ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೆಲ ಬಿಜೆಪಿ ಶಾಸಕರು ನಕಲಿ ವೀಡಿಯೋವನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು, ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಕೋಮು ಸೌಹಾರ್ದತೆ ಕದಡುವ ಉದ್ದೇಶದಿಂದ ರಾಹುಲ್ ಗಾಂಧಿ ಅವರ ನಕಲಿ ವೀಡಿಯೋವನ್ನು ಬಿಜೆಪಿಯ ಸಂಸದರಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಸುಬ್ರತ್ ಪಾಠಕ್ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
Advertisement
Advertisement
ಛತ್ತೀಸ್‍ಗಢದ ಬಿಲಾಸ್‍ಪುರದಲ್ಲಿ ಸಂಸದರು ಮತ್ತು ಇತರ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪಕ್ಷದ ಪ್ರಚಾರ ತಂಡದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ. ದೆಹಲಿ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ಅವರ ವಿರುದ್ಧ ದೂರು ದಾಖಲಿಸಿದೆ ಎಂದು ಪವನ್ ಖೇರಾ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಉಸ್ತುವಾರಿ ಸುಪ್ರಿಯಾ ಶ್ರೀನಾಟೆ ಸುದ್ದಿಗಾರರಿಗೆ ತಿಳಿಸಿದರು.
Advertisement
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದು, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದ ನಾಯಕರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳಬೇಕೆ ಎಂದು ಒತ್ತಾಯಿಸಿದ್ದಾರೆ.
Advertisement
ಸುಪ್ರಿಯಾ ಶ್ರೀನಾಟೆ ಅವರು ರಾಜ್ಯವರ್ಧನ್ ಸಿಂಗ್ ರಾಥೋಡ್ ವಿರುದ್ಧ ದೇಶದ್ರೋಹದ ಆರೋಪ ಮಾಡಿದರು. ದೇಶದಲ್ಲಿ ಕೋಮು ಸೌಹಾರ್ದತೆ ಕದಡುವ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವರೊಬ್ಬರು ಸುಳ್ಳು ಸುದ್ದಿ ಹಬ್ಬಿಸಲು ಯತ್ನಿಸಿದರೆ, ಅದು ದೇಶದ್ರೋಹಕ್ಕೆ ಸಮ ಎಂದು ಆರೋಪಿಸಿದ್ದಾರೆ.
ಸುಪ್ರಿಯಾ ಶ್ರೀನಾಟೆ ಈ ಕುರಿತು ಮಾತನಾಡಿದ್ದು, ಈ ಜನರು ದೇಶಾದ್ಯಂತ ದ್ವೇಷದ ಬೆಂಕಿಯನ್ನು ಏಕೆ ಹರಡುತ್ತಿದ್ದಾರೆ? ಸಂಸದರು ಮತ್ತು ಮಾಜಿ ಸಚಿವರನ್ನು ಏಕೆ ಟ್ರೋಲ್ ಮಾಡುತ್ತಿದ್ದಾರೆ ಎಂದು ನಾವು ಪ್ರಧಾನಿಯನ್ನು ಕೇಳುತ್ತೇವೆ. ಸುಳ್ಳು ಸುದ್ದಿಗಳನ್ನು ಹರಡುವವರಿಗೆ ಬಿಜೆಪಿಯಲ್ಲಿ ಬಡ್ತಿ ಸಿಗುತ್ತದೆ. ದೆಹಲಿ ಗಲಭೆಯ ಸಮಯದಲ್ಲಿ ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವರು ಏನು ಹೇಳಿದರು ಮತ್ತು ಅವರಿಗೆ ಬಡ್ತಿ ನೀಡಲಾಗಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.