ಬೆಂಗಳೂರು: ತವರು ಮನೆಗೆ ಹಣ ಕಳುಹಿಸಿ, ದರೋಡೆಯಾಗಿದೆ ಎಂದು ನಾಟಕವಾಡಿದ್ದ ಪಿಎಸ್‌ಐ ಪತ್ನಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಅಶೋಕನಗರ ಠಾಣಾ ಪಿಎಸ್‌ಐ ಆಗಿರುವ ಪುಟ್ಟಸ್ವಾಮಿ ಅವರ ಮನೆಯಲ್ಲಿ 12 ಲಕ್ಷ ಹಣ ಹಾಗೂ ಚಿನ್ನಾಭರಣ ರಾಬರಿ ಆಗಿದೆ ಎಂದು ಜು.11 ರಂದು ದೂರು ಬಂದಿತ್ತು. ಪುಟ್ಟಸ್ವಾಮಿ ಪತ್ನಿ ಹಾಗೂ ಪತ್ನಿ ಸಹೋದರ ನೀಡಿದ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ವಂಚನೆ – ದುಬೈ ಮೂಲದ ಐವರು ಅರೆಸ್ಟ್
ಇದೀಗ, ಪೊಲೀಸರು ಅಡಿಷನಲ್ ಕಮಿಷನರ್ ನೇತೃತ್ವದಲ್ಲಿ ಹಲವು ದಿನಗಳ ಕಾಲ ತನಿಖೆ ನಡೆಸಿ ಇದೊಂದು ಸುಳ್ಳು ರಾಬರಿ ಪ್ರಕರಣ ಎಂದು ವರದಿ ನೀಡಿದ್ದಾರೆ. ಪಿಎಸ್‌ಐ ಪತ್ನಿ ಹಣ ಮತ್ತು ಚಿನ್ನಾಭರಣವನ್ನ ತವರು ಮನೆಗೆ ನೀಡಿ, ಗಂಡನಿಂದ ವಿಷಯ ಮರೆಮಾಚಲು ಈ ರೀತಿ ರಾಬರಿ ಕತೆ ಕಟ್ಟಿದ್ದರು ಎಂದು ತಿಳಿದು ಬಂದಿದೆ.
ಸುಳ್ಳು ದೂರು ನೀಡಿದ ಪಿಎಸ್‌ಐ ಪತ್ನಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಪಿಎಸ್‌ಐ ಮೇಲೂ ಶಿಸ್ತು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೀಗೆ ಸುಳ್ಳು ಕಥೆ ಕಟ್ಟಿ ಹಣ ದರೋಡೆ ನಾಟವಾಡಿದ ಪೊಲೀಸಪ್ಪನ ಕುಟುಂಬದ ಮೇಲೆ ಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ. ಇದನ್ನೂ ಓದಿ: ನಾಗಮಂಗಲದ ತೋಟದ ಮನೆಯಲ್ಲಿ ಭ್ರೂಣ ಹತ್ಯೆ ದಂಧೆ – ಮೂವರು ಅರೆಸ್ಟ್