ಶಿವಮೊಗ್ಗ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣದಲ್ಲಿ ಸಿಇಟಿ ಪರೀಕ್ಷೆಯ (CET Exam) ಅಧಿಕಾರಿ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಏಪ್ರಿಲ್ 16 ರಂದು ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ (Brahmins Students) ಜನಿವಾರವನ್ನು ಕತ್ತರಿಸಿದ್ದಾರೆ. ಆದರೆ ಪರೀಕ್ಷಾ ವಿಚಾರದಲ್ಲಿ ಜನಿವಾರ ಕತ್ತರಿಸಬೇಕೆಂಬ ನಿಯಮವಿಲ್ಲ. ಕಾಲೇಜಿನ ಭದ್ರತಾ ಸಿಬ್ಬಂದಿ ಜನಿವಾರ ಕತ್ತರಿಸಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ನೋ ಎಂಟ್ರಿ – ಬೀದರ್ ವಿದ್ಯಾರ್ಥಿಗೆ ನ್ಯಾಯ ಕೊಡಿಸಲು ಕೆಇಎ ಸಿದ್ಧತೆ
ಜನಿವಾರ ತೆಗೆಸಿದ್ದರಿಂದ ಬ್ರಾಹ್ಮಣ ಸಮುದಾಯಕ್ಕೆ ಅಪಮಾನವಾಗಿದೆ. ಇದರಿಂದ ಸಿಇಟಿ ಪರೀಕ್ಷೆಯ ಭದ್ರತೆ ನೋಡಿಕೊಳ್ಳುತ್ತಿರುವ ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕಳೆದ ರಾತ್ರಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂದಿದ್ದು ತಪ್ಪು, ಅಂತಹ ಯಾವುದೇ ಮಾರ್ಗಸೂಚಿ ಇಲ್ಲ: ಕೆಇಎ