ತುಮಕೂರು: ದೇವಸ್ಥಾನದ ಹುಂಡಿ ಮುಟ್ಟಿದ ದೇಗುಲದ ಭದ್ರತಾ ಸಿಬ್ಬಂದಿಯ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ದೇವಸ್ಥಾನದ ಅರ್ಚಕನೋರ್ವನ ಬಂಧನವಾಗಿದೆ. ತುಮಕೂರು (Tumakuru) ಜಿಲ್ಲೆ ಕುಣಿಗಲ್ (Kunigal) ಠಾಣಾ ವ್ಯಾಪ್ತಿಯ ಬೆಟ್ಟದ ರಂಗಸ್ವಾಮಿ ದೇವಸ್ಥಾನದಲ್ಲಿ (Bettada Ranganathaswamy Temple) ಈ ಘಟನೆ ನಡೆದಿದೆ.
ಅರ್ಚಕ ರಾಕೇಶ್ ವಿರುದ್ಧ ದೇಗುಲದ ಭದ್ರತಾ ಸಿಬ್ಬಂದಿ ಪಾರ್ಥರಾಜು ಎಂಬುವವರು ದೂರು ನೀಡಿದ್ದರು. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ದಿನ ಮಧ್ಯಾಹ್ನ ಅರ್ಚಕ ರಾಕೇಶ್ ಕೋಲಿನಿಂದ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಭದ್ರತಾ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂಟ್ರೆಸ್ಟಿಂಗ್ ಕಳ್ಳತನ ಪ್ರಕರಣಗಳು – ಒಟ್ಟು 7 ಖದೀಮರ ಅರೆಸ್ಟ್!
ಅರ್ಚಕ ಕೋಲಿನಿಂದ ಭದ್ರತಾ ಸಿಬ್ಬಂದಿಗೆ ಹೊಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲಿ ನೀನು ಕುಳಿತುಕೊಳ್ಳುವಂತಿಲ್ಲ. ಇದು ಸರ್ಕಾರದ ದೇವಾಲಯ. ಇಲ್ಲಿಂದ ಹೋಗು ಎಂದು ಅರ್ಚಕ ಹೇಳಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ಆಧಾರದ ಮೇಲೆ ಅರ್ಚಕನನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: Photo Gallery | ಮಂಗಳೂರು ನವರಾತ್ರಿ ಉತ್ಸವ – ಶಾರದಾ ಮಾತೆಗೆ 6ನೇ ದಿನದ ಶೃಂಗಾರ