ನವದೆಹಲಿ: ಉಳಿತಾಯ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಇದ್ದ ಮಿತಿಯನ್ನು 24 ಸಾವಿರ ರೂ.ನಿಂದ 50 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಇಂದಿನಿಂದ ಉಳಿತಾಯ ಖಾತೆಯಿಂದ ವಾರಕ್ಕೆ ಗರಿಷ್ಠ 50 ಸಾವಿರ ರೂ. ಹಣವನ್ನು ವಿತ್‍ಡ್ರಾ ಮಾಡಿಕೊಳ್ಳಬಹುದು. ಅಲ್ಲದೆ ಮಾರ್ಚ್ 13 ರಿಂದ ಯಾವುದೇ ವಿತ್‍ಡ್ರಾ ಮಿತಿ ಇರುವುದಿಲ್ಲ ಅಂತಾ ಆರ್‍ಬಿಐ ಹೇಳಿದೆ.
2016ರ ನವೆಂಬರ್ 8ರಂದು 500 ಹಾಗೂ 1 ಸಾವಿರ ರೂ ನೋಟು ಬ್ಯಾನ್ ಆದ ಬಳಿಕ ಬ್ಯಾಂಕ್ ಹಾಗೂ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿತ್ತು. ಆರಂಭದಲ್ಲಿ 4,500 ರೂ. ನಂತರ 10 ಸಾವಿರ ರೂ. ಡ್ರಾ ಮಾಡಲು ಅನುಮತಿ ನೀಡಿದ್ದ ಆರ್‍ಬಿಐ ಈಗ ಈ ಮಿತಿಯನ್ನು 50 ಸಾವಿರ ರೂ. ಏರಿಸಿದೆ
ನಗದು ವ್ಯವಹಾರಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ದು 3 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವಿತ್‍ಡ್ರಾ ಮಾಡಿದವರಿಗೆ ಶೇ.100 ರಷ್ಟು ತೆರಿಗೆ ವಿಧಿಸುವ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದ್ದು ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.