ಗುಡಿಸಲಿಗೆ ಬೆಂಕಿ- ಹೊಸ ಮನೆ ಕಟ್ಟಲು ತಂದಿಟ್ಟಿದ್ದ ನಗದು, ಅಡಿಕೆ, ರಾಗಿ, ದವಸ ಧಾನ್ಯ ಭಸ್ಮ

Public TV
0 Min Read
TMK FIRE AV 5

ತುಮಕೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಗುಡಿಸಲು ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದಿಂಡಗದಹಳ್ಳಿಯಲ್ಲಿ ನಡೆದಿದೆ.

TMK FIRE AV 4

ರೈತ ಮಹಾಲಿಂಗಯ್ಯ ಎಂಬವರಿಗೆ ಸೇರಿದ ಗುಡಿಸಲು ಇದಾಗಿದೆ. ಹೊಸ ಮನೆ ಕಟ್ಟಲು ತಂದಿರಿಸಿದ್ದ 3 ಲಕ್ಷ ರೂ. ನಗದು, 5 ಕ್ವಿಂಟಾಲ್ ಅಡಿಕೆ, ರಾಗಿ ಸೇರಿದಂತೆ ದವಸ ಧಾನ್ಯ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

TMK FIRE AV 3

ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪಂಚನಾಮೆ ನಡೆಸಿದ್ದಾರೆ. ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TMK FIRE AV 2

Share This Article
Leave a Comment

Leave a Reply

Your email address will not be published. Required fields are marked *