ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Corporation Corruption Scam) ಸಂಬಂಧ ಸಚಿವ ನಾಗೇಂದ್ರ ತಲೆದಂಡಕ್ಕೆ ಒತ್ತಡ ಹೆಚ್ಚುತ್ತಿರುವ ಹೊತ್ತಲ್ಲೇ ಹತ್ತು ಹಲವು ಕಂಪನಿಗಳಿಗೆ ನಿಗಮದ 80 ಕೋಟಿ ರೂ.ಗಿಂತಲೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಆಗಿರುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಐಟಿ ಕಂಪನಿಗಳು, ಭದ್ರತಾ ಏಜೆನ್ಸಿಗಳು, ಡಿಟೆಕ್ಟಿವ್ ಏಜೆನ್ಸಿಗಳು ಮತ್ತು ಹಲವರ ವೈಯಕ್ತಿಕ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಜೆಪಿ (BJP) ಬಿಡುಗಡೆ ಮಾಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್ – ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ
ಕರ್ನಾಟಕ ಕೇಳುತ್ತಿದೆ
ಉತ್ತರಿಸಿ @siddaramaiah ನವರೇ…#ATMSarkara ದ ಖಜಾಂಚಿ ಆಗಿರುವ ತಾವು ದಲಿತರ 187 ಕೋಟಿ ಹಣವನ್ನು ನಕಲಿ ಖಾತೆಗಳ ಮೂಲಕ ತೆಲಂಗಾಣದ ಚುನಾವಣೆಗೆ ಕಳುಹಿಸಿ ಕೊಟ್ಟಿದ್ದು ಏಕೆ?
ಹಾಗೇ ತಮಿಳುನಾಡು, ಕೇರಳ, ವಯನಾಡು ಮತ್ತು ದೆಹಲಿ ಹೆಡ್ ಆಫೀಸ್‌ಗೆ ಕಳುಹಿಸಿ ಕೊಟ್ಟ ಹಣವೆಷ್ಟು? ಸೃಷ್ಟಿಸಿದ ನಕಲಿ ಖಾತೆಗಳೆಷ್ಟು?… pic.twitter.com/KkC2pFdfIM
— BJP Karnataka (@BJP4Karnataka) June 1, 2024
ಇದರೊಂದಿಗೆ ಯೂನಿಯನ್ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾದ ಹಣವನ್ನು ತಡೆಹಿಡಿದು ಮೂಲ ಖಾತೆಗೆ ಮರಳಿಸುವಂತೆ ಕೋರಿ ಆರ್‌ಬಿಎಲ್ ಬ್ಯಾಂಕ್ ಎಂಡಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಎಸಿಎಸ್ ಎನ್.ಮಂಜುನಾಥ್ ಪ್ರಸಾದ್ ಬರೆದ ಪತ್ರವನ್ನು ಬಿಜೆಪಿ ರಿಲೀಸ್ ಮಾಡಿದೆ. ಈ ಹಣ ವರ್ಗಾವಣೆ ನಕಲಿ ದಾಖಲೆಗಳನ್ನು ಆಧರಿಸಿದೆ ಎಂದು ಎಸಿಎಸ್ ಈ ಪತ್ರದಲ್ಲಿ ವಿವರಿಸಿದ್ದಾರೆ.
ಅಶೋಕ್ ವಾಗ್ದಾಳಿ:
ಅಕ್ರಮವಾಗಿ ವರ್ಗವಾಗಿರುವ ವಾಲ್ಮೀಕಿ ನಿಗಮದ ಹಣ ದೆಹಲಿ ಕಾಂಗ್ರೆಸ್ ನಾಯಕರನ್ನು ತಲುಪಿದೆ. ಇದೆಲ್ಲಾ ಸಿಎಂಗೆ ಗೊತ್ತಿದ್ದೆ ನಡೆದಿದೆ ಎಂಬ ಗಂಭೀರ ಆರೋಪವನ್ನು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಮಾಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪ್ರಕರಣ ಹೇಸಿಗೆ ಹುಟ್ಟಿಸಿದೆ, ಕ್ಷಮೆಗೆ ಅರ್ಹರಲ್ಲ – ಪ್ರಜ್ವಲ್‌ಗೆ ಶಿಕ್ಷೆ ಆಗಲೇಬೇಕು ಎಂದ ಜೋಶಿ
ದಲಿತರ 187 ಕೋಟಿ ರೂ. ತೆಲಂಗಾಣದಲ್ಲಿ ನಕಲಿ ಖಾತೆಗಳಿಗೆ ಜಮೆ ಆಗಿದೆ. ನಕಲಿ ಖಾತೆಯ ವಾರಸುದಾರರು ಸಚಿವ @BNagendraINC ಸಂಬಂಧಿಗಳಾ? ಅಥವಾ @siddaramaiah ನವರ ಬಂಧುಗಳಾ?@siddaramaiah ಅವರೇ,
ಕರ್ನಾಟಕ ಕೇಳುತ್ತಿದೆ
ಉತ್ತರಿಸುವಿರಾ?#ResignNagendra#CongressLootsKarnataka#LootiBrothers pic.twitter.com/ze0jLjBvY3
— BJP Karnataka (@BJP4Karnataka) June 1, 2024
ಈ ನಡುವೆ ವಾಲ್ಮೀಕಿ ನಿಗಮದ ಹಗರಣಕ್ಕೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಅಲ್ಲಿ ತೋರಿಸಿರುವ ಬ್ಯಾಂಕ್ ಖಾತೆ ನಮ್ಮ ಸಂಸ್ಥೆಯದ್ದಲ್ಲ ಎಂದು ಹ್ಯಾಪಿಯೆಸ್ಟ್ ಮೈಂಡ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ.
8 ಕಡೆ ಎಸ್‌ಐಟಿ ದಾಳಿ:
ತನಿಖಾ ತಂಡ ರಚನೆಯಾದ ಎರಡು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ ಎಸ್‌ಐಟಿ ತಂಡ ಶನಿವಾರ ರಾಜ್ಯದ ವಿವಿಧೆಡೆ ಏಕಕಾಲಕ್ಕೆ 8 ಕಡೆ ದಾಳಿ ನಡೆಸಿದೆ. ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿರುವ ಕೊಡಿಗೇಹಳ್ಳಿಯ ಪದ್ಮನಾಭ ಮನೆಯಲ್ಲಿ ಹಾಗೂ ದಾವಣಗೆರೆಯ ಪರಶುರಾಮ್ ಮತ್ತವರ ಸ್ನೇಹಿತರ ಮನೆಯಲ್ಲಿ ಎಸ್‌ಐಟಿ ದಾಳಿ ನಡೆಸಿದೆ.