ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ (Air India Flight) ಮಹಿಳೆಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಮೂತ್ರವಿಸರ್ಜನೆ (Pee) ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್ ಇಂಡಿಯಾಗೆ 30 ಲಕ್ಷ ರೂ. ದಂಡವನ್ನು (Fine) ವಿಧಿಸಿದೆ.
Advertisement
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಏರ್ ಇಂಡಿಯಾ ವಿಮಾನಕ್ಕೆ 30 ಲಕ್ಷ ರೂ. ದಂಡ ವಿಧಿಸಿದ್ದಲ್ಲದೇ ಅಂದು ಘಟನೆ ನಡೆದ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಕೂಡಾ 3 ತಿಂಗಳುಗಳ ಕಾಲ ಅಮಾನತುಗೊಳಿಸಿದೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ
Advertisement
ಈ ಘಟನೆ 2022ರ ನವೆಂಬರ್ 26ರಂದು ನಡೆದಿದೆ. ಅಂದು ವಿಮಾನದ ವಾಚ್ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿರುವುದಾಗಿ ತಿಳಿಸಿದೆ.
Advertisement
Advertisement
ಘಟನೆ ನಡೆದ ತಿಂಗಳ ಬಳಿಕ ಸಂತ್ರಸ್ತ ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಘಟನೆ ಬಗ್ಗೆ ಪತ್ರ ಬರೆದಿದ್ದರು. ಬಳಿಕ ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ. ಘಟನೆಯ ಆರೋಪಿ ಶಂಕರ್ ಮಿಶ್ರಾನನ್ನು 2 ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ 4 ತಿಂಗಳ ಕಾಲ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಕಿರಿಯ ಪುತ್ರನ ನಿಶ್ಚಿತಾರ್ಥ ಸಡಗರ – ಸ್ಟೇಜ್ ಮೇಲೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k