇಕು ಅಂತ ನಿರ್ಧಾರ ಮಾಡಲು ಸಭೆ ಕರೆದಿದ್ದಾರೆ. ಸಮೀಕ್ಷೆಯಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, SC-ST ಅಂತ ಪ್ರಶ್ನೆ ಬರಲ್ಲ. ರಾಜ್ಯದಲ್ಲಿ ವಾಸ ಮಾಡೋ ಜನಸಂಖ್ಯೆ ಎಷ್ಟು ಇದೆ ಅಂತ ತೀರ್ಮಾನ ಮಾಡಬೇಕು. ಸಮೀಕ್ಷೆ ಬಗ್ಗೆ ಸರ್ಕಾರ ಇನ್ನು ಸ್ಪಷ್ಟ ನಿರ್ಧಾರ ಮಾಡಿಲ್ಲ. ಪ್ರತಿ ಮನೆಗೂ ಹೋಗಿ ಸಮೀಕ್ಷೆ ಮಾಡಿ ವರದಿ ಕೊಡಲಿ ಎನ್ನೋದು ನಮ್ಮ ಅಭಿಪ್ರಾಯ. ಪ್ರತಿ ಮನೆಗೆ ಹೋಗಿ ಸರ್ಕಾರ ಸರ್ವೆ ಮಾಡಬೇಕು. ಸಿಎಂ ಹಾಗೂ ಡಿಸಿಎಂಗೆ ಒತ್ತಾಯ ಮಾಡ್ತೀವಿ ಎಂದಿದ್ದಾರೆ.
ಸರ್ವೆ ಒಪ್ಪಲ್ಲ, ಹೋರಾಟ ಮಾಡ್ತೀವಿ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ಹೀಗೆ ಹೇಳೋದು ಸರಿಯಲ್ಲ. ಇಂತಹ ಹೇಳಿಕೆ ಕೊಡೋದು ಸರಿಯಲ್ಲ. ಅವರು ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ ಎಂದು ಹೇಳಬೇಕು. ಕುಮಾರಸ್ವಾಮಿ ಹೋರಾಟ ಮಾಡ್ತೀವಿ ಎಂದು ಹೇಳೋದು ಅರ್ಥವಿಲ್ಲ. ವರದಿ ಅಂಗೀಕಾರ ಮಾಡ್ತೀವಿ ಎಂದು ಸರ್ಕಾರ ಹೇಳಿಲ್ಲ. ವರದಿ ಎಲ್ಲಾ ಸಚಿವರಿಗೆ ಕೊಟ್ಡಿದ್ದಾರೆ. ಅದರಲ್ಲಿ ತಪ್ಪು ಇದ್ದರೆ ಅದನ್ನ ಸರಿಪಡಿಸೋ ಕೆಲಸ ಸರ್ಕಾರ ಮಾಡುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
- Advertisement3
- Advertisement
ಡಿಕೆಶಿ ಪೆನ್ನು ಪೇಪರ್ ಕೇಳಿ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ, ಕುಮಾರಸ್ವಾಮಿ ಅವರಿಗೆ ಕಣ್ಣು ಬಿಟ್ಟರೂ, ನಿದ್ರೆಯಲ್ಲೂ ಶಿವಕುಮಾರ್, ಸಿದ್ದರಾಮಯ್ಯ ಕಾಣ್ತಾರೆ. ಮೊಸರಲ್ಲಿ ಕಲ್ಲು ಹುಡುಕೋದು ಬಿಡಬೇಕು. ಏನಾದ್ರು ಅಭಿಪ್ರಾಯ ಇದ್ದರೆ ಹೇಳಬೇಕು. ಡಿಕೆಶಿಯವರಿಗೆ ಒಕ್ಕಲಿಗರೇನು ಹೆಚ್ಚು ಬೆಂಬಲ ನೀಡಿಲ್ಲ. ಕುಮಾರಸ್ವಾಮಿಯವರಿಗೆ (H.D Kumaraswamy) ಹೆಚ್ಚು ಬೆಂಬಲ ನೀಡಿದ್ದು, ಅವರು ಈ ಜನಾಂಗಕ್ಕೆ ಏನು ನ್ಯಾಯ ಕೊಟ್ಟಿದ್ದೀನಿ ಎಂದು ಆಲೋಚನೆ ಮಾಡಬೇಕು. ಇಂತಹ ಕ್ಷುಲ್ಲಕ ಹೇಳಿಕೆ ಕೊಟ್ಟು ರಾಜಕೀಯ ಬೆಳೆ ಬೇಯಿಸಿಕೊಳ್ಳೋದು ಕುಮಾರಸ್ವಾಮಿ ಬಿಡಲಿ ಎಂದು ಕಿಡಿಕಾರಿದ್ದಾರೆ.
ವೈಜ್ಞಾನಿಕವಾಗಿ ಸಮೀಕ್ಷೆ ಆಗಿದೆ ಎಂಬ ಜಯಪ್ರಕಾಶ್ ಹೆಗ್ಡೆ ಹೇಳಿರಬಹುದು. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಯಾವ ರೀತಿ ಸಮೀಕ್ಷೆ ಮಾಡಿದ್ದಾರೆ ಅಂತ ನಾವು ಸಭೆಯಲ್ಲಿ ತಿಳಿದುಕೊಳ್ತೀವಿ. ವೈಜ್ಞಾನಿಕ ಅಂದರೆ ಯಾವ ರೀತಿ ಎಂದು ತಿಳಿದುಕೊಳ್ತೀವಿ. ನಾವು ವರದಿ ನೋಡಿದ ಮೇಲೆ ವರದಿ ಒಪ್ಪಬೇಕಾ? ಬೇಡವಾ ಎಂದು ತೀರ್ಮಾನ ಮಾಡ್ತೀವಿ. ಇಂದಿನ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡ್ತೀವಿ. ಒಕ್ಕಲಿಗ ಸಂಘ ವಿರೋಧ ಮಾಡ್ತಿರೋ ವಿಚಾರ. ಒಬ್ಬರು ಪರ, ವಿರೋಧ ಮಾಡೋದು ಮುಖ್ಯ ಅಲ್ಲ. ಯಾಕೆ ವಿರೋಧ ಮಾಡಬೇಕು. ಸಂಪೂರ್ಣವಾಗಿ ಕೆಳ ಹಂತಕ್ಕೆ ಹೋಗಿ ಸಮೀಕ್ಷೆ ಮಾಡಬೇಕು ಅಂತ ಸರ್ಕಾರವನ್ನು ಒತ್ತಾಯ ಮಾಡ್ತೀವಿ ಎಂದಿದ್ದಾರೆ.