– ಕಾಂಗ್ರೆಸ್‌ನವರು ಬಾಯಿ ಮುಚ್ಚಿಕೊಂಡು ಇರಲಿ ಎಂದ ಡಿವಿಎಸ್
ಬೆಂಗಳೂರು: ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಲು ಕೇಂದ್ರ ಸರ್ಕಾರ ಜಾತಿಗಣತಿ (Caste Census) ಮಾಡುವ ಘೋಷಣೆ ಮಾಡಿದೆ. ಕಾಂಗ್ರೆಸ್ (Congress) ನಾಯಕರು ಈಗ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಡಿವಿ ಸದಾನಂದ ಗೌಡ (DV Sadananda Gowda) ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರದಿಂದ ಜಾತಿಗಣತಿ ಮಾಡೋ ಬಗ್ಗೆ ಘೋಷಣೆ ಮಾಡಿರೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಮಾಡಿರುವ ಜಾತಿಗಣತಿ ಸರಿಯಾಗಿ ಆಗಿಲ್ಲ. 100 ಮನೆಯಲ್ಲಿ 10 ಮನೆಗಳಿಗೂ ಇವರು ಹೋಗಿ ಜಾತಿಗಣತಿ ಮಾಡಿಲ್ಲ. ಕೇಂದ್ರ ಸರ್ಕಾರ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡಲು ಜಾತಿ ಗಣತಿ ಮಾಡುತ್ತಿದೆ. ಕೇಂದ್ರ ಸರ್ಕಾರ ಗಣತಿ ಮಾಡುವುದರಿಂದ ರಾಜ್ಯಗಳ ಜಾತಿಗಣತಿಗೆ ಇತಿಶ್ರೀ ಬೀಳುತ್ತದೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸಕ್ಕೆ ಈ ಜಾತಿಗಣತಿ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮನಗರ | ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಮನೆ – ಗೃಹೋಪಯೋಗಿ ವಸ್ತುಗಳು ಭಸ್ಮ
ರಾಹುಲ್ ಗಾಂಧಿ ಒತ್ತಾಯಕ್ಕೆ ಮಣಿದು ಮೋದಿ ಸರ್ಕಾರ ಜಾತಿಗಣತಿ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಹೇಳಿದ್ದು ಆಯಿತು. ಈಗ ಕಾಂಗ್ರೆಸ್ ಅವರು ಬಾಯಿ ಮುಚ್ಚಿಕೊಂಡು ಕೂತುಕೊಳ್ಳಲಿ. ಕಾಂಗ್ರೆಸ್ ಅವರು ಸರಿಯಾಗಿ ಜಾತಿಗಣತಿ ಮಾಡಿರಲಿಲ್ಲ. ಅದಕ್ಕೆ ರಾಹುಲ್ ಗಾಂಧಿ ಬೇರೆ ಸರ್ಟಿಫಿಕೇಟ್ ಕೊಡುತ್ತರೆ. ಈಗ ನಾವು ಮಾಡುತ್ತಿದ್ದೇವೆ, ಅವರು ಸುಮ್ಮನೆ ಇರಲಿ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಸುಹಾಸ್ ಹತ್ಯೆ ಕೇಸ್ – ಫಾಝಿಲ್ ಸಹೋದರನೇ ಪ್ರಮುಖ ಆರೋಪಿ